|

ಅಯೋಧ್ಯೆ – ಇಲ್ಲಿನ ಸೋಹವಾರ್ ನ ಇಬ್ಬರು ಮುಸ್ಲಿಂ ಯುವಕರು ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ. ಆ ಇಬ್ಬರ ಹೆಸರುಗಳು ಅರ್ಷದ್ ಸಿದ್ದಿಕಿ ಮತ್ತು ಉಸ್ಮಾನ್ ಎಂದಿದೆ. ಹಿಂದೂ ಧರ್ಮವನ್ನು ಸ್ವೀಕರಿಸಿದ ನಂತರ, ಅರ್ಷದ್ ಸಿದ್ದಿಕಿ ತಮ್ಮ ಹೆಸರನ್ನು ರಾಕೇಶ್ ಎಂದು ಮತ್ತು ಉಸ್ಮಾನ್ ತಮ್ಮ ಹೆಸರನ್ನು ಮನೀಶ್ ಎಂದು ಬದಲಾಯಿಸಿಕೊಂಡಿದ್ದಾರೆ. ಈ ಸಂಬಂಧ ಇವರಿಬ್ಬರೂ ಲಿಖಿತ ಅರ್ಜಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಪ್ರೇಮಾನಂದ ಮಹಾರಾಜರ ಪ್ರವಚನದಿಂದ ಪ್ರಭಾವಿತರಾಗಿ ಅವರು ಹಿಂದೂ ಧರ್ಮವನ್ನು ಸ್ವೀಕರಿಸುವ ನಿರ್ಧಾರ ತೆಗೆದುಕೊಂಡರು. ಇಸ್ಲಾಂನಲ್ಲಿ ತಮಗೆ ಉಸಿರುಗಟ್ಟಿದಂತೆ ಆಗುತ್ತಿತ್ತು, ಎಂದು ಇಬ್ಬರೂ ಹೇಳಿದ್ದಾರೆ.
ಸಂಪೂರ್ಣ ಜೀವನವನ್ನು ಸನಾತನ ಧರ್ಮದಲ್ಲೇ ಕಳೆಯುವ ನಿರ್ಧಾರ!
ಸನಾತನ ಸಂಪ್ರದಾಯ ಮತ್ತು ಸಂಸ್ಕೃತಿಯು ತಮಗೆ ಅತ್ಯಂತ ಆಕರ್ಷಕವಾಗಿ ಕಂಡಿದೆ ಎಂದು ಈ ಮುಸ್ಲಿಂ ಯುವಕರು ತಿಳಿಸಿದ್ದಾರೆ. ಮೊದಲಿನಿಂದಲೂ ಅವರು ದಿನವಿಡೀ ಹಿಂದೂ ಮಕ್ಕಳೊಂದಿಗೆ ಬೆರೆಯುತ್ತಿದ್ದರು ಮತ್ತು ಹಿಂದೂಗಳ ಹಬ್ಬಗಳಲ್ಲಿ ಭಾಗವಹಿಸುತ್ತಿದ್ದರು. ಅವರಿಗೆ ಸನಾತನ ಧರ್ಮದಲ್ಲಿ ಮಾನಸಿಕ ಶಾಂತಿ ದೊರಕಿದೆ. ಹಾಗಾಗಿ, ತಮ್ಮ ಸಂಪೂರ್ಣ ಜೀವನವನ್ನು ಸನಾತನ ಧರ್ಮದಲ್ಲೇ ಕಳೆಯಲು ನಿರ್ಧರಿಸಿದ್ದಾರೆ. ಭರತ್ ಹನುಮಾನ್ ಮಿಲನ್ ಮಂದಿರದ ಮಹಂತ ಪರಮಾತ್ಮ ದಾಸ ಮತ್ತು ಬಜರಂಗ ದಳದ ಸಚಿವ ಲಾಲ್‌ಜಿ ಶರ್ಮಾ ಅವರ ನೇತೃತ್ವದಲ್ಲಿ ಅವರು ಹಿಂದೂ ಧರ್ಮವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರಿಗೆ ಕೇಸರಿ ವಸ್ತ್ರ ಮತ್ತು ಧಾರ್ಮಿಕ ಗ್ರಂಥಗಳನ್ನು ಉಡುಗೊರೆಯಾಗಿ ನೀಡಲಾಯಿತು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !