
ಬೆಂಗಳೂರು – ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಮಾನ ಮತ್ತು ಹೆಲಿಕಾಪ್ಟರ್ ಪ್ರಯಾಣಕ್ಕಾಗಿ ಕಳೆದ ೨ ವರ್ಷಗಳಲ್ಲಿ (ನವೆಂಬರ್ ೨೦೨೩ ರಿಂದ ನವೆಂಬರ್ ೨೦೨೫ ರವರೆಗೆ) ೪೭ ಕೋಟಿ ೩೮ ಲಕ್ಷ ರೂಪಾಯಿ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ವಿಧಾನ ಪರಿಷತ್ತಿನಲ್ಲಿ ಭಾಜಪ ಸದಸ್ಯ ರವಿ ಕುಮಾರ್ ಅವರು ಸರಕಾರವನ್ನು ಪ್ರಶ್ನಿಸಿದ್ದರು. ಇದಕ್ಕೆ ಸರಕಾರದಿಂದ ಈ ಉತ್ತರ ದೊರೆತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಿಗೆ, ಹಾಗೂ ದೆಹಲಿ, ಚೆನ್ನೈ, ಭಾಗ್ಯನಗರದಂತಹ ಹೊರ ರಾಜ್ಯಗಳಲ್ಲಿ ಮಾಡಿದ ಅಧಿಕೃತ ಪ್ರವಾಸಗಳಿಂದಾಗಿ ಈ ವೆಚ್ಚವಾಗಿದೆ, ಎಂದು ಸರಕಾರವು ಸ್ಪಷ್ಟಪಡಿಸಿದೆ. ಮೈಸೂರಿನಂತಹ ಹತ್ತಿರದ ಸ್ಥಳಗಳಿಗೆ ಪ್ರಯಾಣಿಸಲೂ ಸಹ ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಬಳಸಿದ್ದರು, ಎಂಬ ಮಾಹಿತಿಯನ್ನು ನೀಡಲಾಗಿದೆ. (ಈ ಹಣವನ್ನು ಸಿದ್ದರಾಮಯ್ಯ ಅವರಿಂದ ವಸೂಲಿ ಮಾಡುವುದು ಅವಶ್ಯಕ! – ಸಂಪಾದಕರು)
ಸಂಪಾದಕೀಯ ನಿಲುವುಎಲ್ಲಿ ಸಾರ್ವಜನಿಕ ಹಣವನ್ನು ಮಿತವಾಗಿ ಬಳಸಿದ ಲಾಲಬಹದ್ದೂರ್ ಶಾಸ್ತ್ರಿಯಂತಹ ಆದರ್ಶ ಆಡಳಿತಗಾರರು, ಹಾಗೂ ಎಲ್ಲಿ ಸಾರ್ವಜನಿಕ ಹಣವನ್ನು ದುಂದುವೆಚ್ಚ ಮಾಡುವ ಕಾಂಗ್ರೆಸ್ ಆಡಳಿತಗಾರರು! |
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್