ಅಸ್ಸಾಂನಲ್ಲಿ ಅಕ್ರಮ ಗೋಮಾಂಸ ಮಾರಾಟ: 112 ಅಂಗಡಿಗಳ ಮೇಲೆ ದಾಳಿ, 1 ಸಾವಿರ ಕೆಜಿಗೂ ಹೆಚ್ಚು ಗೋಮಾಂಸ ವಶಕ್ಕೆ!

ಗುವಾಹಟಿ – ಅಸ್ಸಾಂ ಪೊಲೀಸರು ರಾಜ್ಯದಾದ್ಯಂತ ಗೋಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 112 ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ 1 ಸಾವಿರ ಕೆಜಿಗೂ ಹೆಚ್ಚು ಗೋಮಾಂಸವನ್ನು ವಶಕ್ಕೆ ಪಡೆದು, 132 ಜನರನ್ನು ಬಂಧಿಸಿದ್ದಾರೆ. ಅಸ್ಸಾಂನಲ್ಲಿ ಗೋಮಾಂಸ ಮತ್ತು ಗೋಹತ್ಯೆ ಕುರಿತಂತೆ ವಿವಾದ ನಡೆಯುತ್ತಿರುವಾಗಲೇ ಈ ಕ್ರಮ ಕೈಗೊಳ್ಳಲಾಗಿದೆ.

1. ಅಸ್ಸಾಂನಲ್ಲಿ ಹಲವೆಡೆ ದೇವಾಲಯಗಳ ಬಳಿ ಗೋವಿನ ಅವಶೇಷಗಳು ಪತ್ತೆಯಾದ ನಂತರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈದ್ ನ ಸಮಯದಲ್ಲಿ ಅಶಾಂತಿ ಹರಡುವ ಪ್ರಯತ್ನ ಇದು ಎಂದು ಹೇಳಿದ್ದರು.

2. ‘ಅಸ್ಸಾಂ ಪಶು ಸಂರಕ್ಷಣಾ ಕಾಯ್ದೆ, 2021’ ರ ಪ್ರಕಾರ ಗೋಮಾಂಸ ಸೇವನೆಯನ್ನು ನಿಷೇಧಿಸಿಲ್ಲ; ಆದರೆ ದೇವಾಲಯಗಳ ಅಥವಾ ಹಿಂದೂ ಬಹುಸಂಖ್ಯಾತ ಪ್ರದೇಶಗಳ 5 ಕಿಲೋಮೀಟರ್ ನ ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

3. ಕಳೆದ ವರ್ಷ ಮುಖ್ಯಮಂತ್ರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಘೋಷಿಸಿದ್ದರು.

ಸಂಪಾದಕೀಯ ನಿಲುವು

ಸರಕಾರ ಇಂತಹ ಅಂಗಡಿಗಳ ಪರವಾನಗಿಗಳನ್ನು ಶಾಶ್ವತವಾಗಿ ಏಕೆ ರದ್ದುಗೊಳಿಸುವುದಿಲ್ಲ?