Technical Errors In Boeing : ಅಮೆರಿಕಾದ ‘ಬೋಯಿಂಗ್’ ಕಂಪನಿಯ ವಿಮಾನಗಳಲ್ಲಿ ಅನೇಕ ತಾಂತ್ರಿಕ ದೋಷಗಳು!

ದೋಷಗಳನ್ನು ಬಹಿರಂಗಪಡಿಸಿದ ಉದ್ಯೋಗಿಯ ಅನುಮಾನಾಸ್ಪದ ಸಾವು

ಕರ್ಣಾವತಿ (ಗುಜರಾತ್) – ಇಲ್ಲಿ ಏರ್ ಇಂಡಿಯಾದ ‘ಬೋಯಿಂಗ್ 787 ಡ್ರೀಮ್‌ಲೈನರ್’ ವಿಮಾನವು ಪತನಗೊಂಡ ನಂತರ, ಈ ವಿಮಾನದಲ್ಲಿನ ತಾಂತ್ರಿಕ ದೋಷಗಳ ಮಾಹಿತಿ ಹೊರಬರುತ್ತಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕಾದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಅಪಘಾತಕ್ಕೊಳಗಾಗಿದ್ದರೂ, ಈ ಹಿಂದೆ ಕೆಲವು ಘಟನೆಗಳಲ್ಲಿ ಅಪಘಾತಗಳು ಅದೃಷ್ಟವಶಾತ್ ತಪ್ಪಿವೆ ಎಂಬ ಮಾಹಿತಿ ಬಹಿರಂಗವಾಗಿದೆ.

1. ‘ಏರೋ ಇನ್‌ಸೈಡ್’ ವರದಿಯ ಪ್ರಕಾರ, ಡ್ರೀಮ್‌ಲೈನರ್ ವಿಮಾನಗಳಲ್ಲಿ ಎಂಜಿನ್, ಗೇರ್, ಫ್ಲಾಪ್, ಕ್ಯಾಬಿನ್ ಪ್ರೆಶರ್‌ನಲ್ಲಿ ಕಡಿಮೆ ಮತ್ತು ಹೆಚ್ಚಿನ ಎತ್ತರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬಂದಿವೆ. ಏರ್ ಇಂಡಿಯಾ ಬೋಯಿಂಗ್ ವಿಮಾನಗಳನ್ನು ಖರೀದಿಸಿ ಬಳಸುತ್ತಿದೆ. ಈ ವಿಮಾನಗಳನ್ನು ಬಳಸುವಾಗ ಏರ್ ಇಂಡಿಯಾಗೆ ಈ ಸಮಸ್ಯೆಗಳು ಎದುರಾಗಿವೆ. ಡಿಸೆಂಬರ್ 13, 2024 ರಂದು ನವದೆಹಲಿಯಿಂದ ಬರ್ಮಿಂಗ್‌ಹ್ಯಾಮ್ (ಬ್ರಿಟನ್) ಗೆ ಪ್ರಯಾಣಿಸುವಾಗ, AI-113 ವಿಮಾನದ ಬರ್ಮಿಂಗ್‌ಹ್ಯಾಮ್‌ನ ರನ್‌ವೇ-15 ರಲ್ಲಿ ‘ನೋಸ್ ಗೇರ್’ ನಲ್ಲಿ ಹೈಡ್ರಾಲಿಕ್ ಸಮಸ್ಯೆ ಉಂಟಾಗಿತ್ತು.

2. ಏರ್ ಇಂಡಿಯಾದ ಡ್ರೀಮ್‌ಲೈನರ್ ವಿಮಾನವು 136 ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇದರಿಂದ ಏರ್ ಇಂಡಿಯಾಗೆ ಕೋಟ್ಯಂತರ ರೂಪಾಯಿ ನಷ್ಟವಾಯಿತು. ಈ ಸಮಸ್ಯೆಗಳು ಉದ್ಭವಿಸಿದ ನಂತರ, ಅಮೆರಿಕಾದ ‘ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್’ ಬೋಯಿಂಗ್‌ನ ಡ್ರೀಮ್‌ಲೈನರ್ ಕುರಿತು ತನಿಖೆಯನ್ನು ಪ್ರಾರಂಭಿಸಿತು.

3. 2015 ರಿಂದ 2024 ರ ಅವಧಿಯಲ್ಲಿ ಏರ್ ಇಂಡಿಯಾದ ಡ್ರೀಮ್‌ಲೈನರ್ ವಿಮಾನಗಳಲ್ಲಿ ಅನೇಕ ಸಮಸ್ಯೆಗಳು ಕಂಡುಬಂದವು. ತಾಂತ್ರಿಕ ತೊಂದರೆಗಳಿಂದಾಗಿ ಆದ ಅಪಘಾತಗಳಲ್ಲಿ ಅನೇಕ ಪ್ರಯಾಣಿಕರು ಗಾಯಗೊಂಡರು; ಆದರೆ ಕರ್ಣಾವತಿಯ ಘಟನೆಯಲ್ಲಿ ದೊಡ್ಡ ಪ್ರಮಾಣದ ಜೀವಹಾನಿಯಾಗಿದೆ.

ಬೋಯಿಂಗ್ 737 ವಿಮಾನದ ಅಪಘಾತಗಳು

2024 ರಲ್ಲಿ ದಕ್ಷಿಣ ಕೊರಿಯಾದಲ್ಲಿ ‘ಬೋಯಿಂಗ್ 737-800’ ವಿಮಾನವು ಪತನಗೊಂಡಿತು, ಇದರಲ್ಲಿ ಸುಮಾರು 180 ಜನರು ಸಾವನ್ನಪ್ಪಿದರು. ಜನವರಿ 2024 ರಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಬಾಗಿಲು ಪ್ಲಗ್‌ಗಳು ಹಾರಿಹೋಗಿದ್ದವು. 2018 ಮತ್ತು 2019 ರ ಅಪಘಾತಗಳಲ್ಲಿ ಕ್ರಮವಾಗಿ 189 ಮತ್ತು 157 ಜನರು ಸಾವನ್ನಪ್ಪಿದರು. ಹೀಗಿದ್ದರೂ ಬೋಯಿಂಗ್ 737-800 ಇನ್ನೂ ಕಾರ್ಯನಿರ್ವಹಿಸುತ್ತಿದೆ.

4. ಮಾರ್ಚ್ 2013 ರಲ್ಲಿ, ಜಪಾನ್ ಏರ್‌ಲೈನ್ಸ್‌ನ ಬೋಯಿಂಗ್ 787 ವಿಮಾನದಲ್ಲಿ ಎರಡು ಬಾರಿ ಇಂಧನ ಸೋರಿಕೆ ಸಮಸ್ಯೆ ಉಂಟಾಯಿತು, ಇದರಿಂದ ವಿಮಾನವು ಹಾರಲು ಸಾಧ್ಯವಾಗಲಿಲ್ಲ. ಅದೇ ರೀತಿ, ಯುನೈಟೆಡ್ ಏರ್‌ಲೈನ್ಸ್‌ನ ಬೋಯಿಂಗ್ 787 ವಿಮಾನದ ಮುಖ್ಯ ಬ್ಯಾಟರಿಯಲ್ಲಿ ಸಮಸ್ಯೆ ಇದೆ ಎಂದು ವರದಿಯಾಗಿತ್ತು. ಇದರ ನಂತರ, ಜಪಾನ್ ಮತ್ತು ಅಮೆರಿಕಾ ಸರಕಾರಗಳು ಬೋಯಿಂಗ್ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದವು.

5. ಭಾರತದಲ್ಲಿ ಏರ್ ಇಂಡಿಯಾಗೆ, ಬೋಯಿಂಗ್ ಕಂಪನಿಯು ಭಾರೀ ಬಿರುಗಾಳಿಯ ಪ್ರದೇಶಗಳಲ್ಲಿ ಡ್ರೀಮ್‌ಲೈನರ್ ಹಾರಾಟವನ್ನು ತಪ್ಪಿಸಲು ಸಲಹೆ ನೀಡಿತ್ತು; ಏಕೆಂದರೆ ಇದು ಎಂಜಿನ್‌ಗಳಲ್ಲಿ ಐಸ್ ರೂಪುಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ದೆಹಲಿ-ಟೋಕಿಯೋ ಮಾರ್ಗದಲ್ಲಿ ವಿಮಾನಗಳ ಹಾರಾಟವನ್ನು ನಿಲ್ಲಿಸಬೇಕಾಯಿತು. ಏರ್ ಇಂಡಿಯಾದ ದೆಹಲಿ-ಕೋಲಕಾತಾ 787 ವಿಮಾನವು ಭಾರೀ ಗಾಳಿಯಿಂದ ಹಾನಿಗೊಳಗಾಗಿ ದೆಹಲಿಗೆ ಮರಳಿತ್ತು.

ಬೋಯಿಂಗ್‌ನ ಮಾಜಿ ಇಂಜಿನಿಯರ್ ಸಮಸ್ಯೆಗಳನ್ನು ಬಹಿರಂಗಪಡಿಸಿದ್ದರು

 

View this post on Instagram

 

A post shared by NBC News (@nbcnews)

2024 ರಲ್ಲಿ ಬೋಯಿಂಗ್ ಕಂಪನಿಯ ಇಂಜಿನಿಯರ್ ಸ್ಯಾಮ್ ಸಾಲೆಹ್‌ಪುರ್ ಈ ವಿಮಾನದ ರಚನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಅವರು, ಬೋಯಿಂಗ್ ವಿಮಾನಗಳನ್ನು ನಿರ್ಮಿಸುವಾಗ ಕೆಲವು ಕಡೆ ‘ಶಾರ್ಟ್‌ಕಟ್’ ಗಳನ್ನು ಅಳವಡಿಸಿತ್ತು. 787 ಡ್ರೀಮ್‌ಲೈನರ್ ವಿಮಾನದ ‘ಫ್ಯೂಸೆಲೇಜ್’ ನ ಕೆಲವು ಭಾಗಗಳನ್ನು ತಪ್ಪಾದ ರೀತಿಯಲ್ಲಿ ಜೋಡಿಸಲಾಗಿತ್ತು. ಸಾವಿರಾರು ಹಾರಾಟಗಳ ನಂತರ ಅವು ಗಾಳಿಯಲ್ಲಿಯೇ ಮುರಿಯಬಹುದಾಗಿತ್ತು, ಎಂದು ಹೇಳಿದ್ದರು.

ಬೋಯಿಂಗ್ ಕಳಪೆ ಗುಣಮಟ್ಟದ ಬಿಡಿಭಾಗಗಳನ್ನು ಬಳಸಿದೆ ಎಂದು ಹೇಳಿದ ಮಾಜಿ ಉದ್ಯೋಗಿಯ ಅನುಮಾನಾಸ್ಪದ ಸಾವು

ಬೋಯಿಂಗ್‌ನ ಮಾಜಿ ಉದ್ಯೋಗಿ ಜಾನ್ ಬಾರ್ನೆಟ್ ಅವರು 2017 ರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಬಾರ್ನೆಟ್ ಬೋಯಿಂಗ್‌ನಲ್ಲಿ 30 ವರ್ಷ ಕೆಲಸ ಮಾಡಿದ್ದರು. ಅವರ ಸಾವಿಗೆ ಮೊದಲು, ಅವರು ಬೋಯಿಂಗ್ ವಿರುದ್ಧದ ಮೊಕದ್ದಮೆಯಲ್ಲಿ ಸಾಕ್ಷಿ ಹೇಳಿದ ಏಕೈಕ ಉದ್ಯೋಗಿಯಾಗಿದ್ದರು. ಬಾರ್ನೆಟ್ ಬಿಬಿಸಿಗೆ, 787 ಡ್ರೀಮ್‌ಲೈನರ್ ವಿಮಾನದ ರಚನೆಯಲ್ಲಿ ಬೋಯಿಂಗ್ ಕಳಪೆ ಗುಣಮಟ್ಟದ ಬಿಡಿಭಾಗಗಳನ್ನು ಬಳಸಿದೆ ಎಂದು ಹೇಳಿದ್ದರು. ವಿಮಾನಗಳನ್ನು ಸಮಯಕ್ಕೆ ಸರಿಯಾಗಿ ಸಿದ್ಧಪಡಿಸಲು, ಕಸದ ಡಬ್ಬದಿಂದ ಕಳಪೆ ಗುಣಮಟ್ಟದ ಬಿಡಿಭಾಗಗಳನ್ನು ತೆಗೆದು ವಿಮಾನಗಳಲ್ಲಿ ಅಳವಡಿಸಲಾಗಿತ್ತು. ವಿಮಾನ ನಿರ್ಮಾಣದ ಆತುರದಲ್ಲಿ ಸುರಕ್ಷತಾ ಮಾನದಂಡಗಳೊಂದಿಗೆ ರಾಜಿ ಮಾಡಿಕೊಳ್ಳಲಾಯಿತು. ನಿರ್ಮಾಣ ಪ್ರಕ್ರಿಯೆಯನ್ನು ಆತುರದಿಂದ ಮಾಡಲಾಯಿತು. ತುರ್ತು ಆಮ್ಲಜನಕ ವ್ಯವಸ್ಥೆಯಲ್ಲಿಯೂ ದೋಷವಿತ್ತು. ಈ ವಿಮಾನಗಳ ಹಾರಾಟವು ಶೇಕಡ 25 ರಷ್ಟು ವಿಫಲವಾಗಬಹುದು, ಎಂದು ಅವರು ಕಂಪನಿಯ ವ್ಯವಸ್ಥಾಪಕರ ಮುಂದೆ ಮಂಡಿಸಿದ್ದರು; ಆದರೆ ಇದರ ಮೇಲೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬಾರ್ನೆಟ್ ಮಾಡಿದ ಆರೋಪಗಳ ನಂತರ ಅವರು ದೊಡ್ಡ ಪ್ರಮಾಣದ ವಿರೋಧವನ್ನು ಎದುರಿಸಬೇಕಾಯಿತು. 2024 ರಲ್ಲಿ ಅವರು ನಿಗೂಢವಾಗಿ ಸಾವನ್ನಪ್ಪಿದರು. ನಂತರ ಅವರ ಕುಟುಂಬವು ಬೋಯಿಂಗ್‌ಗೆ ಸಂಬಂಧಿಸಿದ ಮಾನಸಿಕ ಆಘಾತವನ್ನು ಉಲ್ಲೇಖಿಸಿ ಅದರ ವಿರುದ್ಧ ಮೊಕದ್ದಮೆ (ದಾಖಲಿಸಿದೆ) ಹೂಡಿತು.

‘ಯುಎಸ್ ನ್ಯಾಷನಲ್ ಟ್ರಾನ್ಸ್‌ಪೋರ್ಟೇಶನ್ ಸೇಫ್ಟಿ ಬೋರ್ಡ್’ ನ 2017 ರ ವಿಮರ್ಶೆಯಲ್ಲಿ ಬಾರ್ನೆಟ್ ಅವರ ಕೆಲವು ಅವಲೋಕನಗಳನ್ನು ದೃಢೀಕರಿಸಲಾಯಿತು. ಪರಿಣಾಮವಾಗಿ ಬೋಯಿಂಗ್‌ಗೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಲಾಯಿತು.

ರಿಚರ್ಡ್ ಕ್ಯುವಾಸ್

ಬೋಯಿಂಗ್ ತಂತ್ರಜ್ಞ ರಿಚರ್ಡ್ ಕ್ಯೂವಾಸ್ ಅವರು 2023 ರಲ್ಲಿ ಕಳಪೆ ಉತ್ಪಾದನೆಯ ಆರೋಪ ಮಾಡಿದ್ದರು. ನಂತರ ಅವರನ್ನು ಕೆಲಸದಿಂದ ವಜಾ ಮಾಡಲಾಯಿತು.

ಸಂಪಾದಕೀಯ ನಿಲುವು

ಭಾರತವು ಬೋಯಿಂಗ್ ನೊಂದಿಗೆ 200 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಈಗ ಈ ಒಪ್ಪಂದವನ್ನು ಮರುಪರಿಶೀಲಿಸುವ ಅಗತ್ಯವಿದೆ!