ಮೋನಾಲಿಸಾ ರುದ್ರಾಕ್ಷಿ ಮಾಲೆ ಮಾರುತ್ತಿದ್ದಳು, ಈಗ ಕಲಮಾ ಪಠಿಸುತ್ತಿದ್ದಾಳೆ !

ಅಂತರರಾಷ್ಟ್ರೀಯ ಹಿಂದೂ ಪರಿಷತ್ತಿನ ಅಧ್ಯಕ್ಷರಾದ ಡಾ. ಪ್ರವೀಣ ತೊಗಾಡಿಯಾರವರಿಂದ ಮೋನಾಲಿಸಾ-ಫರಮಾನ ವಿವಾಹದ ಕುರಿತು ಹೇಳಿಕೆ

(ಕಲಮಾ ಎಂದರೆ ಅಲ್ಲಾನನ್ನು ಸ್ತುತಿಸುವ ವಾಕ್ಯಗಳು)

ಭೋಪಾಲ (ಮಧ್ಯಪ್ರದೇಶ) – ಮೋನಾಲಿಸಾ ಮತ್ತು ಫರಮಾನ ವಿವಾಹದ ಕುರಿತಾದ ವಿವಾದವು ಮತ್ತಷ್ಟು ತೀವ್ರಗೊಳ್ಳುತ್ತಿದೆ. ಮೋನಾಲಿಸಾ ಭೋಸಲೆಯು ರಾಜ್ಯದ ಖರಗೊನ ಜಿಲ್ಲೆಯ ಮಹೇಶ್ವರ ನಿವಾಸಿಯಾಗಿದ್ದಾಳೆ. ಅವಳು ಕೇರಳದಲ್ಲಿ ಫರಮಾನನನ್ನು ವಿವಾಹವಾಗಿದ್ದಾಳೆ. ಈ ವಿವಾಹದ ನಂತರ ಮೋನಾಲಿಸಾ ವಿವಾದದ ಕೇಂದ್ರಬಿಂದುವಾಗಿದ್ದಾಳೆ. ಭಾಜಪ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳು ಈ ಪ್ರಕರಣದಲ್ಲಿ ‘ಲವ್ ಜಿಹಾದ್’ನ ಆರೋಪ ಮಾಡಿವೆ. ಅಂತಾರಾಷ್ಟ್ರೀಯ ಹಿಂದೂ ಪರಿಷತ್ತಿನ ಅಧ್ಯಕ್ಷರಾದ ಡಾ. ಪ್ರವೀಣ ತೊಗಾಡಿಯಾರವರು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುವಾಗ, ‘ಹಿಂದೆ ಮೋನಾಲಿಸಾ ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿದ್ದಳು, ಈಗ ಕಲಮಾ ಪಠಿಸುತ್ತಿದ್ದಾಳೆ, ಇದು ಅಯೋಗ್ಯವಾಗಿದೆ’ ಎಂದು ಹೇಳಿದರು.

ಹೋಗಲೇ ಬಿಡದಿರುವಾಗ ಹಿಂದೂ ಧರ್ಮಕ್ಕೆ ಮರಳಿ ತರುವ ಪ್ರಶ್ನೆಯೇ ಇಲ್ಲ !

ಮೋನಾಲಿಸಾ ಸೇರಿದಂತೆ ಕೆಲವು ಹುಡುಗಿಯರ ಹಿಂದೂ ಧರ್ಮದಲ್ಲಿ ಪುನರ್ಪ್ರವೇಶದ ಕುರಿತು ಮಾತನಾಡಿದ ಅವರು, ನಾವು ಹುಡುಗಿಯರನ್ನು ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಹೋಗಲು ಬಿಡದಿದ್ದಾಗ, ಅವರನ್ನು ಮರಳಿ ತರುವ ಅಗತ್ಯವೇ ಬರುವುದಿಲ್ಲ, ಎಂದು ಹೇಳಿದರು.
ಈ ಪ್ರಕರಣದಲ್ಲಿ ಭಾಜಪದ ನೇತಾರರು ಹಾಗೂ ಮಾಜಿ ಸಚಿವರಾದ ಉಷಾ ಠಾಕೂರರವರು, ಈ ವಿವಾಹವು ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳುತ್ತಾ, ‘ಇದೊಂದು ವ್ಯವಸ್ಥಿತ ಸಂಚು’ ಎಂದು ಆರೋಪಿಸಿದಲ್ಲದೆ, ‘ಇಂತಹ ಮಗಳು ಯಾರಿಗೂ ಸಿಗಬಾರದು’ ಎಂದೂ ಹೇಳಿದ್ದಾರೆ.

ವಂಚನೆಯಾಗಿದ್ದರೆ ಕಾನೂನಿನ ಅನುಸಾರ ಕ್ರಮಕೈಗೊಳ್ಳಲಿ ! – ಕಾಂಗ್ರೆಸ್

ಕಾಂಗ್ರೆಸ್ ವಕ್ತಾರರಾದ ಅಭಿನವ ಬರೌಲಿಯಾರವರು ಮಾತನಾಡಿ, ರಾಜ್ಯ ಮತ್ತು ದೇಶದಲ್ಲಿ ಭಾಜಪ ಸರಕಾರವಿರುವಾಗ ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದರೆ, ಅದರ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ, ಎಂದು ಹೇಳಿದರು. ಕಾಂಗ್ರೆಸ್ ಶಾಸಕ ಆರಿಫ ಮಸೂದರವರು ಕೂಡ, ಸಂಬಂಧಿತ ಯುವತಿಯು ಪ್ರೌಢಳಾಗಿದ್ದು ಅವಳಿಗೆ ತನ್ನ ಇಚ್ಛೆಯಂತೆ ವಿವಾಹವಾಗುವ ಅಧಿಕಾರವಿದೆ; ಆದರೆ ಒಂದು ವೇಳೆ ಯಾವುದೇ ವಂಚನೆ ನಡೆದಿದ್ದರೆ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು, ಎಂದು ಹೇಳಿದರು.

ಏನಿದು ಪ್ರಕರಣ ?

ಮೋನಾಲಿಸಾ ಭೋಸಲೆಯು ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದಳು. ಆಗ ಅವಳ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದವು. ಅವಳ ಸೌಂದರ್ಯದಿಂದಾಗಿ ಅವಳಿಗೆ ಒಂದು ಚಲನಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆನಂತರ ಅವಳು ಫರಮಾನನನ್ನು ವಿವಾಹವಾದಳು. ಈ ವಿವಾಹವು ಕೇರಳಮ್ ರಾಜ್ಯದಲ್ಲಿ ನಡೆಯಿತು. ಅವರ ವಿವಾಹದಲ್ಲಿ ಕಮ್ಯುನಿಸ್ಟ್ ಪಕ್ಷದ ಕೆಲವು ನಾಯಕರೂ ಉಪಸ್ಥಿತರಿದ್ದರು. ಆನಂತರ ಇದು ‘ಲವ್ ಜಿಹಾದ್’ನ ಪ್ರಕರಣ ಎಂದು ಹಿಂದುತ್ವನಿಷ್ಠರು ಟೀಕಿಸಿದ್ದರು, ಆದರೆ ಮೋನಾಲಿಸಾ ಈ ಆರೋಪಗಳನ್ನು ನಿರಾಕರಿಸಿದ್ದಳು.