(ಘರ್‌ವಾಪಸಿ ಅಂದರೆ ಹಿಂದೂ ಧರ್ಮಕ್ಕೆ ಮರಳಿ ಬರುವುದು)

ಖಾಂಡ್ವಾ (ಮಧ್ಯಪ್ರದೇಶ) – ಛತ್ತರ್‌ಪುರದ ಶಿಫಾ ಎಂಬ ಹೆಸರಿನ ಓರ್ವ ಮುಸ್ಲಿಂ ಯುವತಿಯು ‘ಘರ್‌ವಾಪಸಿ’ ಮಾಡಿದ್ದಾಳೆ. ಆಕೆ ರಾಹುಲ್ ವರ್ಮಾ ಎಂಬ ಹಿಂದೂ ಯುವಕನೊಂದಿಗೆ ವಿವಾಹವಾದಳು. ಈ ವಿವಾಹವು ಖಾಂಡ್ವಾದಲ್ಲಿನ ಮಹಾದೇವಗಡ ದೇವಾಲಯದಲ್ಲಿ ನೆರವೇರಿತು. ಹಿಂದೂ ಧರ್ಮಕ್ಕೆ ಮರಳಿದ ನಂತರ ಆಕೆಗೆ ‘ಶಾನ್ವಿ’ ಎಂದು ಹೆಸರಿಡಲಾಗಿದೆ. ಶಾನ್ವಿಯು ಶಿವನಿಗೆ ರುದ್ರಾಭಿಷೇಕವನ್ನೂ ಮಾಡಿದಳು. ಸಿರ್ಪುರದ ಕೃಷ್ಣಾ ಪಟೇಲ್ ಎಂಬವರು ಆಕೆಯ ಕನ್ಯಾದಾನ ಮಾಡಿದರು ಮತ್ತು ನವವಿವಾಹಿತ ದಂಪತಿಗೆ ‘ಶ್ರೀರಾಮಚರಿತಮಾನಸ’ ಗ್ರಂಥವನ್ನು ಉಡುಗೊರೆಯಾಗಿ ನೀಡಿದರು. ಮದುವೆಯ ನಂತರ ಶಾನ್ವಿ ಮಾತನಾಡಿ, “ನಾನು ಬಾಲ್ಯದಿಂದಲೂ ಸನಾತನ ಧರ್ಮದ ಕಡೆಗೆ ಆಕರ್ಷಿತಳಾಗಿದ್ದೆ. ಬಾಲ್ಯದಿಂದಲೇ ಹಿಂದೂ ದೇವರುಗಳು ನನ್ನ ಕನಸಿನಲ್ಲಿ ಬಂದು ನನಗೆ ಆಶೀರ್ವಾದ ಮಾಡುತ್ತಿದ್ದರು, ಆದ್ದರಿಂದ ನಾನು ಸನಾತನ ಧರ್ಮದಲ್ಲಿ ನಂಬಿಕೆ ಇಡಲು ಪ್ರಾರಂಭಿಸಿದೆ. ಸನಾತನ ಧರ್ಮದಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತದೆ. ನಾನು ಮಹಾದೇವಗಡದ ಬಗ್ಗೆ ಬಹಳಷ್ಟು ಕೇಳಿದ್ದೆ; ಆದ್ದರಿಂದ ನಾನು ಇಲ್ಲೇ ಮದುವೆಯಾಗಲು ನಿರ್ಧರಿಸಿದ್ದೆ. ಭಗವಾನ್ ಭೋಲೇನಾಥ್ ಸಹ ನನ್ನ ಆಸೆಯನ್ನು ಪೂರೈಸಿದರು. ಈಗ ಅವರ ಆಶೀರ್ವಾದ ನಮ್ಮಿಬ್ಬರ ಮೇಲೆ ಇರುತ್ತದೆ” ಎಂದರು.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ