
ಗುವಾಹಟಿ (ಅಸ್ಸಾಂ): ಕಾಂಗ್ರೆಸ್‌ಗೆ ಕೇವಲ ಅಕ್ರಮ ಬಾಂಗ್ಲಾದೇಶಿ ವಲಸಿಗರ ಬಗ್ಗೆ ಕಾಳಜಿಯಿದೆಯೇ ಹೊರತು, ಅಸ್ಸಾಂನ ಮೂಲ ನಿವಾಸಿಗಳ ಹಿತಾಸಕ್ತಿಯ ಬಗ್ಗೆ ಅಲ್ಲ. ಸಾವಿರಾರು ಗೌರವ್ ಗೊಗೊಯ್ (ಕಾಂಗ್ರೆಸ್ ಸಂಸದ) ಮತ್ತು ರಾಹುಲ್ ಗಾಂಧಿ ಬಂದರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ಪ್ರಸ್ತುತ ಅಸ್ಸಾಂ ಜನರ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದೆ ಮತ್ತು ಅವರ ಅಸ್ತಿತ್ವದ ಪ್ರಶ್ನೆ ಎದುರಾಗಿದೆ ಎಂದು ಅಸ್ಸಾಂನ ಬಿಜೆಪಿ ಸರಕಾರದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಎಕ್ಸ್’ (X) ನಲ್ಲಿ ಹಂಚಿಕೊಂಡ ಮಾಹಿತಿಯಲ್ಲಿ ಮುಖ್ಯಮಂತ್ರಿ ಶರ್ಮಾ ಅವರು “ಅಸ್ಸಾಂ ಮೇಲೆ ಶಾಂತಿಯುತವಾಗಿ ಮತ್ತು ಕಪಟದಿಂದ ನಡೆಯುತ್ತಿರುವ ಜನಸಂಖ್ಯಾ ಆಕ್ರಮಣವು ಅಸ್ಸಾಂನ ಭೂ-ತಾಂತ್ರಿಕವಾಗಿ (Geo-strategic) ಪ್ರಮುಖ ಜಿಲ್ಲೆಗಳ ಹಾನಿಗೆ ಕಾರಣವಾಗಬಹುದು. ಇವು ಸ್ವತಃ ನ್ಯಾಯಾಲಯದ ಹೇಳಿಕೆಯಾಗಿದೆ. ಅಕ್ರಮ ವಲಸಿಗರ ಸಂಖ್ಯೆಯು ರಾಜ್ಯದ ಕೆಲವು ಜಿಲ್ಲೆಗಳನ್ನು ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳನ್ನಾಗಿ ಬದಲಾಯಿಸುತ್ತಿದೆ. ಕೆಲ ಕಾಲದ ನಂತರ ಈ ವಲಸಿಗರು ಬಾಂಗ್ಲಾದೇಶದೊಂದಿಗೆ ವಿಲೀನಗೊಳ್ಳಲು ಆಗ್ರಹಿಸುವುದು ಕೇವಲ ಸಮಯದ ಪರಿಣಾಮವಾಗಿರುತ್ತದೆ. ಅಸ್ಸಾಂಗೆ ಹಾನಿಯಾದರೆ ಈಶಾನ್ಯದ ಸಂಪೂರ್ಣ ಭೂಭಾಗವು ಭಾರತದ ಉಳಿದ ಭಾಗಗಳಿಂದ ಬೇರ್ಪಡುತ್ತದೆ ಮತ್ತು ಅಲ್ಲಿನ ಶ್ರೀಮಂತ ನೈಸರ್ಗಿಕ ಸಂಪನ್ಮೂಲಗಳು ಭಾರತದ ಕೈತಪ್ಪಿ ಹೋಗುತ್ತವೆ. ಈ ಸಮಸ್ಯೆಯನ್ನು ಒಪ್ಪಿಕೊಳ್ಳುವುದು ಮತಾಂಧತೆ ಅಥವಾ ದ್ವೇಷವಲ್ಲ.” ಎಂದು ಶರ್ಮಾ ಪೋಸ್ಟ್ ಮಾಡಿದ್ದಾರೆ.
‘ಮಿಯಾ ಮುಸ್ಲಿಂ’ ಪದ ನನ್ನದಲ್ಲ!
‘ಮಿಯಾ ಮುಸ್ಲಿಂ’ ಪದದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, “ಮಿಯಾ ಮುಸ್ಲಿಂ ಪದವನ್ನು ನಾನು ಬಳಸಲಿಲ್ಲ. ಈ ಪದವನ್ನು ಬಾಂಗ್ಲಾದೇಶದಿಂದ ಬಂದು ನೆಲೆಸಿದ ಸಮುದಾಯದವರೇ ಬಳಸುತ್ತಾರೆ. ಸ್ವತಃ ಸುಪ್ರೀಂ ಕೋರ್ಟ್ ಕೂಡ ಈ ಪದವನ್ನು ಬಳಸಿದೆ,” ಎಂದು ಹೇಳಿದರು.
ಇದು ನ್ಯಾಯಾಲಯದ ಅವಮಾನ! – ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್
ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, “ಮುಖ್ಯಮಂತ್ರಿ ಶರ್ಮಾ ಅವರು ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಸುಪ್ರೀಂ ಕೋರ್ಟ್ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕಾರ್ಯಕಾರಿ ವರದಿಯ ಭಾಷೆಯನ್ನು ಸುಪ್ರೀಂ ಕೋರ್ಟ್‌ಗೆ ಜೋಡಿಸುವುದು ನ್ಯಾಯಾಲಯದ ಅವಮಾನವಾಗಿದೆ,” ಎಂದು ಕಿಡಿಕಾರಿದ್ದಾರೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”