
ಹರಿದ್ವಾರ (ಉತ್ತರಾಖಂಡ): ಇಲ್ಲಿನ ‘ಹರ್ ಕಿ ಪೌಡಿ’ ಪರಿಸರದ ವಿವಿಧ ಸ್ಥಳಗಳಲ್ಲಿ ಫಲಕಗಳನ್ನು ಅಳವಡಿಸಲಾಗಿದ್ದು, ಹಿಂದೂಯೇತರರ ಪ್ರವೇಶ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ತೀರ್ಥಕ್ಷೇತ್ರದ ಪವಿತ್ರತೆ ಮತ್ತು ಮರ್ಯಾದೆಯನ್ನು ಗಮನದಲ್ಲಿಟ್ಟುಕೊಂಡು ಹರ್ ಕಿ ಪೌಡಿ ಹಾಗೂ ಮಾಳವೀಯ ದ್ವೀಪ ಪರಿಸರದಲ್ಲಿ ಡ್ರೋನ್ ಹಾರಾಟದ ಮೇಲೂ ನಿಷೇಧ ವಿಧಿಸಲಾಗಿದೆ.
ಡಿಯೋ ಚಿತ್ರೀಕರಣಕ್ಕೆ ನಿಷೇಧ:
ಯಾವುದೇ ರೀತಿಯ ಚಲನಚಿತ್ರದ ಹಾಡುಗಳಿಗೆ ಚಿತ್ರೀಕರಣ ಮಾಡುವುದು ಅಥವಾ ವಿಡಿಯೋ ಮಾಡುವುದನ್ನು ಸಂಪೂರ್ಣವಾಗಿ ನೀಷೇಧಿಸಲಾಗಿದೆ ಎಂದು ಘೋಷಿಸಲಾಗಿದೆ. ಇಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು, ಎಂದು ‘ಶ್ರೀಗಂಗಾ ಸಭೆ’ ಯಿಂದ ಎಚ್ಚರಿಸಲಾಗಿದೆ. ಕೆಲವು ದಿನಗಳ ಹಿಂದೆ ‘ಹರ್ ಕಿ ಪೌಡಿ’ ಪರಿಸರದಲ್ಲಿ ಚಿತ್ರೀಕರಿಸಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ನಂತರ ದೊಡ್ಡ ವಿವಾದ ಉಂಟಾಗಿತ್ತು. ಅರೇಬಿಕ್ ಉಡುಪಿನಲ್ಲಿದ್ದ ಇಬ್ಬರು ಯುವಕರು ಘಾಟ್ ಪರಿಸರದಲ್ಲಿ ತಿರುಗಾಡುತ್ತಿರುವುದು ಕಾಣಿಸಿತ್ತು.
ಆ ನಂತರ ತೀರ್ಥಕ್ಷೇತ್ರದ ಪುರೋಹಿತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣದ ಗಂಭೀರತೆಯನ್ನು ಗಮನಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಿದಾಗ, ಆ ಯುವಕರು ತಾವು ದುಬೈನ ನಿವಾಸಿಗಳೆಂದು ಹೇಳಿಕೊಂಡು ಹರ್ ಕಿ ಪೌಡಿ ಪರಿಸರದಲ್ಲಿ ತಿರುಗಾಡುತ್ತಿರುವುದಾಗಿ ಹೇಳಿದ್ದರು.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ