
ತಿಥಿ
ಕೆಲವು ಪಂಚಾಂಗಗಳ ಪ್ರಕಾರ ಆಶ್ವಯುಜ ಕೃಷ್ಣ ಚತುರ್ದಶಿಯು ಹನುಮಂತನ ಜನ್ಮತಿಥಿ ಯಾಗಿದೆ ಮತ್ತು ಇನ್ನೂ ಕೆಲವರ ಪ್ರಕಾರ ಚೈತ್ರ ಹುಣ್ಣಿಮೆಯು ಹನುಮಂತನ ಜನ್ಮತಿಥಿಯಾಗಿದೆ. ಕರ್ನಾಟಕದಲ್ಲಿ ಹನುಮಂತ ಜಯಂತಿಯನ್ನು ಚೈತ್ರ ಹುಣ್ಣಿಮೆಯಂದು ಆಚರಿಸುತ್ತಾರೆ.
ಮಹತ್ವ
ಹನುಮಂತ ಜಯಂತಿಯಂದು ಹನುಮಂತತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ತಿಥಿಯಂದು ‘ಶ್ರೀ ಹನುಮತೇ ನಮಃ |’ ನಾಮಜಪ, ಹಾಗೆಯೇ ಹನುಮಂತನ ಇತರ ಉಪಾಸನೆಯನ್ನು ಭಾವಪೂರ್ಣವಾಗಿ ಮಾಡುವುದರಿಂದ ಹನುಮಂತತತ್ತ್ವದ ಲಾಭವು ಹೆಚ್ಚೆಚ್ಚು ದೊರೆಯಲು ಸಹಾಯವಾಗುತ್ತದೆ.
ಉತ್ಸವವನ್ನು ಆಚರಿಸುವ ಪದ್ಧತಿ
ಈ ದಿನ ಹನುಮಂತನ ದೇವಸ್ಥಾನದಲ್ಲಿ ಸೂರ್ಯೋದಯಕ್ಕೆ ಮೊದಲೇ ಕೀರ್ತನೆಯು (ಹರಿಕಥೆ) ಪ್ರಾರಂಭವಾಗುತ್ತದೆ. ಸೂರ್ಯೋದಯಕ್ಕೆ ಕೀರ್ತನೆಯು ಮುಕ್ತಾಯಗೊಳ್ಳುತ್ತದೆ ಮತ್ತು ಹನುಮಂತನ ಜನ್ಮವಾಗುತ್ತದೆ. ಅನಂತರ ಹನುಮಂತನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಎಲ್ಲರಿಗೂ ಪ್ರಸಾದವೆಂದು ಶುಂಠಿಚೂರ್ಣವನ್ನು ಕೊಡುತ್ತಾರೆ.
‘ಹನುಮಾನ ಜನ್ಮೋತ್ಸವ’ ಬದಲು ‘ಹನುಮಾನ ಜಯಂತಿ’ ಎನ್ನುವುದೇ ಯೋಗ್ಯ !
‘ಹನುಮಂತನು ಚಿರಂಜೀವಿಯಾಗಿದ್ದರಿಂದ, ಅವನ ಜಯಂತಿಯನ್ನು ಆಚರಿಸುವ ಬದಲು ಜನ್ಮೋತ್ಸವವನ್ನು ಆಚರಿಸಬೇಕು’ ಎಂಬ ಆಶಯವಿರುವ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಈ ಕುರಿತು ಪರಾತ್ಪರ ಗುರು ಪಾಂಡೆ ಮಹಾರಾಜರು ಶಾಸ್ತ್ರೋಕ್ತ ರೀತಿಯಲ್ಲಿ ನೀಡಿದ ಸ್ಪಷ್ಟೀಕರಣ ಹೀಗಿದೆ.
‘ಜಯಂತಿ’ ಎಂದರೆ ದೇವರ ಜನ್ಮದಿನ !
‘ಹನುಮಾನ’ ಎಂದರೆ ಶಾಶ್ವತ ಚೈತನ್ಯಶಕ್ತಿ. ಆದ್ದರಿಂದ ಈ ಶಕ್ತಿ ಚಿರಂಜೀವಿ. ಈ ಶಕ್ತಿ ಅಂಜನಿದೇವಿಯ ಮೂಲಕ ಪ್ರಕಟವಾಯಿತು. ಈ ಶಕ್ತಿಯು ಪ್ರಕಟವಾಗುತ್ತಿದ್ದಂತೆಯೇ, ಸೂರ್ಯನನ್ನು ಪಡೆಯಲು ಹನುಮಂತನು ಹಾರಿದನು. ರಾಮಾಯಣ ಕಾಲದಲ್ಲಿ ನಿರ್ದಿಷ್ಟ ಉದ್ದೇಶಕ್ಕಾಗಿ ‘ಹನುಮಾನ’ ಅಥವಾ ‘ಮಾರುತಿ’ ಎಂಬ ಹೆಸರಿನಿಂದ ಈ ಶಕ್ತಿ ಕಾರ್ಯನಿರ್ವಹಿಸಿತು. ಹಾಗಾಗಿ ‘ಹನುಮಾನ ಜಯಂತಿ’ ಎನ್ನುವುದೇ ಯೋಗ್ಯ ! ಇದುವರೆಗೂ ಜನಪ್ರಿಯವಾದ ಪರಂಪರೆಯೂ ಇದೇ ಆಗಿದೆ (ಉಲ್ಲೇಖ : ಶಾಲಾ ಸಂಸ್ಕೃತ ಶಬ್ದಕೋಶ, ಸಂಪಾದಕರು – ಶ್ರೀ. ಮಿಲಿಂದ ದಂಡವತೆ, ಪ್ರಕಾಶಕರು – ವರದಾ ಬುಕ್ಸ್, ಪುಣೆ – ೧೬)
ಹನುಮಂತತತ್ತ್ವದ ಸ್ಪಂದನ ಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿ

ಮಧ್ಯದ ಚುಕ್ಕಿಯಿಂದ ಎಂಟೂ ದಿಕ್ಕುಗಳೆಡೆಗೆ ೪ ಚುಕ್ಕಿಗಳನ್ನು ಇಡಬೇಕು. ರಂಗೋಲಿಗಳಲ್ಲಿ ಸಾತ್ತ್ವಿಕ ಬಣ್ಣಗಳನ್ನು ತುಂಬಿಸಬೇಕು. (ಹೆಚ್ಚಿನ ಮಾಹಿತಿಗಾಗಿ ಓದಿ – ಸನಾತನದ ಕಿರುಗ್ರಂಥ ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ‘ಸಾತ್ತ್ವಿಕ ರಂಗೋಲಿಗಳು’)
ಕೋಟಿ ಕೋಟಿ ನಮನಗಳು
ಕೋಟಿ ಕೋಟಿ ನಮನಗಳು
ಕೋಟಿ ಕೋಟಿ ನಮನಗಳು
ಆದಿ ಶಂಕರಾಚಾರ್ಯರ ಕೈಲಾಸಗಮನ ದಿನ ( ೩೦.೪.೨೦೨೬ )
ಪ.ಪೂ. ಸತ್ಯಸಾಯಿ ಬಾಬಾ ಪುಣ್ಯಸ್ಮರಣೆ (೨೪.೪.೨೦೨೬)
ಶ್ರೀ ವ್ಯಾಸರಾಜರ ಜಯಂತಿ, ವೈಶಾಖ ಶುಕ್ಲ ಸಪ್ತಮಿ (೨೩.೪.೨೦೨೬)