ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿರುದ್ಧ ದೆಹಲಿ ಪೊಲೀಸರ ಕ್ರಮ: 134 ಜನರ ಬಂಧನ!

ನವದೆಹಲಿ – ದೆಹಲಿ ಪೊಲೀಸರು ದಕ್ಷಿಣ ದೆಹಲಿಯಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಅಭಿಯಾನದ ಅಡಿಯಲ್ಲಿ ಕಳೆದ 5 ತಿಂಗಳಲ್ಲಿ 134 ಬಾಂಗ್ಲಾದೇಶಿ ನಾಗರಿಕರನ್ನು ವಶಕ್ಕೆ ಪಡೆಯಲಾಗಿದೆ. ದಕ್ಷಿಣ ದೆಹಲಿಯ ಪೊಲೀಸ್ ಆಯುಕ್ತ ಅಂಕಿತ ಚೌಹಾಣ್ ಇತ್ತೀಚೆಗೆ ಈ ಮಾಹಿತಿ ನೀಡಿದರು.

ಪೊಲೀಸ್ ಆಯುಕ್ತರು ನೀಡಿದ ಮಾಹಿತಿ ಪ್ರಕಾರ, ‘ಆಪರೇಷನ್ ಪುಷ್ ಬ್ಯಾಕ್’ ಅಭಿಯಾನವನ್ನು 2024ರ ಡಿಸೆಂಬರ್ 2 ರಿಂದ 2025 ರ ಜೂನ್ 10 ರವರೆಗೆ ನಡೆಸಲಾಯಿತು. ಈ ಅವಧಿಯಲ್ಲಿ ವಿವಿಧ ಪ್ರದೇಶಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ನಾಗರಿಕರನ್ನು ಹುಡುಕಲಾಯಿತು. ಇದಕ್ಕಾಗಿ ಪೊಲೀಸರು ನಗರದಲ್ಲಿ ೧೪ ಪ್ರತ್ಯೇಕ ಕಾರ್ಯಾಚರಣೆಗಳನ್ನು ನಡೆಸಿದರು. ಈ ಕಾರ್ಯಾಚರಣೆಯಲ್ಲಿ 134 ಬಾಂಗ್ಲಾದೇಶಿ ವಲಸಿಗರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರಲ್ಲಿ 38 ಮಹಿಳೆಯರು ಮತ್ತು 43 ಮಕ್ಕಳು ಸೇರಿದ್ದಾರೆ.

ಸಂಪಾದಕೀಯ ನಿಲುವು

ದೇಶದ ರಾಜಧಾನಿಯಲ್ಲೇ ಇಂತಹ ಪರಿಸ್ಥಿತಿಯಿದ್ದರೆ, ದೇಶದ ಇತರ ಭಾಗಗಳಲ್ಲಿ ಹೇಗಿರಬಹುದು ಎಂದು ವಿಚಾರ ಮಾಡದಿರುವದೇ ಉತ್ತಮ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಪರ್ಯಾಯ!