|

ನಾಗಪುರ – ಕಳೆದ ವಾರ ವೇಗವಾಗಿ ಬಂದ ಟ್ರಕ್ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಆಕೆಯ ಶವವನ್ನು ಮನೆಗೆ ಕೊಂಡೊಯ್ಯಲು ಹೆದ್ದಾರಿಯಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ. ಇದರಿಂದ ಆಕೆಯ ಅಸಹಾಯಕ ಪತಿ ದ್ವಿಚಕ್ರ ವಾಹನದಲ್ಲೇ ಪತ್ನಿಯ ಶವವನ್ನು ಇರಿಸಿಕೊಂಡು ಮನೆ ತಲುಪಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪೊಲೀಸರು ಈ ಅಪಘಾತದ ತನಿಖೆ ನಡೆಸುತ್ತಿದ್ದರು. ಟ್ರಕ್ ನ ಮೇಲೆ ಕೆಂಪು ಗುರುತು ಇತ್ತು ಎಂಬ ಮಾಹಿತಿ ಲಭ್ಯವಿತ್ತು. ಪೊಲೀಸರು ಕೃತಕ ಬುದ್ಧಿಮತ್ತೆಯ(ಎಐ) ಸಹಾಯದಿಂದ ಈ ಪ್ರಕರಣವನ್ನು ಭೇದಿಸಿ, ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ. ಎಐ ಬಳಸಿ ಅಪರಾಧವನ್ನು ಭೇದಿಸಿದ ಮಹಾರಾಷ್ಟ್ರ ರಾಜ್ಯದ ಮೊದಲ ಪ್ರಕರಣ ಇದಾಗಿದೆ.
1. ಪೊಲೀಸರು ‘ಮಾರ್ವಲ್’ ಎಂಬ ಸರಕಾರಿ ಸಂಸ್ಥೆಯ ಸಹಾಯವನ್ನು ಪಡೆದರು. ಇದಕ್ಕಾಗಿ, ಮೂರು ಟೋಲ್ ಪ್ಲಾಜಾಗಳಿಂದ 12 ಗಂಟೆಗಳ ಸಿಸಿಟಿವಿ ದೃಶ್ಯಾವಳಿಗಳ ಮಾಹಿತಿಯನ್ನು ಸಂಗ್ರಹಿಸಿ, ‘AI’ ಅಲ್ಗೊರಿದಮ್ ಅನ್ನು ಬಳಸಲಾಯಿತು.
2. ಟ್ರಕ್ ನ ವೇಗ ಮತ್ತು ಅದರ ಮೇಲಿದ್ದ ಕೆಂಪು ಗುರುತಿನ ಆಧಾರದ ಮೇಲೆ ಅಪಘಾತಕ್ಕೆ ಕಾರಣವಾದ ಟ್ರಕ್ ಅನ್ನು ಪತ್ತೆಹಚ್ಚಲಾಯಿತು. ನಂತರ, ಟ್ರಕ್ ಚಾಲಕನನ್ನು ಉತ್ತರ ಪ್ರದೇಶದ ಫರೂಕಾಬಾದ್ ನಲ್ಲಿ ಬಂಧಿಸಲಾಯಿತು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ