ಪ್ರಾಥಮಿಕ ಅಂದಾಜಿನಲ್ಲಿ ವೈಯಕ್ತಿಕ ದ್ವೇಷದಿಂದ ಕೊಲೆ

ಸೋನಿಪತ್ (ಹರಿಯಾಣ) – ಇಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸೈನಿಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಜುಲೈ ೨೭ರ ರಾತ್ರಿ ತಡವಾಗಿ ಈ ಘಟನೆ ನಡೆದಿದೆ. ಗುಂಡಿನ ಶಬ್ದ ಕೇಳಿ ಕುಟುಂಬದ ಸದಸ್ಯರು ಅಲ್ಲಿಗೆ ಬಂದರು. ಸೈನಿಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಆತನನ್ನು ಮೃತ ಎಂದು ಘೋಷಿಸಿದರು.
ಮಗು ಹುಟ್ಟಿ ೩ ದಿನಗಳಷ್ಟೇ ಆಗಿತ್ತು!
ಸೈನಿಕನ ಹೆಸರು ಕೃಷ್ಣಾ, ಇವರು ಖೇಡಿ ದಮ್ಕನ್ ಗ್ರಾಮದ ನಿವಾಸಿಯಾಗಿದ್ದರು. ಕೃಷ್ಣಾ ಪ್ರಸ್ತುತ ಛತ್ತೀಸ್‌ಗಢದಲ್ಲಿ ನಿಯೋಜಿತರಾಗಿದ್ದರು ಮತ್ತು ೧ ತಿಂಗಳ ರಜೆ ತೆಗೆದುಕೊಂಡು ಮನೆಗೆ ಬಂದಿದ್ದರು. ಕೃಷ್ಣಾ ಅವರಿಗೆ ೨ ಮಕ್ಕಳಿದ್ದು, ಚಿಕ್ಕ ಮಗುವಿಗೆ ಕೇವಲ ೩ ದಿನಗಳ ಹಿಂದೆ ಜನ್ಮ ನೀಡಿತ್ತು. ಅವರ ಪತ್ನಿ ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಕೃಷ್ಣಾ ಹರಿದ್ವಾರಕ್ಕೆ ಕಾವಡ್ ಯಾತ್ರೆಗೆ ಹೋಗಿದ್ದಾಗ ಅಲ್ಲಿ ಕೆಲವು ಯುವಕರೊಂದಿಗೆ ಜಗಳವಾಗಿತ್ತು. ಆ ಕಾರಣದಿಂದಲೇ ಅವರ ಹತ್ಯೆ ನಡೆದಿದೆ ಎಂದು ಅಂದಾಜಿಸಲಾಗಿದೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !