ಮುಂಬಯಿನಲ್ಲಿ ಹಣ್ಣುಗಳಿಗೆ ಇಲಿ ವಿಷ ಹಚ್ಚುತ್ತಿದ್ದ ಇಬ್ಬರು ಹಣ್ಣು ಮಾರಾಟಗಾರರ ಬಂಧನ !

ಇಲಿಗಳಿಂದ ಹಣ್ಣುಗಳನ್ನು ರಕ್ಷಿಸಲು ಕಂಡುಕೊಂಡಿದ್ದರು ಈ ಉಪಾಯ

ಮುಂಬಯಿ – ಮಾಲಾಡ್‌ನಲ್ಲಿ ಹಣ್ಣುಗಳಿಗೆ ಇಲಿ ವಿಷ ಅಂದರೆ ‘ರೆಟಿನಾಲ್’ ಹಚ್ಚುತ್ತಿದ್ದ ಇಬ್ಬರು ಹಣ್ಣು ಮಾರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಮನೋಜ ಕುಮಾರ್ ಕೇಸರ್ವಾನಿ ಮತ್ತು ಬಿಪಿನ್ ಕೇಸರ್ವಾನಿ ಬಂಧಿತರು. ಪೊಲೀಸರು ಸಂಬಂಧಿತ ಅಂಗಡಿಗಳನ್ನು ಸೀಲ್ ಮಾಡಿದ್ದಾರೆ. ಇಲಿಗಳಿಂದ ಹಣ್ಣುಗಳನ್ನು ಸಂರಕ್ಷಿಸುವ ನೆಪದಲ್ಲಿ ಇವರಿಬ್ಬರು ಈ ರೀತಿಯ ಕೃತ್ಯ ಎಸಗುತ್ತಿದ್ದರು.
ಸ್ಥಳೀಯ ನಿವಾಸಿ ಕುಣಾಲ್ ಸಾಳುಂಕೆ ಅವರು ಈ ಬಗ್ಗೆ ಮಾಲಾಡ್ ಪೊಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ವಿಷ ಹಚ್ಚುತ್ತಿರುವ ದೃಶ್ಯವನ್ನು ಸಾಳುಂಕೆ ಅವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋವನ್ನು ಪೊಲೀಸರಿಗೆ ಸಾಕ್ಷಿಯಾಗಿ ನೀಡಲಾಗಿತ್ತು. ಆರೋಪಿಗಳು ವಿಷ ಹಚ್ಚುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

  • ಮಾರಾಟಗಾರರು ಈ ಹಣ್ಣನ್ನು ಇದುವರೆಗೆ ಮಾರಾಟ ಮಾಡಿದ ಯಾರಿಗಾದರೂ ತೊಂದರೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು !
  • ಈ ರೀತಿಯಾಗಿ ಯಾರಾದರೂ ಏನನ್ನಾದರೂ ಸಿಂಪಡಿಸಿ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಬಹುದು. ಅಪರಾಧದ ಭಯದಿಂದ ಯಾರೂ ಸಾಮಾನ್ಯವಾಗಿ ಇಂತಹ ಕೃತ್ಯ ಎಸಗುವುದಿಲ್ಲ ಎಂಬುದು ನಿಜ, ಆದರೆ ಸರಕಾರಿ ಮಟ್ಟದಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಯಾವುದೇ ಸಂವೇದನಾಶೀಲ ನಾಗರಿಕರಿಗೆ ಅನಿಸಿದರೆ, ಆ ಬಗ್ಗೆಯೂ ವಿಚಾರ ಮಾಡಲೇಬೇಕು !