ಕರ್ನಾಟಕದ ‘ಯುವ ಬ್ರಿಗೇಡ್’ನ ಹಿಂದುತ್ವನಿಷ್ಠ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ಪಿತೃ ವಿಯೋಗ

ಬೆಂಗಳೂರು – ಪ್ರಸಿದ್ಧ ವಾಗ್ಮಿ, ಚಿಂತಕ, ಅಂಕಣಕಾರ, ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಹಾಗೆಯೇ ಯುವ ಬ್ರಿಗೇಡ್ ಈ ಹಿಂದುತ್ವನಿಷ್ಠ ಸಂಘಟನೆಯ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಅವರ ತಂದೆ ದವಿದಾಸ್ ಸುಬ್ಬರಾಯ ಶೇಟ್ (ವಯಸ್ಸು ೮೨) ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ದವಿದಾಸ್ ಸುಬ್ಬರಾಯ ಶೇಟ್ ಅವರು ಸೂಲಿಬೆಲೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಸನಾತನ ಪರಿವಾರ ಪ್ರಾರ್ಥಿಸಿದೆ.

ಭಾಜಪ ನಾಯಕ ಪ್ರತಾಪ್ ಸಿಂಹ ಅವರಿಂದ ಸಂತಾಪ

ಭಾಜಪ ನಾಯಕ ಪ್ರತಾಪ್ ಸಿಂಹ ಅವರು ತಮ್ಮ ಸಂತಾಪ ಸಂದೇಶದಲ್ಲಿ, “ನನ್ನ ಸ್ನೇಹಿತ ಶ್ರೀ. ಚಕ್ರವರ್ತಿ ಸೂಲಿಬೆಲೆ ಅವರ ತಂದೆ ದವಿದಾಸ್ ಸುಬ್ಬರಾಯ ಶೇಟ್ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ಸಹಿಸುವ ಶಕ್ತಿ ದೊರೆಯಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ” ಎಂದು ಹೇಳಿದ್ದಾರೆ.