|
(ಎ.ಐ.ಯು.ಡಿ.ಎಫ್. ಎಂದರೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್)
(‘ಮಿಯಾ’ ಎಂದರೆ ಬಾಂಗ್ಲಾದೇಶಿ ಮುಸ್ಲಿಂ)

ದಿಸ್ಪುರ್ (ಅಸ್ಸಾಂ) – ಅಸ್ಸಾಂನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎ.ಐ.ಯು.ಡಿ.ಎಫ್. ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಅವರು, ‘ಚುನಾವಣೆಯ ನಂತರ ಅಸ್ಸಾಂನಲ್ಲಿ ‘ಮಿಯಾ’ (ಬಾಂಗ್ಲಾದೇಶಿ ಮುಸ್ಲಿಂ) ಸಮುದಾಯದ ಪ್ರಭಾವ ಹೆಚ್ಚಾಗಲಿದೆ’, ಎಂದು ಹೇಳಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು, ಕಳೆದ ೫ ವರ್ಷಗಳಲ್ಲಿ ತಮ್ಮ ಸರಕಾರವು ಬಾಂಗ್ಲಾದೇಶಿ ಮಿಯಾಗಳ ಕೈಕಾಲು ಮುರಿದಿದೆ ಮತ್ತು ಮುಂದಿನ ೫ ವರ್ಷಗಳಲ್ಲಿ ಅವರ ಬೆನ್ನೆಲುಬನ್ನೇ ಮುರಿಯಲಾಗುವುದು ಎಂದು ಹೇಳಿದ್ದರು. ಮುಖ್ಯಮಂತ್ರಿಗಳ ಈ ಹೇಳಿಕೆಯ ಹಿನ್ನೆಲೆಯಲ್ಲಿ ಅಜ್ಮಲ್ ಅವರು ಮೇಲಿನಂತೆ ಹೇಳಿಕೆ ನೀಡಿದ್ದು, ಅಸ್ಸಾಂನಲ್ಲಿ ಬಾಂಗ್ಲಾದೇಶಿ ಮುಸ್ಲಿಮರಿಗೆ ಮುಕ್ತ ಅವಕಾಶ ನೀಡುವ ತಮ್ಮ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ.
ಅಜ್ಮಲ್ ಮುಂದೆ ಮಾತನಾಡಿ, ಚುನಾವಣಾ ಫಲಿತಾಂಶ ಬಂದ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಲಿದೆ. ಮುಂದಿನ ದಿನಗಳಲ್ಲಿ ಮಿಯಾ ಸಮುದಾಯವು ಅಸ್ಸಾಂನಲ್ಲಿ ಮೇಲುಗೈ ಸಾಧಿಸಲಿದೆ ಮತ್ತು ಅವರದೇ ದಾದಾಗಿರಿ ನಡೆಯಲಿದೆ. ಹಾಗೆಯೇ ಹಿಮಂತ ಸರಮಾ ಅವರ ಪ್ರಭಾವ ಕೊನೆಗೊಳ್ಳುವುದು ಮತ್ತು ಅವರು ಅಸ್ಸಾಂ ಬಿಟ್ಟು ನವದೆಹಲಿಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein