
ನವಿ ಮುಂಬಯಿ – ಇಲ್ಲಿನ ಕೊಪರ್‌ಖೈರಣೇ ಪ್ರದೇಶದ ಸೆಕ್ಟರ್ ೨ರಲ್ಲಿ ಇರುವ ವಿದ್ಯಾಭವನ ಕಟ್ಟಡದಲ್ಲಿ ಮಾರ್ಚ್ ೫ರ ಸಂಜೆ ಒಂದು ಮನೆಯ ಸ್ಲ್ಯಾಬ್ (ಮೇಲ್ಚಾವಣಿ) ಏಕಾಏಕಿ ಕುಸಿದುಬಿತ್ತು. ಆ ಸಮಯದಲ್ಲಿ ಅಲ್ಲಿ ಟ್ಯೂಷನ್ ತರಗತಿ ನಡೆಯುತ್ತಿತ್ತು ಮತ್ತು ಶಿಕ್ಷಕಿ ಹಾಗೂ ವಿದ್ಯಾರ್ಥಿಗಳು ಅಲ್ಲಿದ್ದರು. ಈ ಘಟನೆದಲ್ಲಿ ಮನೀಷ್ ಮ್ಹಸೆ (ವಯಸ್ಸು ೯ ವರ್ಷ) ಮೃತನಾದನು; ಶಿಕ್ಷಕಿ ಹಾಗೂ ೧೧ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಿಕ್ಷಕಿ ಶ್ಯಾಮಲಿ ಚೌಧರಿ (ವಯಸ್ಸು ೫೩ ವರ್ಷ) ಅವರು ವಿದ್ಯಾರ್ಥಿಗಳಿಗೆ ಟ್ಯೂಷನ್ ನಡೆಸುತ್ತಿದ್ದರು. ಮೇಲ್ಚಾವಣಿ ಕುಸಿದ ಪರಿಣಾಮ ಎಲ್ಲರೂ ಅವಶೇಷಗಳಡಿ ಸಿಲುಕಿಕೊಂಡರು. ಅಗ್ನಿಶಾಮಕ ದಳವು ಅವಶೇಷಗಳನ್ನು ತೆರವುಗೊಳಿಸಿತು. ಸ್ಥಳೀಯ ನಿವಾಸಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ನವಿ ಮುಂಬಯಿಯ ಮಹಾಪೌರ ಸುಜಾತಾ ಪಾಟೀಲ್ ಅವರು ಗಾಯಾಳುಗಳ ಕುಟುಂಬಗಳಿಗೆ ಸಾಂತ್ವನ ಹೇಳಿ, ಸರಿಯಾದ ಚಿಕಿತ್ಸೆಯನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಈ ಕಟ್ಟಡವು ಅಪಾಯಕರ ಕಟ್ಟಡಗಳ ಪಟ್ಟಿಯಲ್ಲಿ ಇರಲಿಲ್ಲ. ಆದ್ದರಿಂದ ಅಪಘಾತದ ಕಾರಣ ತಿಳಿಯಲು ಮಹಾನಗರ ಪಾಲಿಕೆ ಆಯುಕ್ತರು ಕಟ್ಟಡದ ರಚನಾ ಪರಿಶೀಲನೆ (ಸ್ಟ್ರಕ್ಚರಲ್ ಆಡಿಟ್) ನಡೆಸಲು ಆದೇಶಿಸಿದ್ದಾರೆ. ಪ್ರಸ್ತುತ ಸಂಪೂರ್ಣ ಕಟ್ಟಡವನ್ನು ಖಾಲಿ ಮಾಡಲಾಗಿದೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !