
ರಿಷಿಕೇಶ (ಉತ್ತರಾಖಂಡ) – ತೀರ್ಥನಗರಿ ಎಂದು ಗುರುತಿಸಲ್ಪಟ್ಟಿರುವ ರಿಷಿಕೇಶದಲ್ಲಿ, ಹಾಸಿಗೆ ಮತ್ತು ದಿಂಬುಗಳನ್ನು ತಯಾರಿಸುವ ಕೆಲವು ಆರೋಪಿಗಳು ಮೃತ ವ್ಯಕ್ತಿಗಳ ಹಾಸಿಗೆ ಮತ್ತು ದಿಂಬುಗಳಿಂದ ಹತ್ತಿಯನ್ನು ತೆಗೆದು ಅದನ್ನು ಹೊಸ ಹತ್ತಿಯೊಂದಿಗೆ ಬೆರೆಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ದಂಡಿ ರಾಣಿಪೋಖರಿ ಇಲ್ಲಿನ ನಿವಾಸಿ ಅಮಿತ್ ಸಿಂಗ್ ಅವರು ಈ ನಿಷಿದ್ಧ ಕಾರ್ಯ ಮಾಡುತ್ತಿದ್ದವರ ವಿರುದ್ಧ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು, ಸಲ್ಮಾನ್, ಹಮೀದ್ ಮತ್ತು ಸಂಜಯ್ ಹೆಸರಿನ ೩ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
೧. ದೂರುದಾರರಾದ ಅಮಿತ್ ಸಿಂಗ್ ಅವರು, ‘ರಿಷಿಕೇಶ ಪ್ರದೇಶದಲ್ಲಿ ಕೆಲವು ಮತಾಂಧ ಯುವಕರು ಮೃತ ವ್ಯಕ್ತಿಗಳ ಹಾಸಿಗೆಗಳನ್ನು ಸಂಗ್ರಹಿಸಿ, ಅದರಲ್ಲಿನ ಹತ್ತಿಯನ್ನು ತೆಗೆದು, ಅದನ್ನು ಹೊಸ ಹತ್ತಿಯೊಂದಿಗೆ ಬೆರೆಸಿ ಮಾರಾಟ ಮಾಡುತ್ತಿದ್ದಾರೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕೃತ್ಯವಾಗಿದೆ’ ಎಂದು ತಮ್ಮ ದೂರಿನಲ್ಲಿ ಹೇಳಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ರಾಣಿಪೋಖರಿ ವೃತ್ತದಲ್ಲಿರುವ ಅಂಗಡಿಯ ಮೇಲೆ ದಾಳಿ ನಡೆಸಿದರು. ವಿಚಾರಣೆಯಲ್ಲಿ ಈ ವಿಷಯ ನಿಜವೆಂದು ಸ್ಪಷ್ಟವಾದ ನಂತರ, ಪೊಲೀಸರು ೩ ಆರೋಪಿಗಳನ್ನು ಬಂಧಿಸಿದ್ದಾರೆ.
೨. ಅನೇಕ ಬಾರಿ, ಮೃತ ವ್ಯಕ್ತಿಗಳು ಬಳಸಿದ ಹಾಸಿಗೆ ಮತ್ತು ದಿಂಬುಗಳನ್ನು ಮನೆಯವರು ಎಸೆಯುತ್ತಾರೆ. ಆರೋಪಿ ಯುವಕರು ಇಂತಹ ಹಾಸಿಗೆಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು.
೩. ಪ್ರಸ್ತುತ ಉತ್ತರಾಖಂಡದಲ್ಲಿ ತೀವ್ರವಾದ ಚಳಿ ಇದೆ. ರಿಷಿಕೇಶದಲ್ಲಿ ಗರಿಷ್ಠ ತಾಪಮಾನ ೧೫ ಡಿಗ್ರಿ ಮತ್ತು ಕನಿಷ್ಠ ತಾಪಮಾನ ೬ ಡಿಗ್ರಿ ಇದೆ. ಅದರಿಂದಾಗಿ ಹಾಸಿಗೆ ಮತ್ತು ದಿಂಬುಗಳ ಮಾರಾಟವು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ.
೪. ಮೃತ ವ್ಯಕ್ತಿಗಳ ಹಾಸಿಗೆ ಮತ್ತು ದಿಂಬಿನಲ್ಲಿನ ಹತ್ತಿಯನ್ನು ಬಳಸಿದ ವಿಷಯ ಬಯಲಿಗೆ ಬಂದ ನಂತರ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ