ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬನಿಗೆ ಗಾಯ

ನೂಹ್ (ಹರಿಯಾಣ) – ಹರಿಯಾಣದ ನೂಹ್ ಜಿಲ್ಲೆಯ ವಾಜಿದ್‌ಪುರ ಗ್ರಾಮದಲ್ಲಿ ಮಾರ್ಚ್ 10 ರಂದು ಮೇಘಾಲಯ ಪೊಲೀಸರು ಎಟಿಎಂ (ಸ್ವಯಂಚಾಲಿತ ನಗದು ವಿತರಣಾ ಯಂತ್ರ) ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಹುಲ್ ಖಾನ್ ಎಂಬವನನ್ನು ಬಂಧಿಸಿದರು. ಬಂಧನದ ನಂತರ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ನೀಡಿದ ನಂತರ, ಪೊಲೀಸರು ಆತನನ್ನು ಮೇಘಾಲಯಕ್ಕೆ ಕರೆದೊಯ್ಯಲಾರಂಭಿಸಿದರು.
🚨 Mob Attacks Police to Free ATM Theft Accused in Haryana
In Nuh, Haryana, a Muslim mob allegedly attacked the police to free Rahul Khan, an interstate ATM theft accused, from custody.
👮♂️ Meghalaya Police had come to arrest the accused when the mob surrounded the team and… pic.twitter.com/T9ejBzNbuP
— Sanatan Prabhat (@SanatanPrabhat) March 12, 2026
ಪೊಲೀಸರ ವಾಹನವು ಸಿಕರಾವಾ ಗ್ರಾಮದ ಬಳಿ ತಲುಪುತ್ತಿದ್ದಂತೆ, ಅಲ್ಲಿ ಮೊದಲೇ ಹೊಂಚು ಹಾಕಿ ಕುಳಿತಿದ್ದ ಮುಸ್ಲಿಂ ಗುಂಪೊಂದು ಪೊಲೀಸ್ ವಾಹನವನ್ನು ಸುತ್ತುವರಿಯಿತು. ನೆರೆದ ಜನರು ವಾಹನವನ್ನು ತಡೆಯಲು ಮತ್ತು ಪಲ್ಟಿ ಮಾಡಲು ಪ್ರಯತ್ನಿಸಿದರು. ಅಲ್ಲದೇ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಲಾಯಿತು ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಯಿತು.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಪ್ರತಿದಾಳಿಯಾಗಿ ಗುಂಡು ಹಾರಿಸಿದರು. ಈ ಗುಂಡಿನ ದಾಳಿಯಲ್ಲಿ ತಾರಿಫ್ ಎಂಬ ಯುವಕ ಗಾಯಗೊಂಡಿದ್ದು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯ ನಂತರ ಪಿನಂಗ್ವಾ ಪೊಲೀಸ್ ಠಾಣೆಯ ಪೊಲೀಸರು ಈ ಪ್ರಕರಣದಲ್ಲಿ 12 ವ್ಯಕ್ತಿಗಳು ಸೇರಿದಂತೆ ಇತರ ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈಗ ವಿಡಿಯೋ ಮತ್ತು ಇತರ ಪುರಾವೆಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ.
ಸಂಪಾದಕೀಯ ನಿಲುವುಹಲವು ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಪೊಲೀಸರು ಮುಸ್ಲಿಂ ಆರೋಪಿಯನ್ನು ಬಂಧಿಸಲು ಹೋದಾಗ, ಪೊಲೀಸರ ಮೇಲೆ ದಾಳಿ ನಡೆಸುವ ಘಟನೆಗಳು ಪದೇ-ಪದೇ ನಡೆಯುತ್ತಿವೆ. ಈ ಬಗ್ಗೆ ಮುಸ್ಲಿಂ ಪ್ರೇಮಿ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮುಂತಾದವುಗಳು ಎಂದಿಗೂ ಬಾಯಿ ಬಿಡುವುದಿಲ್ಲ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !