ಉಡುಪಿ: ಕ್ರೈಸ್ತರ ಮಹೋತ್ಸವವನ್ನು ವಿರೋಧಿಸಿದ ಹಿಂದುತ್ವನಿಷ್ಠರು ಪೊಲೀಸರ ವಶಕ್ಕೆ Udupi Hindutva Organization Oppose Christian Peace Festival

ಹಿಂದೂ ಜಾಗರಣ ವೇದಿಕೆ ವಿರೋಧ : ಮಹೋತ್ಸವದ ಸ್ಥಳದಲ್ಲಿ ವಿರೋಧಿಸುತ್ತಿರುವ ‘ಹಿಂದೂ ಜಾಗರಣ ವೇದಿಕೆ’ಯ ಕಾರ್ಯಕರ್ತರು

ಉಡುಪಿ – ಉಡುಪಿ ನಗರದಲ್ಲಿ ತಮಿಳುನಾಡಿನ ಕ್ರೈಸ್ತ ಮಿಷನರಿ ಮೋಹನ್ ಸಿ. ಲಾಜರಸ್ ಅವರು ಆಯೋಜಿಸಿದ್ದ ‘ಸಮಾಧಾನ ಮಹೋತ್ಸವ’ಕ್ಕೆ ವಿರೋಧ ವ್ಯಕ್ತಪಡಿಸಿದ ‘ಹಿಂದೂ ಜಾಗರಣ ವೇದಿಕೆ’ಯ ಕಾರ್ಯಕರ್ತರನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ‘ಹಿಂದೂ ಜಾಗರಣ ವೇದಿಕೆ’ಯ ದಕ್ಷಿಣ ಪ್ರಾಂತೀಯ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ ಶೆಟ್ಟಿ, ಮಹೇಶ ಬೈಲೂರು, ವಿಜಯ ಕೊಡವೂರು ಸೇರಿದಂತೆ ೩೮ ಕಾರ್ಯಕರ್ತರನ್ನು ವಶಕ್ಕೆ ಪಡೆದು ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. (ಕ್ರೈಸ್ತ ಮಿಷನರಿಗಳ ಇಂತಹ ಕಾರ್ಯಕ್ರಮಗಳಲ್ಲಿ ಬಲವಂತದ ಮತಾಂತರದ ಸಂಚು ಅಡಗಿರುತ್ತದೆ ಎಂಬ ನಗ್ನ ಸತ್ಯವು ಪೊಲೀಸರ ಗಮನಕ್ಕೆ ಬರುವುದಿಲ್ಲವೇ? – ಸಂಪಾದಕರು)

ಮೋಹನ್ ಸಿ. ಲಾಜರಸ್ ಅವರ ಮೇಲೆ ಹಿಂದೂ ದೇವಾಲಯಗಳನ್ನು ಅವಹೇಳನಕಾರಿ ಟೀಕಿಸಿದ ಆರೋಪವಿದೆ. ಇದರೊಂದಿಗೆ ತಮಿಳುನಾಡಿನ ಕೊಯಮತ್ತೂರು, ನಾಗರಕೋವಿಲ್ ಸೇರಿದಂತೆ ವಿವಿಧೆಡೆ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಅವರ ‘ಜೀಸಸ್ ರಿಡೀಮ್ಸ್’ ಎಂಬ ಸಂಸ್ಥೆಯು ವಿದೇಶಿ ಹಣವನ್ನು ದುರುಪಯೋಗಪಡಿಸಿಕೊಂಡು ಕೋಮು ಸೌಹಾರ್ದತೆಯನ್ನು ಕೆಡಿಸುತ್ತಿದೆ ಎಂಬ ಕಾರಣಕ್ಕೆ ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗಷ್ಟೇ ಈ ಸಂಸ್ಥೆಯ ವಿದೇಶಿ ದೇಣಿಗೆ ಪರವಾನಗಿಯನ್ನು ಅಮಾನತುಗೊಳಿಸಿದೆ ಎಂದು ಶ್ರೀಕಾಂತ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಪಾದಕೀಯ ನಿಲುವು

ಹಿಂದೂದ್ವೇಷಿ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಇದಕ್ಕಿಂತ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ ?