|

(ಘರ್ ವಾಪಸಿ ಅಂದರೆ ಹಿಂದೂ ಧರ್ಮಕ್ಕೆ ಮರುಪ್ರವೇಶ ಮಾಡುವುದು)
ಕಾಂಕೇರ್ (ಛತ್ತೀಸ್‌ಗಢ): ಜಿಲ್ಲೆಯ ಪೀಢಾಪಾಲ್ ಪ್ರದೇಶದಲ್ಲಿ ಜನವರಿ ೧೮ ರಂದು ವಿವಿಧ ಗ್ರಾಮಗಳಿಂದ ಬಂದಿದ್ದ ೫೦ ಕ್ರಿಶ್ಚಿಯನ್ ಕುಟುಂಬಗಳ ೨೦೦ಕ್ಕೂ ಹೆಚ್ಚು ನಾಗರಿಕರು ಕ್ರಿಶ್ಚಿಯನ್ ಧರ್ಮವನ್ನು ತ್ಯಜಿಸಿ ತಮ್ಮ ಮೂಲ ಹಿಂದೂ ಧರ್ಮಕ್ಕೆ ಮರು ಸೇರ್ಪಡೆಯಾದರು. ಈ ಕಾರ್ಯಕ್ರಮವು ಸಮಾಜದ ಒಪ್ಪಿಗೆಯಿಂದ ಮತ್ತು ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು. ಅನಾರೋಗ್ಯ ಗುಣಪಡಿಸುವ ಭರವಸೆ ಮತ್ತು ಇತರ ಆಮಿಷಗಳನ್ನು ತೋರಿಸಿ ಈ ಹಿಂದೆ ತಮ್ಮನ್ನು ಮತಾಂತರ ಮಾಡಲಾಗಿತ್ತು ಎಂದು ಘರ್ ವಾಪಸಿ ಮಾಡಿದ ಜನರು ತಿಳಿಸಿದರು. ಆತ್ಮಾವಲೋಕನದ ನಂತರ ಅವರು ಸ್ವಯಂಪ್ರೇರಿತರಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದರು.
೧. ಸ್ವಯಂಪ್ರೇರಿತ ನಿರ್ಧಾರ: ಪೀಢಾಪಾಲ್, ಧನತುಳಸಿ, ಮೋದೆ, ಸಾಲ್ಹೆಭಾಟ್, ಕಿರ್ಗಾಪಾಟಿ ಮತ್ತು ತರಾಂದುಲ್ ಎಂಬ ೬ ಗ್ರಾಮಗಳ ೫೦ ಕುಟುಂಬಗಳು ಈ ನಿರ್ಧಾರವನ್ನು ತೆಗೆದುಕೊಂಡವು. ಯಾವುದೇ ಒತ್ತಡಕ್ಕೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿಲ್ಲ, ಬದಲಿಗೆ ದೀರ್ಘಕಾಲ ನಡೆದ ಚರ್ಚೆ ಮತ್ತು ಸಭೆಗಳ ನಂತರ ತೆಗೆದುಕೊಳ್ಳಲಾಗಿದೆ ಎಂದು ಘರ್ ವಾಪಸಿ ಮಾಡಿದ ನಾಗರಿಕರು ಸ್ಪಷ್ಟಪಡಿಸಿದರು.
೨. ಘರ್ ವಾಪಸ್ಸಿಯ ಕಾರ್ಯಕ್ರಮ : ಪೀಢಾಪಾಲ್ ಗ್ರಾಮದ ದೇವಸ್ಥಾನದ ಆವರಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೂಜೆ ಮತ್ತು ಸಾಂಪ್ರದಾಯಿಕ ಸಂಸ್ಕಾರಗಳ ಮೂಲಕ ನಾಗರಿಕರನ್ನು ವಿಧಿಪೂರ್ವಕವಾಗಿ ಸನಾತನ ಧರ್ಮಕ್ಕೆ ಸೇರಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಸಮಾಜದ ಹಿರಿಯರು ಮತ್ತು ವಿವಿಧ ಸಾಮಾಜಿಕ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.
೩. ಆದಿವಾಸಿ ಸಮಾಜದ ಸದಸ್ಯ ಈಶ್ವರ್ ಕಾವಡೆ ಅವರು ಈ ಕಾರ್ಯಕ್ರಮದ ಬಗ್ಗೆ ಮಾತನಾಡಿ, ‘ನಾಗರಿಕರು ಸ್ವಯಂಪ್ರೇರಿತವಾಗಿ ಮೂಲ ಧರ್ಮಕ್ಕೆ ಮರಳಿದ್ದಾರೆ. ಈ ಭಾಗದಲ್ಲಿನ ಉಳಿದ ಮತಾಂತರಗೊಂಡ ಕುಟುಂಬಗಳ ಸದಸ್ಯರು ಕೂಡ ಶೀಘ್ರದಲ್ಲೇ ಘರ್ ವಾಪಸಿ ಮಾಡಲಿದ್ದಾರೆ,’ ಎಂದು ತಿಳಿಸಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ