
ಚೆನ್ನೈ (ತಮಿಳುನಾಡು) – 1755ರಲ್ಲಿ ಬ್ರಿಟಿಷರ ವಿರುದ್ಧ ನಡೆದ ನಾಥಮ್ ಕನ್ವಾಯಿ ಯುದ್ಧದ ಸ್ಮರಣಾರ್ಥ ಸ್ಮಾರಕ ನಿರ್ಮಿಸಲು ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಅನುಮತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಸ್ಟ್ಯಾನ್ ಸ್ವಾಮಿ ಸ್ಮರಣಾರ್ಥ ಶಿಲಾಶಾಸನ ಸ್ಥಾಪಿಸಲು ಸಾಧ್ಯವಿದ್ದರೆ ಮತ್ತು ಅದಕ್ಕೆ ಯಾವುದೇ ವಿಶೇಷ ಅನುಮತಿಯ ಅಗತ್ಯವಿಲ್ಲದಿದ್ದರೆ, ನಾಥಮ್ ಕನ್ವಾಯಿ ಯುದ್ಧದ ಸ್ಮರಣಾರ್ಥ ನಿರ್ಮಿಸಲಾಗುವ ಸ್ತೂಪಕ್ಕೂ ಪ್ರತ್ಯೇಕ ಅನುಮತಿಯ ಅಗತ್ಯವಿರಬಾರದು” ಎಂದು ಹೇಳಿದ್ದಾರೆ.
ಐತಿಹಾಸಿಕ ಸಂಘರ್ಷಗಳ ಸ್ಮೃತಿಯನ್ನು ಜಗತ್ತಿಗೆ ಸಾರುವುದು ಸಮಾಜಕ್ಕೆ ಅಗತ್ಯ! – ಉಚ್ಚ ನ್ಯಾಯಾಲಯ
ವಿಚಾರಣೆಯ ವೇಳೆ ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ರಾಜ್ಯ ಸರ್ಕಾರದ ಧೋರಣೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತಾ, “ಇಂದಿನ ಪೀಳಿಗೆಗೆ ಭಾರತದಲ್ಲಿನ ಪರಕೀಯರ ಆಳ್ವಿಕೆಯ ಇತಿಹಾಸ ತಿಳಿದಿಲ್ಲ. ಅಲ್ಲದೆ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟಗಳ ಅರಿವು ಕೂಡ ಜನರಲ್ಲಿ ಕಡಿಮೆಯಾಗಿದೆ. ಇಂತಹ ಐತಿಹಾಸಿಕ ಸಂಘರ್ಷಗಳ ನೆನಪನ್ನು ಉಳಿಸಿಕೊಳ್ಳುವುದು ಸಮಾಜಕ್ಕೆ ಅವಶ್ಯಕವಾಗಿದೆ, ಇದರಿಂದ ಮುಂದಿನ ಪೀಳಿಗೆಗೆ ನಮ್ಮ ಭೂತಕಾಲದ ಘಟನೆಗಳ ಬಗ್ಗೆ ಅರಿವಿರುತ್ತದೆ” ಎಂದು ಹೇಳಿದರು.
ಏನಿದು ಪ್ರಕರಣ ?ತಮಿಳುನಾಡಿನ ನಾಥಮ್ ಕನ್ವಾಯಿಯಲ್ಲಿ 1755ರಲ್ಲಿ ಬ್ರಿಟಿಷ್ ಸೈನ್ಯ ಮತ್ತು ಸ್ಥಳೀಯ ಮೇಲೂರು ಕಲ್ಲರ್ ಸಮಾಜದ ನಡುವೆ ತೀವ್ರ ಹೋರಾಟ ನಡೆದಿತ್ತು. ಈ ಯುದ್ಧದ ಸ್ಮರಣಾರ್ಥ ಸ್ಮಾರಕ ಸ್ತೂಪವನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ನಾಥಮ್‌ನ ತಹಶೀಲ್ದಾರರು ಇದಕ್ಕೆ ಅನುಮತಿ ನಿರಾಕರಿಸಿದ್ದರು. ತರುವಾಯ ಅರ್ಜಿದಾರರು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ತಹಶೀಲ್ದಾರರ ನಿರ್ಧಾರವನ್ನು ಪ್ರಶ್ನಿಸಿ, ಸ್ಮಾರಕ ನಿರ್ಮಾಣಕ್ಕೆ ಹಾದಿ ಸುಗಮಗೊಳಿಸಿದರು. |
ಯಾರು ಈ ಸ್ಟ್ಯಾನ್ ಸ್ವಾಮಿ?
ಸ್ಟ್ಯಾನ್ ಸ್ವಾಮಿ ಒಬ್ಬ ಜೆಸ್ಯೂಟ್ ಪಾದ್ರಿ ಮತ್ತು ಆದಿವಾಸಿ ಜನರ ಹಕ್ಕುಗಳಿಗಾಗಿ ಹೋರಾಡುವ ಕಾರ್ಯಕರ್ತನಾಗಿದ್ದರು. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಈತನ ಹೆಸರು ನಕ್ಸಲೈಟ್ ಚಟುವಟಿಕೆಗಳೊಂದಿಗೆ ಕೇಳಿಬಂದಿತ್ತು. 2021ರಲ್ಲಿ ಈತ ನಿಧನವಾದ ನಂತರ, ಈತನ ಸ್ಮರಣಾರ್ಥ ಸ್ಮೃತಿ ಸ್ತಂಭ ನಿರ್ಮಿಸಲು ಮದ್ರಾಸ್ ಉಚ್ಚ ನ್ಯಾಯಾಲಯ ಅನುಮತಿ ನೀಡಿತ್ತು.
ನಾಥಮ್ ಕನ್ವಾಯಿ ಯುದ್ಧದಲ್ಲಿ ಏನಾಯಿತು?
ಮೇಲೂರು ಕಲ್ಲರ್ ಸಮಾಜ ಮತ್ತು ಬ್ರಿಟಿಷ್ ಸೈನ್ಯದ ನಡುವಿನ ಹೋರಾಟದಲ್ಲಿ ಕಲ್ಲರ್ ಸಮಾಜವು ಬ್ರಿಟಿಷ್ ಸೈನ್ಯವನ್ನು ಸೋಲಿಸಿತ್ತು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು. ಈ ಸಂಘರ್ಷವು ಕೊಯಿಲಕುಡಿಯ ತಿರುಮೊಗೂರು ದೇವಾಲಯಕ್ಕೆ ಸಂಬಂಧಿಸಿದ್ದಾಗಿತ್ತು. ಕರ್ನಲ್ ಅಲೆಕ್ಸಾಂಡರ್ ಹೆರಾನ್ ನೇತೃತ್ವದ ಬ್ರಿಟಿಷ್ ಸೈನ್ಯವು ದೇವಸ್ಥಾನದ ಹಿತ್ತಾಳೆ ಮೂರ್ತಿಗಳು ಮತ್ತು ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಿತ್ತು. ಇದರ ವಿರುದ್ಧ ಸಂಘಟಿತರಾಗಿ ಹೋರಾಡಿದ ಕಲ್ಲರ್ ಸಮಾಜವು ಬ್ರಿಟಿಷರನ್ನು ಸೋಲಿಸಿ, ಲೂಟಿಯಾಗಿದ್ದ ಮೂರ್ತಿಗಳನ್ನು ಮರಳಿ ಪಡೆದಿತ್ತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ