
ದರಭಾಂಗ (ಬಿಹಾರ) – ಜಿಲ್ಲೆಯ ಹಾಟ್‌ಗಾಚಿ ಗ್ರಾಮದಲ್ಲಿ ಹಿಜ್ಬುಲ್ ರೆಹಮಾನ್ ಅಲಿಯಾಸ್ ಆರ್ಜು ಎಂಬ ಮುಸ್ಲಿಂ ಯುವಕನಿಂದ ಹಿಂದೂ ಯುವತಿಯೊಬ್ಬಳ ಅಪಹರಣದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರಲ್ಲಿ ರೆಹಮಾನ್ ದ್ವಿಚಕ್ರ ವಾಹನದಲ್ಲಿ ಬಂದು ಬಲವಂತವಾಗಿ ಯುವತಿಯನ್ನು ಅಪಹರಿಸುವುದು ಕಂಡುಬರುತ್ತದೆ. ಸಂತ್ರಸ್ತೆ ಕೂಗುತ್ತಾ, ವಿರೋಧಿಸುತ್ತಾಳೆ; ಆದರೆ ಆರೋಪಿ ಅವಳ ಕೈ ಹಿಡಿದು ಅವಳೊಂದಿಗೆ ಪರಾರಿಯಾಗುತ್ತಾನೆ. ಈ ಘಟನೆಯಿಂದ ಗ್ರಾಮದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಯಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
೧. ಸಂತ್ರಸ್ತ ಯುವತಿಯ ತಂದೆಯು, ಜುಲೈ ೨೭ ರಂದು ಹಿಜ್ಬುಲ್ ರೆಹಮಾನ್ ಅವರ ವೀಳ್ಯದೆಲೆ ಅಂಗಡಿ ಮತ್ತು ಮನೆಗೆ ಬಂದು ಗಲಾಟೆ ಮಾಡಿದ್ದನು. ಸಂತ್ರಸ್ತ ಯುವತಿಯ ತಂದೆ ಜುಲೈ ೨೮ ರಂದು ಅಲಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು; ಆದರೆ ಪೊಲೀಸರಿಂದ ಯಾವುದೇ ಕಠಿಣ ಕ್ರಮ ಕೈಗೊಂಡಿರಲಿಲ್ಲ, ಎಂದು ಹೇಳಿದದ್ದಾರೆ.
೨. ಜುಲೈ ೨೯ ರಂದು, ಹಿಂದೂ ಯುವತಿ ಅಂಗಡಿಯಿಂದ ಮನೆಗೆ ಹಿಂತಿರುಗುತ್ತಿದ್ದಾಗ, ರೆಹಮಾನ್ ಅವಳನ್ನು ಬಲವಂತವಾಗಿ ದ್ವಿಚಕ್ರ ವಾಹನದಲ್ಲಿ ಕೂರಿಸಿ ಅಪಹರಿಸಿದನು.
೩. ದರ್ಭಂಗಾ ಪೊಲೀಸ್ ಅಧೀಕ್ಷಕ ಜಗನ್ನಾಥ ರೆಡ್ಡಿ ಅವರ ನಿರ್ದೇಶನದಂತೆ, ಉಪ ಪೊಲೀಸ್ ಅಧೀಕ್ಷಕ ಅಶುತೋಷ ಕುಮಾರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು. ಈ ತಂಡವು ತಕ್ಷಣವೇ ಕಾರ್ಯಪ್ರವೃತ್ತವಾಗಿ ಹಿಜ್ಬುಲ್ ರೆಹಮಾನ್‌ನನ್ನು ಬಂಧಿಸಿದೆ.
ಸಂಪಾದಕೀಯ ನಿಲುವುಇಂತಹವರಿಗೆ ಭಾರತೀಯ ಕಾನೂನಿನ ಭಯವಿಲ್ಲದ್ದರಿಂದ ಶರಿಯತ್ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸುವಂತೆ ಸಂತ್ರಸ್ತೆಯ ಕುಟುಂಬಸ್ಥರು ಬೇಡಿಕೆ ಇಟ್ಟರೆ ಆಶ್ಚರ್ಯಪಡಬೇಕಾಗಿಲ್ಲ! |
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ