World Yoga Day : ಭಾರತ ಸಹಿತ 191 ದೇಶಗಳಲ್ಲಿ ಯೋಗ ದಿನಾಚರಣೆ

ವಿಶಾಖಪಟ್ಟಣಂ (ಆಂಧ್ರಪ್ರದೇಶ) – ಜೂನ್ 21 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ 11ನೇ ‘ಅಂತರಾಷ್ಟ್ರೀಯ ಯೋಗ ದಿನ’ವನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು. ‘ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್’ ಪ್ರಕಾರ, 191 ದೇಶಗಳಲ್ಲಿ 1 ಸಾವಿರದ 300 ಸ್ಥಳಗಳಲ್ಲಿ 2 ಸಾವಿರಕ್ಕೂ ಹೆಚ್ಚು ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರಧಾನಮಂತ್ರಿ ಮೋದಿ ಅವರು ವಿಶಾಖಪಟ್ಟಣಂನಲ್ಲಿ 3 ಲಕ್ಷ ನಾಗರಿಕರು ಮತ್ತು 40 ದೇಶಗಳ ರಾಯಭಾರಿಗಳೊಂದಿಗೆ ಯೋಗ ದಿನವನ್ನು ಆಚರಿಸಿದರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ಪ್ರಧಾನಮಂತ್ರಿಗಳೊಂದಿಗೆ ಯೋಗಾಸನಗಳನ್ನು ಮಾಡಿದರು. ಈ ವರ್ಷದ ಯೋಗ ದಿನದ ಥೀಮ್ (ಶೀರ್ಷಿಕೆ) ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂದಾಗಿತ್ತು.

ಯೋಗವು ಶಾಂತಿಯ ಮಾರ್ಗವನ್ನು ತೋರಿಸುತ್ತದೆ! – ಪ್ರಧಾನಿ ಮೋದಿ

ಯೋಗಾಸನಗಳ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಮೋದಿ ಇವರು, ಇಂದು ಜಗತ್ತಿನಲ್ಲಿ ಅಶಾಂತಿ ಮತ್ತು ಅಸ್ಥಿರತೆ ಹೆಚ್ಚುತ್ತಿರುವಾಗ, ಯೋಗ ಎಂದರೆ ಜೋಡಿಸುವುದು ಮತ್ತು ಯೋಗದಿಂದ ಇಡೀ ಜಗತ್ತು ಹೇಗೆ ಜೋಡಿಸಲ್ಪಟ್ಟಿದೆ?, ಎಂಬುದನ್ನು ನೋಡುವುದು ಸಂತೋಷ ತಂದಿದೆ, ಎಂದು ಹೇಳಿದರು.