‘ಪೊಲೀಸ್ ಕಮಾಂಡ್ ಸೆಂಟರ್’ನಿಂದ ಕಾರ್ಯನಿರ್ವಹಣೆ

ಭಾಗ್ಯನಗರ (ತೆಲಂಗಾಣ) – ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ರಾಜ್ಯದ ನೂತನ ಸಚಿವಾಲಯದ ಕಟ್ಟಡದಲ್ಲಿರುವ ವಾಸ್ತು ದೋಷಗಳಿಂದಾಗಿ ಅಲ್ಲಿ ಉಳಿಯುತ್ತಿಲ್ಲ ಮತ್ತು ಅವರು ಬಂಜಾರ ಹಿಲ್ಸ್‌ನಲ್ಲಿರುವ ಉನ್ನತ ಭದ್ರತೆಯ ತೆಲಂಗಾಣ ‘ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್’ನಿಂದ ಕೆಲಸ ಮಾಡುತ್ತಿದ್ದಾರೆ.
1. ನೂತನ ಸಚಿವಾಲಯದ ಕಟ್ಟಡದಲ್ಲಿ ಕೆಲವು ವಾಸ್ತು ದೋಷದ ಕಾರಣ. ಮುಖ್ಯಮಂತ್ರಿ ಅಲ್ಲಿ ವಾಸಿಸುತ್ತಿಲ್ಲ. ಮುಖ್ಯಮಂತ್ರಿಗಳಿಗೆ ಸಂಬಂಧಿತ ಓರ್ವ ಹಿರಿಯ ಅಧಿಕಾರಿ, 2023 ರಲ್ಲಿ 650 ಕೋಟೆ ಖರ್ಚು ಮಾಡಿ ಕಟ್ಟಲಾಗಿರುವ 7 ಅಂತಸ್ತಿನ ಕಟ್ಟಡದಲ್ಲಿ ಮುಖ್ಯಮಂತ್ರಿಗಳ ಭವ್ಯ ಕಾರ್ಯಾಲಯವಿದೆ. ಸಚಿವರು, ಮುಖ್ಯ ಸಚಿವರು ಮತ್ತು ಉನ್ನತ ಅಧಿಕಾರಿಗಳ ಕಾರ್ಯಾಲಯಗಳ ಕೂಡ ಇವೆ ಎಂದು ಹೇಳಿದರು.
2. ತೆಲಂಗಾಣದ ಮಾಜಿ ಮುಖ್ಯಮಂತ್ರಿ ಮತ್ತು ‘ಭಾರತ ರಾಷ್ಟ್ರ ಸಮಿತಿ’ ಯ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಇವರ ಕಾರ್ಯಕಾಲದಲ್ಲಿ ಈ ನೂತನ ಕಟ್ಟಡ ಕಟ್ಟೆ ಪೂರ್ಣವಾಗಿತ್ತು. ಅವರು ಏಪ್ರಿಲ್ 30, 2023 ರಲ್ಲಿ ಸಚಿವಾಲಯದ ಉದ್ಘಾಟನೆ ಮಾಡಿದರು. ಸಚಿವಾಲಯದ ಹಳೆಯ ಕಟ್ಟಡ ವಾಸ್ತು ಶಾಸ್ತ್ರದ ಪ್ರಕಾರ ಕಟ್ಟಿಲ್ಲವೆಂದು ಕೆ ಚಂದ್ರಶೇಖರ್ ರಾವ್ ಇವರು ನೂತನ ಸಚಿವಾಲಯದ ಕಾಮಗಾರಿ ನಡೆಸಿದರು. ಕೆ ಚಂದ್ರಶೇಖರ್ ರಾವ್ ಇವರು ಮುಖ್ಯಮಂತ್ರಿ ಸ್ಥಾನದ 2 ಕಾರ್ಯಕಾಲದಲ್ಲಿ ಎಂದರೆ 10 ವರ್ಷದ ಹಳೆಯ ಸಚಿವಾಲಯಕ್ಕೆ ಕೇವಲ 24 ಬಾರಿ ಭೇಟಿ ನೀಡಿದ್ದರು. ಅವರು ಪ್ರಗತಿ ಭವನದಲ್ಲಿನ ಅವರ ನಿವಾಸ ಸ್ಥಾನದಿಂದಲೆ ಅವರ ಕಾರ್ಯನಿರ್ವಹಿಸುತ್ತಿದ್ದರು.
3. ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ಆಪ್ತ ಜನರ ಪ್ರಕಾರ, ಮುಖ್ಯಮಂತ್ರಿ ಆದಾಗಿನಿಂದ ಅವರಿಗೆ ನೂತನ ಕಟ್ಟಡದಲ್ಲಿ ಮೇಲಿಂದ ಮೇಲೆ ಅಸ್ವಸ್ಥ ಎನಿಸುತ್ತಿತ್ತು. ಈ ವಾಸ್ತುವಿನಲ್ಲಿ ದೋಷಗಳು ಕೂಡ ಕಂಡು ಬಂದವು. ಮುಖ್ಯಮಂತ್ರಿ ರೆಡ್ಡಿ ಅವರು ಅನೇಕ ಸಭೆಗಳಲ್ಲಿ ಮಾಹಿತಿ ಸೋರಿಕೆ ಆಗಿತ್ತು. ಅದರಂತೆ ಈ ವರ್ಷದ ಆರಂಭದಲ್ಲಿ ನಡೆದಿರುವ ‘ಫೋನ್ ಟ್ಯಾಪಿಂಗ್’ (ಸಂಚಾರ ವಾಣಿಯಲ್ಲಿನ ಸಂಭಾಷಣೆ ಅರಿವಿಲ್ಲದೆ ಧ್ವನಿ ಮುದ್ರಣ ಮಾಡುವುದು) ಹಗರಣದಿಂದ ಅವರು ‘ಪೋಲೀಸ್ ಕಮಾಂಡ ಕಂಟ್ರೋಲ್ ಸೆಂಟರ್’ ದಿಂದ ಕಾರ್ಯನಿರ್ವಹಿಸಲು ಆರಂಭಿಸಿದರು.
ಸಂಪಾದಕೀಯ ನಿಲುವುವಾಸ್ತುಶಾಸ್ತ್ರವನ್ನು ಸುಳ್ಳು ಎನ್ನುವವರು ಈ ಬಗ್ಗೆ ಏನು ಹೇಳುತ್ತಾರೆ? |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ