

ಪಣಜಿ (ಗೋವಾ), ಫೆಬ್ರವರಿ 5 (ಸುದ್ದಿ): ಇಲ್ಲಿನ ಭಾವುಸಾಹೇಬ್ ಬಾಂದೋಡ್ಕರ್ ಮೈದಾನದಲ್ಲಿ ಫೆಬ್ರವರಿ 4 ರಿಂದ ಫೆಬ್ರವರಿ 8 ರವರೆಗೆ ಆಯೋಜಿಸಲಾದ ‘ಗೋವಾ ಪುಸ್ತಕ ಮಹೋತ್ಸವ’ದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಹಾಕಲಾದ ಗ್ರಂಥಪ್ರದರ್ಶನಕ್ಕೆ ಜಿಜ್ಞಾಸುಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಳಗಿನ ಅವಧಿಯಲ್ಲಿ ಮುಖ್ಯವಾಗಿ ರಾಜ್ಯದ ವಿವಿಧ ಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರದರ್ಶನಕ್ಕೆ ಭೇಟಿ ನೀಡುತ್ತಿದ್ದರೆ, ಮಧ್ಯಾಹ್ನದ ನಂತರ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
Hon’ble Public Works Minister Shri. Digambar Kamat (@digambarkamat) visited the Sanatan Sanstha stall at the Goa Book Festival, spending time engaging with the grand display showcasing inspiring collections on spirituality, Ayurveda, personality development, nurturing values in… pic.twitter.com/SBSGLFMjU3
— Sanatan Sanstha (@SanatanSanstha) February 5, 2026
ಈ ಮಹೋತ್ಸವದ ಅಧಿಕೃತ ಉದ್ಘಾಟನೆಯು ಫೆಬ್ರವರಿ 4 ರಂದು ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರ ಹಸ್ತದಿಂದ ನೆರವೇರಿತು. ಸನಾತನದ ಗ್ರಂಥಪ್ರದರ್ಶನದಲ್ಲಿ ಸಾಧನೆಯಲ್ಲಿ ಪ್ರಗತಿ ಸಾಧಿಸಲು ಉಪಯುಕ್ತವಾದ ಮಾರ್ಗದರ್ಶಕ ಗ್ರಂಥಗಳು, ಶ್ರೀಕೃಷ್ಣ, ಶ್ರೀರಾಮ, ಶ್ರೀ ಗಣೇಶ, ದೇವಿ ಮುಂತಾದ ದೇವತೆಗಳ ಬಗ್ಗೆ ಶಾಸ್ತ್ರೀಯ ಮಾಹಿತಿ; ಕುಟುಂಬದ ಕಲಹಗಳ ನಿವಾರಣೆ, ಸಂಸ್ಕಾರಯುತ ಬಾಲಸಂಸ್ಕಾರ ಮತ್ತು ಧರ್ಮಶಿಕ್ಷಣದಂತಹ ವಿವಿಧ ವಿಷಯಗಳ ಗ್ರಂಥಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ‘ಜೀವನವನ್ನು ಹೇಗೆ ನಡೆಸಬೇಕು?’, ‘ಸಾಧನೆ ಮಾಡುವುದು ಹೇಗೆ?’, ‘ಒತ್ತಡ ಮುಕ್ತ ಮತ್ತು ಆನಂದಮಯ ಜೀವನದ ರಹಸ್ಯವೇನು?’ ಎಂಬ ವಿಷಯಗಳ ಕುರಿತು ಸರಳವಾದ, ವೈಜ್ಞಾನಿಕ ಆಧಾರಿತ ಮತ್ತು ಆಚರಣೆಗೆ ತರಬಹುದಾದ ಮಾಹಿತಿಯನ್ನು ಈ ಗ್ರಂಥಗಳಲ್ಲಿ ನೀಡಲಾಗಿದೆ. ಸನಾತನದ ಗ್ರಂಥಪ್ರದರ್ಶನವು ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರಿಗಾಗಿ ತೆರೆದಿರುತ್ತದೆ. ಈ ಗ್ರಂಥಪ್ರದರ್ಶನದ ಲಾಭವನ್ನು ಪಡೆಯುವಂತೆ ಸನಾತನ ಸಂಸ್ಥೆಯು ವಿನಂತಿಸಿದೆ.
ಸನಾತನ ಸಂಸ್ಥೆಯಿಂದ ಗೋವಾ ರಾಜ್ಯಪಾಲ ಪುಸಪತಿ ಅಶೋಕ್ ಗಜಪತಿ ರಾಜು ಅವರಿಗೆ ಗ್ರಂಥ ಕಾಣಿಕೆ ರಾಜ್ಯಪಾಲ ಪುಸಪತಿ ಅಶೋಕ್ ಗಜಪತಿ ರಾಜು ಅವರು ಫೆಬ್ರವರಿ 5 ರಂದು ಪ್ರದರ್ಶನಕ್ಕೆ ಭೇಟಿ ನೀಡಿದರು. ರಾಜ್ಯಪಾಲರು ಸನಾತನದ ಮಳಿಗೆಯ ಬಳಿ ಬಂದಾಗ, ಸಂಸ್ಥೆಯ ಸಾಧಕಿ ಸಂಗೀತಾ ನಾಯಕ್ ಅವರು ಅವರಿಗೆ ಗ್ರಂಥಗಳ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ರಾಜ್ಯಪಾಲರೊಂದಿಗೆ ‘ನ್ಯಾಷನಲ್ ಬುಕ್ ಟ್ರಸ್ಟ್’ ಅಧ್ಯಕ್ಷ ಪ್ರೊ. ಮಿಲಿಂದ್ ಮರಾಠೆ, ‘ದೈನಿಕ ತರುಣ್ ಭಾರತ್’ ಗೋವಾ ಆವೃತ್ತಿಯ ಸಂಪಾದಕ ಶ್ರೀ. ಸಾಗರ್ ಜಾವಡೇಕರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಈ ವೇಳೆ ರಾಜ್ಯಪಾಲರು ಗ್ರಂಥಗಳ ಬಗ್ಗೆ ಕುತೂಹಲದಿಂದ ಮಾಹಿತಿ ಪಡೆದರು. ಸನಾತನ ಸಂಸ್ಥೆಯ ಪರವಾಗಿ ರಾಜ್ಯಪಾಲರಿಗೆ ಇಂಗ್ಲಿಷ್ ಭಾಷೆಯ ‘ಸುಸಂಸ್ಕಾರ ಮತ್ತು ಒಳ್ಳೆಯ ಅಭ್ಯಾಸಗಳು’ (Good Values and Good Habits) ಎಂಬ ಗ್ರಂಥವನ್ನು ಉಡುಗೊರೆಯಾಗಿ ನೀಡಲಾಯಿತು.
ಲೋಕೋಪಯೋಗಿ ಸಚಿವ ದಿಗಂಬರ್ ಕಾಮತ್ ಅವರಿಂದ ಸನಾತನ ಗ್ರಂಥಪ್ರದರ್ಶನಕ್ಕೆ ಭೇಟಿ!
ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಲೋಕೋಪಯೋಗಿ ಸಚಿವ ದಿಗಂಬರ್ ಕಾಮತ್ ಅವರೂ ಕೂಡ ಫೆಬ್ರವರಿ 5 ರಂದು ಸನಾತನದ ಗ್ರಂಥಪ್ರದರ್ಶನಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಸನಾತನದ ಸಾಧಕಿ ಸಂಗೀತಾ ನಾಯಕ್ ಅವರು ನೀಡಿದ ಗ್ರಂಥಗಳ ಮಾಹಿತಿಯನ್ನು ಅವರು ಅತ್ಯಂತ ಆಸಕ್ತಿಯಿಂದ ಕೇಳಿ ತಿಳಿದುಕೊಂಡರು.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ