|

ಡೆಹ್ರಾಡೂನ್ (ಉತ್ತರಾಖಂಡ) – ಹರಿದ್ವಾರ ಒಂದು ಪವಿತ್ರ ನಗರವಾಗಿದ್ದು, ಅಲ್ಲಿನ ಧಾರ್ಮಿಕ ಶೇಷ್ಠತೆಯನ್ನು ಸಂರಕ್ಷಿಸುವುದು, ಸರಕಾರದ ಜವಾಬ್ದಾರಿಯಾಗಿದೆ. ಉತ್ತರಾಖಂಡ ಸರಕಾರ ಹರಿದ್ವಾರ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಅಹಿಂದುಗಳಿಗೆ ಪ್ರವೇಶ ನೀಡುವ ಬಗ್ಗೆ ಅಲ್ಲಿನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ, ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಒಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿ ಅವರು ಮುಂದೆ ಮಾತನಾಡಿ, ದೇವಭೂಮಿ ಉತ್ತರಾಖಂಡದ ಆಧ್ಯಾತ್ಮಿಕ ಚಿತ್ರಣವು ಶಾಶ್ವತವಾಗಿರಬೇಕು, ಅದಕ್ಕಾಗಿ ಸರಕಾರವು ಎಲ್ಲಾ ಉಪಾಯ ಯೋಜನೆಗಳನ್ನು ಪರಿಶೀಲನೆ ಮಾಡುತ್ತಿದೆ ಎಂದು ಹೇಳಿದರು. ೨೦೨೭ ರಲ್ಲಿ ಹರಿದ್ವಾರದಲ್ಲಿ ನಡೆಯಲಿರುವ ಕುಂಭಮೇಳದ ಸಿದ್ಧತೆಗಳ ಹಿನ್ನೆಲೆಯಲ್ಲಿ ಈ ಚರ್ಚೆ ನಡೆಯುತ್ತಿದೆ.
🚩 Haridwar’s Sacred Identity Must Be Protected 🚩
“Safeguarding Haridwar’s religious sanctity is the government’s duty,” says CM Pushkar Singh Dhami.
🚫 Ban on entry of non-Hindus at Ganga river ghats in Haridwar.
🕉️ Uttarakhand govt begins preparations for Kumbh Mela 2027.… pic.twitter.com/kxa8WWx5Jt
— Sanatan Prabhat (@SanatanPrabhat) January 6, 2026
೧. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಿಳಿಸಿದಂತೆ, ಹರಿದ್ವಾರ ಮಹಾನಗರ ಪಾಲಿಕೆಯ ನಿಯಮಗಳ ಪ್ರಕಾರ, ಹಿಂದಿನಿಂದಲೂ ಗಂಗಾ ನದಿಯ ಘಾಟ್‌ಗಳಲ್ಲಿ ಅಹಿಂದುಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಪ್ರಸಿದ್ಧ ‘ಹರ್ ಕಿ ಪೌಡಿ’ ಘಾಟ್ ನಲ್ಲೂ ಅಹಿಂದುಗಳಿಗೆ ಪ್ರವೇಶ ನಿಷೇಧವಿದೆ. ಇತಿಹಾಸದಲ್ಲಿಯೂ ಇಂತಹ ನಿರ್ಣಯಗಳ ಉದಾಹರಣೆಗಳು ಕಂಡುಬರುತ್ತವೆ. ೧೯೧೬ ರಲ್ಲಿ, ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ಬ್ರಿಟಿಷ್ ಆಡಳಿತದೊಂದಿಗೆ ಮಾಡಿದ ಒಪ್ಪಂದದ ಮೂಲಕ ಗಂಗೆಯ ನೈಸರ್ಗಿಕ ಹರಿವು ಮತ್ತು ತೀರ್ಥಕ್ಷೇತ್ರದ ಪಾವಿತ್ರ್ಯವನ್ನು ಶಾಶ್ವತವಾಗಿ ಕಾಪಾಡಲು ಪ್ರಯತ್ನಿಸಿದ್ದರು.
೨. ಹರಿದ್ವಾರದಿಂದ ಋಷಿಕೇಶವರೆಗಿನ ಎಲ್ಲಾ ೧೦೫ ಘಾಟ್‌ಗಳಲ್ಲಿ ಪ್ರವೇಶ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಪ್ರಸ್ತಾಪ ಇಡಲಾಗಿದೆ. ಈ ಸಂದರ್ಭದಲ್ಲಿ ಸಂತ ಸಮುದಾಯ ಮತ್ತು ಶ್ರೀ ಗಂಗಾ ಸಭಾದೊಂದಿಗೆ ಸರಕಾರದ ಚರ್ಚೆ ಪ್ರಾರಂಭವಾಗಿದೆ.
೩. ನಿರಂಜನಿ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಅವರು ಸರ್ಕಾರದ ಈ ಕ್ರಮವನ್ನು ಬೆಂಬಲಿಸಿ, ಇದೊಂದು ಅಗತ್ಯವಾದ ನಿರ್ಣಯ ಎಂದು ಕರೆದಿದ್ದಾರೆ.
೪. ಪ್ರತಿ ವರ್ಷ ಸುಮಾರು ೪ ಕೋಟಿ ಭಕ್ತರು ಹರಿದ್ವಾರಕ್ಕೆ ಭೇಟಿ ನೀಡುತ್ತಾರೆ ಮತ್ತು ಪ್ರಮುಖ ಸ್ನಾನ ಪರ್ವಗಳ ಅವಧಿಯಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಘಾಟ್‌ಗಳಲ್ಲಿ ಅಹಿಂದು ಪ್ರವಾಸಿಗರ ಉಪಸ್ಥಿತಿಯಿಂದ ವಿವಾದಗಳು ಉಂಟಾಗುತ್ತಿರುವ ಕಾರಣ, ಈ ವಿಷಯದ ಕುರಿತು ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ.
ಸ್ವಂತ ಪಕ್ಷ ಸ್ಥಾಪಿಸಲು ಮುಂದಾದ ಭಾಜಪ ತಮಿಳುನಾಡಿನ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ!
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ