ಬ್ರಿಟನ್‌ನ ವಾಯುದಳದ ಎಫ್-35 ಯುದ್ಧ ವಿಮಾನವು ತಿರುವನಂತಪುರಂ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ

ತಿರುವನಂತಪುರಂ (ಕೇರಳ) – ಬ್ರಿಟನ್‌ನ ರಾಯಲ ಏರ ಫೋರ್ಸನ ಎಫ್-35 ಯುದ್ಧವಿಮಾನವು ಜೂನ್ 14 ರಂದು ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಇಳಿದಿದೆ. ಹಿಂದೂ ಮಹಾಸಾಗರದಲ್ಲಿ ನಿಯಮಿತ ಕಾರ್ಯಾಚರಣೆಯ ಸಮಯದಲ್ಲಿ ಇಂಧನದ ಕೊರತೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬ್ರಿಟಿಷ್ ವಿಮಾನವು ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಬ್ರಿಟಿಷ್ ವಿಮಾನವಾಹಕ ನೌಕೆಯಿಂದ ಹಾರಾಟ ನಡೆಸಿತ್ತು. ಚಾಲಕನು ವಿಮಾನವನ್ನು ಯುದ್ಧನೌಕೆಯಲ್ಲಿ ಇಳಿಸಲು ಹಲವಾರು ಬಾರಿ ಪ್ರಯತ್ನಿಸಿದರೂ, ಸಮುದ್ರದಲ್ಲಿನ ಪ್ರತಿಕೂಲ ಪರಿಸ್ಥಿತಿ ಮತ್ತು ಬಿರುಗಾಳಿಯಿಂದಾಗಿ ಅದನ್ನು ಇಳಿಸುವುದು ಸುರಕ್ಷಿತವಾಗಿರಲಿಲ್ಲ. ಅದೇ ಸಮಯದಲ್ಲಿ, ಇಂಧನದ ಮಟ್ಟವು ಕಡಿಮೆಯಾಗುತ್ತಿರುವುದನ್ನು ಗಮನಿಸಿ, ಚಾಲಕನು ಭಾರತೀಯ ವಾಯು ಸಂಚಾರ ನಿಯಂತ್ರಕರನ್ನು ಸಂಪರ್ಕಿಸಿ ಹತ್ತಿರದ ನಾಗರಿಕ ವಾಯುಪ್ರದೇಶದಲ್ಲಿ ವಿಮಾನವನ್ನು ಇಳಿಸಲು ತುರ್ತು ಅನುಮತಿ ಕೋರಿದರು. ನಂತರ, ಈ ವಿಮಾನವನ್ನು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಇಳಿಸಲು ಅನುಮತಿ ನೀಡಲಾಯಿತು.