Speak In Mother Tongue : ಪೋಷಕರು ಮನೆಯಲ್ಲಿ ಮಕ್ಕಳೊಂದಿಗೆ ಮಾತೃಭಾಷೆಯಲ್ಲೇ ಮಾತಾಡಬೇಕು!

ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಮನವಿ

ಅಮಿತ್ ಶಾ

ಅಗರ್ತಲಾ (ತ್ರಿಪುರಾ) – ಮನೆಯಲ್ಲಿ ಮಕ್ಕಳೊಂದಿಗೆ ಅವರ ಮಾತೃಭಾಷೆಯಲ್ಲಿ ಸಂವಾದ ನಡೆಸಿದರೆ ಅವರ ಸಂಸ್ಕೃತಿ, ಸಂಪ್ರದಾಯ ಮತ್ತು ಇತಿಹಾಸದೊಂದಿಗೆ ಹೆಚ್ಚು ನಿಕಟ ಸಂಬಂಧವಿರುತ್ತದೆ. ಮಕ್ಕಳು ತಮ್ಮ ಮಾತೃಭಾಷೆಯ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಿರಲು ಪೋಷಕರು ಮನೆಯಲ್ಲಿ ಅದೇ ಭಾಷೆಯನ್ನು ಮಾತನಾಡುವುದು ಅಗತ್ಯವಾಗಿದೆ. ಮನೆಯಲ್ಲಿನ ಸಂಭಾಷಣೆಯು ಮಾತೃಭಾಷೆಯಲ್ಲಿರದಿದ್ದರೆ, ಮಕ್ಕಳು ತಮ್ಮ ಭಾಷಿಕ ಮತ್ತು ಸಾಂಸ್ಕೃತಿಕ ಮೂಲಗಳಿಂದ ದೂರವಾಗಬಹುದೆಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಇಲ್ಲಿ ನಡೆದ ರಾಜಭಾಷಾ ಸಮ್ಮೇಳನದಲ್ಲಿ ಮಾರ್ಗದರ್ಶನ ನೀಡಿದರು.

ಗೃಹಸಚಿವ ಶಾ ಅವರು ಮುಂದೆ ಮಾತನಾಡುತ್ತಾ, ಭಾಷೆ ಮತ್ತು ಲಿಪಿಯ ಬಳಕೆಯ ಬಗ್ಗೆ ರಾಜಕೀಯ ಮಾಡುವುದನ್ನು ತಪ್ಪಿಸಬೇಕು. ಭಾಷೆಯು ಮಕ್ಕಳ ಆಲೋಚನಾ ಶಕ್ತಿ, ಸ್ವಾಭಿಮಾನ ಮತ್ತು ಸಾಂಸ್ಕೃತಿಕ ಗುರುತಿನ ಪ್ರಾಥಮಿಕ ಸಾಧನವಾಗಿರುವುದರಿಂದ ಮಾತೃಭಾಷೆಯನ್ನು ಉಳಿಸಿಕೊಳ್ಳಬೇಕು. ಪ್ರಾಥಮಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲೇ ಕಲಿಯುವುದಕ್ಕೆ ಸರಕಾರ ಒತ್ತು ನೀಡುತ್ತಿದೆ, ಅದರಿಂದ ಭಾಷೆ ಮತ್ತು ಸಂಪ್ರದಾಯಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಶಾ ಹೇಳಿದರು.