Air India Crash : ಅಪಘಾತದ ಹೊಣೆಯನ್ನು ಪೈಲಟ್ ಮೇಲೆ ಹೊರಿಸುತ್ತಿರುವ ಇಟಲಿ ಪತ್ರಿಕೆಯ ದಾವೆಗಳು ಸುಳ್ಳು ಮತ್ತು ನಿರಾಧಾರ ! – ಭಾರತ

ಏರ್ ಇಂಡಿಯಾ ವಿಮಾನ ಅಪಘಾತ ಪ್ರಕರಣ

ನವ ದೆಹಲಿ – ಜೂನ್ 2025 ರಲ್ಲಿ ನಡೆದ ‘ಏರ್ ಇಂಡಿಯಾ’ ವಿಮಾನ ಅಪಘಾತದ ಬಗ್ಗೆ ಇಟಲಿಯ ಪ್ರಸಿದ್ಧ ಪತ್ರಿಕೆ ‘ಕೊರಿಯರ್ ಡೆಲ್ಲಾ ಸೆರಾ’ ಒಂದು ಸ್ಫೋಟಕ ದಾವೆಯನ್ನು ಮಾಡಿದೆ. ‘ಈ ಅಪಘಾತವು ತಾಂತ್ರಿಕ ದೋಷದಿಂದ ಸಂಭವಿಸಿದ್ದಲ್ಲ, ಬದಲಾಗಿ ಪೈಲಟ್ ಉದ್ದೇಶಪೂರ್ವಕವಾಗಿ ಇಂಜಿನ್ ಸ್ವಿಚ್ ಆಫ್ ಮಾಡಿದ್ದರಿಂದ ಸಂಭವಿಸಿದೆ’ ಎಂದು ಪತ್ರಿಕೆ ಹೇಳಿದೆ; ಆದರೆ ಭಾರತದ ‘ವಿಮಾನ ಅಪಘಾತ ತನಿಖಾ ಸಂಸ್ಥೆ’ ಅಂದರೆ ‘ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಶನ್ ಬ್ಯೂರೋ’ (‘AAIB’) ಈ ದಾವೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಇದನ್ನು ತಪ್ಪು ಮತ್ತು ಕೇವಲ ತರ್ಕ ಆಧಾರಿತ ಎಂದು ಕರೆದಿದೆ. ಭಾರತ ಸರಕಾರದ ಪ್ರಕಾರ, ತನಿಖೆಯು ಇನ್ನೂ ನಡೆಯುತ್ತಿದೆ ಮತ್ತು ಪುರಾವೆಗಳಿಲ್ಲದೆ ಇಂತಹ ತೀರ್ಮಾನಗಳಿಗೆ ಬರುವುದು ಸರಿಯಲ್ಲ.

1. ಇಟಲಿಯ ಪತ್ರಿಕೆಯ ವರದಿಯಲ್ಲಿ ಅನಾಮಧೇಯ ಮೂಲಗಳ ಆಧಾರದ ಮೇಲೆ ಆಘಾತಕಾರಿ ದಾವೆಗಳನ್ನು ಮಾಡಲಾಗಿದೆ. ಈ ವರದಿಯಲ್ಲಿ ವಿಮಾನದ ಕಮಾಂಡರ್ ಕ್ಯಾಪ್ಟನ್ ಸುಮೀತ್ ಸಬರ್ವಾಲ್ ಅವರನ್ನು ಮುಖ್ಯ ಶಂಕಿತ ಎಂದು ಹೆಸರಿಸಲಾಗಿದ್ದು, ಅವರ ಮಾನಸಿಕ ಆರೋಗ್ಯದ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಎತ್ತಲಾಗಿದೆ.

2. ‘AAIB’ ಈ ಅಂತರಾಷ್ಟ್ರೀಯ ವರದಿಗಳ ಬಗ್ಗೆ ಕಠಿಣ ನಿಲುವು ತಳೆದಿದ್ದು, ಅಪಘಾತದ ತನಿಖೆಯನ್ನು ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ ಸಂಪೂರ್ಣ ವೈಜ್ಞಾನಿಕ ಪಾರದರ್ಶಕತೆಯೊಂದಿಗೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ತನಿಖೆಯು ಇನ್ನೂ ಅಂತಿಮ ತೀರ್ಮಾನಕ್ಕೆ ಬಾರದಿರುವುದರಿಂದ ಯಾವುದೇ ವ್ಯಕ್ತಿ ಅಥವಾ ಪೈಲಟ್ ಅನ್ನು ದೋಷಿ ಎಂದು ನಿರ್ಧರಿಸುವುದು ಅವಸರದ ಮತ್ತು ತಪ್ಪಾದ ನಿರ್ಧಾರವಾಗುತ್ತದೆ.

3. ಸಂಸ್ಥೆಯ ಪ್ರಕಾರ, ಪ್ರಾಥಮಿಕ ವರದಿಯಲ್ಲಿ ಕೇವಲ ಆರಂಭಿಕ ತಾಂತ್ರಿಕ ವಿವರಗಳನ್ನು ನೀಡಲಾಗಿತ್ತು ಮತ್ತು ಅದರಲ್ಲಿ ಯಾರಿಗೂ ಹೊಣೆಗಾರರನ್ನಾಗಿ ಮಾಡಿರಲಿಲ್ಲ. ಅಂತಿಮ ವರದಿ ಬರುವವರೆಗೆ ಮಾಧ್ಯಮ ಸಂಸ್ಥೆಗಳು ಸಂಯಮ ಕಾಯ್ದುಕೊಳ್ಳಬೇಕು ಮತ್ತು ಇಂತಹ ವರದಿಗಳಿಂದ ದೂರವಿರಬೇಕು ಎಂದು ಸಲಹೆ ನೀಡಲಾಗಿದೆ.