ಸದಾನಂದ ಶೆಟ್ ತಾನಾವಡೆ, ಪುರಾತತ್ವ ಇಲಾಖೆಯ ಸಚಿವ ಸುಭಾಷ್ ಫಳದೇಸಾಯಿ, ಶಾಸಕ ಪ್ರೇಮೇಂದ್ರ ಶೆಟ್; ಶಾಸಕ ದಾಜಿ ಸಾಳಕರ್ ಮತ್ತು ಶಾಸಕ ಸಂಕಲ್ಪ್ ಅಮೋನ್ಕರ್ ಇವರು ಉಪಸ್ಥಿತರಿದ್ದರು.

ಫೋಂಡಾ (ಗೋವಾ) – ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಗೋವಾದ ಭಾಜಪ ಸಂಸದ ಸದಾನಂದ ಶೇಟ್ ತಾನಾವಡೆ, ಪುರಾತತ್ವ ಇಲಾಖೆಯ ಸಚಿವ ಸುಭಾಷ ಫಳದೇಸಾಯಿ, ಮಯೆದ ಶಾಸಕ ಪ್ರೇಮೇಂದ್ರ ಶೇಟ್, ವಾಸ್ಕೋದ ಶಾಸಕ ದಾಜಿ ಉರ್ಫ್ ಕೃಷ್ಣ ಸಾಳಕರ್ ಮತ್ತು ಮುರಗಾವ್ ಶಾಸಕ ಸಂಕಲ್ಪ ಅಮೊಣಕರ ಅವರು ಜೂನ್ 9 ರಂದು ಸೌಹಾರ್ದ ಭೇಟಿ ನೀಡಿದರು. ಸನಾತನ ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ-ಧರ್ಮ ಮತ್ತು ಆಧ್ಯಾತ್ಮಿಕ ಸಂಶೋಧನೆಯ ಕಾರ್ಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಶ್ರೀ. ವೀರೇಂದ್ರ ಮರಾಠೆ ಮತ್ತು ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಅವರೊಂದಿಗೆ ರಾಷ್ಟ್ರ, ಧರ್ಮ, ಸಂಸ್ಕೃತಿ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಗೋಮಂತಕ ಮಂದಿರ ಮಹಾಸಂಘದ ಶ್ರೀ. ಜಯೇಶ ಥಳಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಕೂಡ ಉಪಸ್ಥಿತರಿದ್ದರು.
ಸಂಸದರು, ಸಚಿವರು ಮತ್ತು ಶಾಸಕರು ಸನಾತನ ಸಂಸ್ಥೆಯ ಆಶ್ರಮದಲ್ಲಿ ನಡೆಯುತ್ತಿರುವ ಕಾರ್ಯಗಳು ಮತ್ತು ಸೂಕ್ಷ್ಮ ಪ್ರದರ್ಶನದ ಬಗ್ಗೆ ಆಸಕ್ತಿಯಿಂದ ತಿಳಿದುಕೊಂಡರು. ಸಚಿವ ಸುಭಾಷ ಫಳದೇಸಾಯಿ ಅವರು, “ಆಶ್ರಮದಲ್ಲಿ ಬಹಳಷ್ಟು ಸಕಾರಾತ್ಮಕ ಸ್ಪಂದನೆಗಳು ಅನುಭವಕ್ಕೆ ಬರುತ್ತವೆ” ಎಂದು ಹೇಳಿದರು. ಆಶ್ರಮದ ನಿರ್ವಹಣೆ ಮತ್ತು ಸ್ವಚ್ಛತೆಯ ಬಗ್ಗೆ ಸಂಸದ ತಾನಾವಡೆ ಅವರು, “ದೊಡ್ಡ ದೊಡ್ಡ ನಿರ್ವಹಣಾ ಸಂಸ್ಥೆಗಳಿಗೂ ನಾಚಿಕೆ ತರುವಂತಹ ಉತ್ತಮ ನಿರ್ವಹಣೆ ಆಶ್ರಮದಲ್ಲಿದೆ” ಎಂದು ಹೇಳಿದರು. ಆಶ್ರಮದಲ್ಲಿ ಸಾಧಕರು ಬರೆದ ತಪ್ಪುಗಳ ಫಲಕವನ್ನು ನೋಡಿ ಸಚಿವ ಫಳದೇಸಾಯಿ ಅವರು, “ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯನ್ನು ನಮ್ಮಂತಹ ಸಚಿವರಿಗೂ ಕಲಿಸಬೇಕು” ಎಂದು ಇಚ್ಛೆ ವ್ಯಕ್ತಪಡಿಸಿದರು. ಶಾಸಕ ಸಾಳಕರ ಮತ್ತು ಶಾಸಕ ಅಮೊಣಕರ ಅವರು, “ನಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಸನಾತನದ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ನಾವು ಸದಾ ಸೇವೆ ಸಲ್ಲಿಸುತ್ತೇವೆ” ಎಂದು ಭರವಸೆ ನೀಡಿದರು.
‘ಸನಾತನ ಪ್ರಭಾತ’ ಕಚೇರಿಗೆ ವಿಶೇಷ ಭೇಟಿ!

ಆಶ್ರಮದಲ್ಲಿರುವ ‘ಸನಾತನ ಪ್ರಭಾತ’ದ ಮುಖ್ಯ ಕಚೇರಿಗೂ ಎಲ್ಲರೂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ‘ಸನಾತನ ಪ್ರಭಾತ ಪ್ರಸಾರಮಾಧ್ಯಮ ಸಮೂಹ’ದ ಸಂಪಾದಕ ಶ್ರೀ. ಯೋಗೇಶ ಜಲತಾರೆ, ಉಪಸಂಪಾದಕ ಶ್ರೀ. ಉಮೇಶ ನಾಯಕ ಮತ್ತು ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರೊಂದಿಗೆ ಪರಿಚಯ ಮಾಡಿಕೊಂಡು ಚರ್ಚಿಸಿದರು.
🙏 We were honoured to receive a courtesy visit from the following esteemed dignitaries at our Head Office 🏛️ housed in the Sanatan Ashram, Ramnathi, Goa 🇮🇳 today:
👤 Shri. Sadanand Shet Tanavade (@ShetSadanand) — Rajya Sabha MP, Goa
👤 Shri. Subhash Phal Dessai (@S_Phal_Dessai)… pic.twitter.com/1JUXLHVpWz— Sanatan Prabhat (@SanatanPrabhat) June 9, 2025
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !