ವಸತಿ ಭೂಮಿಯಲ್ಲಿ ಅಕ್ರಮ ಚರ್ಚ್ ನಿರ್ಮಿಸಿರುವ ಆರೋಪ!

ಗೋದಾವರಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ‘ಕಲ್ವರಿ ಚರ್ಚ್ ಫೌಂಡೇಶನ್’ ಎಂಬ ಕ್ರೈಸ್ತ ಮಿಷನರಿ ಸಂಘಟನೆಯು ಕೇವಲ ವಸತಿ ಕಟ್ಟಡಗಳನ್ನು ನಿರ್ಮಿಸಲು ಅನುಮತಿ ಇರುವ ಭೂಮಿಯಲ್ಲಿ ಒಂದು ದೊಡ್ಡ ಚರ್ಚ್ ನಿರ್ಮಿಸಿರುವುದು ಬೆಳಕಿಗೆ ಬಂದಿದೆ. ‘ಲೀಗಲ್ ರೈಟ್ಸ್ ಪ್ರೊಟೆಕ್ಷನ್ ಫೋರಂ’ (‘ಎಲ್.ಆರ್.ಪಿ.ಎಫ್.’) ಈ ‘ಕಲ್ವರಿ ಚರ್ಚ್ ಫೌಂಡೇಶನ್’ ವಸತಿ ಪರವಾನಗಿಯನ್ನು ಚರ್ಚ್ ಸಂಕೀರ್ಣ ನಿರ್ಮಿಸಲು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದೆ. ಈ ಅನಧಿಕೃತ ನಿರ್ಮಾಣದ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ‘ಎಲ್.ಆರ್.ಪಿ.ಎಫ್.’ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದೆ.
೧. ದೂರಿನಲ್ಲಿ ಆರೋಪಿಸಿರುವಂತೆ, ವಸತಿ ಗೃಹಗಳನ್ನು ನಿರ್ಮಿಸುವ ಬದಲಿಗೆ ‘ಕಲ್ವರಿ ಚರ್ಚ್ ಫೌಂಡೇಶನ್’ ದೊಡ್ಡ ಚರ್ಚ್ ನಿರ್ಮಿಸಿದೆ ಮತ್ತು ಸಾರ್ವಜನಿಕ ಸಭೆಗಳು ಹಾಗೂ ಕ್ರಿಸ್ಮಸ್ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಾರಂಭಿಸಿದೆ. ಕೇವಲ ವಸತಿ ಉದ್ದೇಶಕ್ಕಾಗಿ ಅನುಮತಿ ಇದ್ದ ಭೂಮಿಯನ್ನು ಸಾರ್ವಜನಿಕ ಪ್ರಾರ್ಥನಾ ಸಭೆಯ ಸ್ಥಳವನ್ನಾಗಿ ಪರಿವರ್ತಿಸಲಾಗಿದೆ.
೨. ‘ಎಲ್.ಆರ್.ಪಿ.ಎಫ್.’ ಪ್ರಧಾನ ಕಾರ್ಯದರ್ಶಿ ಎ.ಎಸ್. ಸಂತೋಷ್ ಅವರು, ಕ್ರೈಸ್ತ ಮಿಷನರಿಗಳು ಕಾನೂನು ನಿಯಮಗಳನ್ನು ನಿರ್ಲಕ್ಷಿಸಿ ಆಕ್ರಮಣಕಾರಿ ವಿಸ್ತರಣೆ ಮಾಡುತ್ತಿವೆ, ಹಾಗೂ ಅವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿದರೆ ಅದನ್ನು ‘ಧಾರ್ಮಿಕ ಗುರಿ’ ಎಂದು ಹೇಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೂರು ನೀಡುತ್ತಾರೆಂದು ಆರೋಪಿಸಿದ್ದಾರೆ.
೩. ಭಾಗ್ಯನಗರದ (ಹೈದರಾಬಾದ್) ‘ಕಲ್ವರಿ ಚರ್ಚ್’ ಸಂಸ್ಥಾಪಕ ಹಾಗೂ ಪಾದ್ರಿ ಪಿ. ಸತೀಶ್ ಕುಮಾರ್ ಈ ಚರ್ಚ್ ಸಂಸ್ಥೆಯ ನೇತೃತ್ವ ವಹಿಸಿದ್ದಾರೆ. ಈ ಸಂಸ್ಥೆಯು ‘ಕಲ್ವರಿ ಬೈಬಲ್ ಕಾಲೇಜು’, ‘ಕಲ್ವರಿ ಆಸ್ಪತ್ರೆ’ ಮತ್ತು ‘ಕಲ್ವರಿ ಶಾಲೆ’ಗಳನ್ನು ನಡೆಸುತ್ತಿದೆ. ಈ ಸಂಸ್ಥೆಯು ಆಂಧ್ರಪ್ರದೇಶ ಸೇರಿದಂತೆ ‘ಅಂತರಾಷ್ಟ್ರೀಯ ಕ್ರೈಸ್ತ ವಲಯದಲ್ಲಿ ಹೆಚ್ಚಿನ ಪ್ರಭಾವ ಹೊಂದಿದೆ.
ಸಂಪಾದಕೀಯ ನಿಲುವು
|
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”