ಘಟನೆಯ ಹಿಂದೆ ಸಂಚಿನ ಶಂಕೆ; ಇಂಜೆಕ್ಷನ್ ನೀಡಿದವನ ಬಂಧನ!

ಜೋಧ್‌ಪುರ (ರಾಜಸ್ಥಾನ) – ಇಲ್ಲಿನ ಪ್ರಸಿದ್ಧ ಯುವ ಸಾಧ್ವಿ ಪ್ರೇಮ್ ಬೈಸಾ ಅವರು ಜನವರಿ 28ರಂದು ಬೆಳಿಗ್ಗೆ ಇಂಜೆಕ್ಷನ್ ಪಡೆದ ಕೇವಲ 5 ನಿಮಿಷಗಳಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಶೀತ ಮತ್ತು ಕೆಮ್ಮಿನ ಸಮಸ್ಯೆ ಇದ್ದ ಕಾರಣ, ‘ಕಂಪೌಂಡರ್'(ವೈದ್ಯರ ಸಹಾಯದಿಂದ) ಒಬ್ಬರು ಅವರಿಗೆ ಇಂಜೆಕ್ಷನ್ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಂಪೌಂಡರ್‌ನನ್ನು ತಕ್ಷಣವೇ ಬಂಧಿಸಿದ್ದಾರೆ. ಅಲ್ಲದೆ, ಸಾಧ್ವಿ ನೆಲೆಸಿದ್ದ ಆಶ್ರಮವನ್ನು ಮುಚ್ಚಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಮರಣೋತ್ತರ ಪರೀಕ್ಷೆಯ ನಂತರ ಪೊಲೀಸರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಸಾಧ್ವಿ ಪ್ರೇಮ ಬೈಸಾ ಅವರ ತಂದೆ ಹಾಗೂ ಅವರ ಗುರುಗಳಾದ ವೀರಂ ನಾಥ್ ಅವರು ಮಾತನಾಡಿ, “ಕಳೆದ ಕೆಲವು ದಿನಗಳಿಂದ ಸಾಧ್ವಿಯವರಿಗೆ ಕೆಮ್ಮು ಮತ್ತು ಶೀತದ ತೊಂದರೆ ಇತ್ತು. ಆದ್ದರಿಂದ ಆಶ್ರಮಕ್ಕೆ ಕಂಪೌಂಡರ್‌ನನ್ನು ಕರೆಸಲಾಗಿತ್ತು. ತಪಾಸಣೆಯ ನಂತರ ಆತ ಇಂಜೆಕ್ಷನ್ ನೀಡಿದ. ಆದರೆ ಇಂಜೆಕ್ಷನ್ ನೀಡಿದ ಕೇವಲ 5 ನಿಮಿಷಗಳಲ್ಲಿ ಸಾಧ್ವಿ ಪ್ರಾಣ ಬಿಟ್ಟರು” ಎಂದು ತಿಳಿಸಿದ್ದಾರೆ.
ಯಾರು ಈ ಸಾಧ್ವಿ ಪ್ರೇಮ ಬೈಸಾ?
ಸಾಧ್ವಿ ಪ್ರೇಮ ಬೈಸಾ ಪಶ್ಚಿಮ ರಾಜಸ್ಥಾನದ ಪ್ರಸಿದ್ಧ ಕಥಾವಾಚಕಿ (ಧಾರ್ಮಿಕ ಪ್ರವಚನಗಾರ್ತಿ) ಆಗಿದ್ದರು. ರಾಜಸ್ಥಾನದ ಹೊರಗೂ ಅವರು ಅಪಾರ ಅನುಯಾಯಿಗಳನ್ನು ಹೊಂದಿದ್ದರು. ಅವರು ನಗರ ಪ್ರದೇಶಗಳ ಜೊತೆಗೆ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಕಥಾವಾಚನದ ಮೂಲಕ ಧರ್ಮಸೇವೆಯಲ್ಲಿ ತೊಡಗಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಅವರು 7 ಲಕ್ಷದ 28 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು. |
ಸಾಧ್ವಿ ನಿಧನದ ನಂತರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ನ್ಯಾಯ ಬೇಕು’ ಎಂಬ ಸಂದೇಶ ಪ್ರಸಾರ !
ಈ ಇಡೀ ಘಟನೆಯಲ್ಲಿ ಮತ್ತೊಂದು ಆಘಾತಕಾರಿ ವಿಷಯವೆಂದರೆ, ಸಾಧ್ವಿ ಮೃತಪಟ್ಟ ಕೆಲವು ಗಂಟೆಗಳ ನಂತರ ಅವರ ಅಧಿಕೃತ ‘ಇನ್‌ಸ್ಟಾಗ್ರಾಮ್’ ಖಾತೆಯಿಂದ ಒಂದು ಸಂದೇಶ ಪ್ರಕಟವಾಗಿದೆ. ಅದರಲ್ಲಿ ತಮಗೆ ನ್ಯಾಯ ಒದಗಿಸಬೇಕೆಂದು ಬೇಡಿಕೆ ಇಡಲಾಗಿತ್ತು. ಇದರಿಂದ ಈ ಪ್ರಕರಣದ ಗೂಢಾರ್ಥ ಮತ್ತಷ್ಟು ಹೆಚ್ಚಾಗಿದೆ. ಸಾಧ್ವಿಯವರ ಸೂಚನೆಯ ಮೇರೆಗೆ ಅವರ ಸಹೋದ್ಯೋಗಿ ಗುರು ಮಹಾರಾಜರು ಅವರ ಮೊಬೈಲ್‌ನಿಂದ ಆ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ ಎಂದು ತಂದೆ ಒಪ್ಪಿಕೊಂಡಿದ್ದಾರೆ. ಸಾಧ್ವಿ ತಮ್ಮ ಕೊನೆಯ ಕ್ಷಣದಲ್ಲಿ ತಮಗೆ ನ್ಯಾಯ ಕೊಡಿಸಬೇಕೆಂದು ವಿನಂತಿಸಿದ್ದರು ಎನ್ನಲಾಗಿದೆ. ಅಲ್ಲದೆ, ಸಾಧ್ವಿಯವರ ಹಳೆಯ ಪ್ರಕರಣವೊಂದರ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಅದಕ್ಕೂ ಈ ಸಾವಿಗೂ ಸಂಬಂಧವಿದೆಯೇ ಎಂಬ ಚರ್ಚೆ ನಡೆಯುತ್ತಿದೆ.
|

ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad