ಬುಡಕಟ್ಟು ಜನಾಂಗದ ಭೂಮಿಯನ್ನು ಅತಿಕ್ರಮಣ ಮಾಡಿದ್ದರ ವಿರುದ್ಧ ಉಪವಾಸ ಕುಳಿತವರನ್ನು ಬಂಧಿಸಲಾಗಿದೆ ಎಂಬ ತಪ್ಪು ತಿಳುವಳಿಕೆ

ಹಾಮ್ರೇನ್ (ಆಸ್ಸಾಂ) – ಆಸ್ಸಾಂನ ಪಶ್ಚಿಮ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಭೂಮಿಯ ಹಳೆಯ ವಿವಾದವು ಹಿಂಸಾತ್ಮಕ ತಿರುವು ಪಡೆದಿದೆ. ಇದರಿಂದಾಗಿ ಪ್ರತಿಭಟನಾಕಾರರು ಭಾಜಪ ಸ್ಥಳೀಯ ನಾಯಕ ಮತ್ತು ‘ಕಾರ್ಬಿ ಆಂಗ್ಲಾಂಗ್ ಸ್ವಾಯತ್ತ ಮಂಡಳಿ’ಯ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ತುಲಿರಾಮ ರೊಂಗ್ಹಾಂಗ್ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಬಲಪ್ರಯೋಗ ಮಾಡಿದರು. ಇದರಲ್ಲಿ ಕನಿಷ್ಠ ೩ ಜನರು ಗಾಯಗೊಂಡಿದ್ದಾರೆ.
೧. ಕಳೆದ ೧೫ ದಿನಗಳಿಂದ ಪೆಲಾಂಗ್‌ಪಿ ಪ್ರದೇಶದಲ್ಲಿ ೯ ಮಂದಿ ಮೀಸಲು ಭೂಮಿಯ ಮೇಲಿನ ಅತಿಕ್ರಮಣ ತೆರವುಗೊಳಿಸುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರ ಆರೋಗ್ಯ ಹದಗೆಟ್ಟಿದ್ದರಿಂದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಈ ಸಮಯದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಇತರ ಪ್ರತಿಭಟನಾಕಾರ ಬುಡಕಟ್ಟು ಜನಾಂಗದವರಲ್ಲಿ ತಪ್ಪು ತಿಳುವಳಿಕೆ ಉಂಟಾಯಿತು. ಇದರಿಂದಾಗಿ ಆಕ್ರೋಶ ಭುಗಿಲೆದ್ದಿತು.
೨. ಕಾರ್ಬಿ ಆಂಗ್ಲಾಂಗ್ ಇದು ಬುಡಕಟ್ಟು ಪ್ರಾಬಲ್ಯದ ಜಿಲ್ಲೆಯಾಗಿದ್ದು, ಇದು ಸಂವಿಧಾನದ ಆರನೇ ಅನುಸೂಚಿಯ ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ದೊಡ್ಡ ಪ್ರದೇಶವು ಕೇವಲ ಹುಲ್ಲುಗಾವಲಿಗಾಗಿ ಮೀಸಲಾಗಿದೆ. ಈ ಭೂಮಿಯನ್ನು ಬುಡಕಟ್ಟು ಜನಾಂಗದವರಲ್ಲದ ಜನರು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಸಂಘಟನೆಗಳು ಅನೇಕ ದಿನಗಳಿಂದ ಅವರನ್ನು ಹೊರಹಾಕುವಂತೆ ಒತ್ತಾಯಿಸುತ್ತಿವೆ. ಅದಕ್ಕಾಗಿಯೇ ಈ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಯುತ್ತಿತ್ತು.
೩. ಮೂಲತಃ ಈ ಪ್ರಕರಣವು ನ್ಯಾಯಾಲಯದಲ್ಲಿ ಇರುವುದರಿಂದ ಸರಕಾರ ಅಥವಾ ‘ಕಾರ್ಬಿ ಆಂಗ್ಲಾಂಗ್ ಸ್ವಾಯತ್ತ ಮಂಡಳಿ’ ನೇರವಾಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ರೊಂಗ್ಹಾಂಗ್ ಸ್ಪಷ್ಟಪಡಿಸಿದ್ದಾರೆ.
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ : Champat Rai Resignation
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ