ನೀವು ಇತಿಹಾಸಕಾರರೇ ಅಥವಾ ಭಾಷಾಶಾಸ್ತ್ರಜ್ಞರೇ ? – ಕಮಲ್ ಹಾಸನನ್ನು ತಿವಿದ ಕರ್ನಾಟಕ ಉಚ್ಚನ್ಯಾಯಾಲಯ

ಕನ್ನಡ ಭಾಷೆಗೆ ಅವಮಾನ ಮಾಡಿರುವ ಕುರಿತು ಕಮಲ ಹಾಸನನ್ನು ತರಾಟೆಗೆ ತೆಗೆದುಕೊಂಡ  !

ಬೆಂಗಳೂರು – ನಟ ಕಮಲ ಹಾಸನರವರು ‘ಕನ್ನಡ ಭಾಷೆಯು ತಮಿಳು ಭಾಷೆಯಿಂದ ಹುಟ್ಟಿದೆ’ ಎಂಬ ಹೇಳಿಕೆ ನೀಡಿದ್ದರಿಂದ ಕರ್ನಾಟಕದ ನಾಗರಿಕರು ಕಮಲ ಹಾಸನರವರ ಮುಂಬರುವ ‘ಠಗ ಲೈಫ’ ಚಲನಚಿತ್ರವನ್ನು ರಾಜ್ಯದಲ್ಲಿ ಪ್ರದರ್ಶಿಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಕಮಲ ಹಾಸನರವರು ಕನ್ನಡ ಭಾಷೆಯ ಕುರಿತ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದರು ಮತ್ತು ಚಲನಚಿತ್ರದ ಪ್ರದರ್ಶನಕ್ಕೆ ರಕ್ಷಣೆ ನೀಡುವಂತೆ ಕೋರಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯವು ‘ಕನ್ನಡ ಭಾಷೆಯು ತಮಿಳು ಭಾಷೆಯಿಂದ ಹುಟ್ಟಿದೆ’ ಎಂದು ನೀವು ಯಾವ ಆಧಾರದ ಮೇಲೆ ಹೇಳಿದ್ದೀರಿ ? ನೀವು ಇತಿಹಾಸಕಾರರೇ ಅಥವಾ ಭಾಷಾಶಾಸ್ತ್ರಜ್ಞರೇ ? ನೀವು ಯಾವ ಆಧಾರದಲ್ಲಿ ಕರ್ನಾಟಕದ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದೀರಿ ? ಯಾವುದೇ ಭಾಷೆ ಇನ್ನೊಂದು ಭಾಷೆಯಿಂದ ಹುಟ್ಟಲು ಸಾಧ್ಯವಿಲ್ಲ. ಈ ಹೇಳಿಕೆಯನ್ನು ಬೆಂಬಲಿಸುವ ಸಾಹಿತ್ಯವು ನಿಮಗೆ ಎಲ್ಲಿಂದ ದೊರೆಯಿತು ?’ ಎಂದು ಪ್ರಶ್ನಿಸಿದೆ.

ಉಚ್ಚ ನ್ಯಾಯಾಲಯವು ಮುಂದುವರಿದು, ಕನ್ನಡ ಭಾಷೆಯ ಮೂಲದ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಕ್ಷಮೆಯಾಚಿಸಲು ನಿರಾಕರಿಸುವ ಮೂಲಕ ಕಮಲ ಹಾಸನರವರು ಸ್ವತಃ ವಿವಾದಾತ್ಮಕ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ. ಯಾವುದೇ ಭಾಷೆ ಇನ್ನೊಂದು ಭಾಷೆಯಿಂದ ಹುಟ್ಟಲು ಸಾಧ್ಯವಿಲ್ಲ. ಕರ್ನಾಟಕದ ಜನರು ಕೇವಲ ನೀವು ಕ್ಷಮೆಯಾಚಿಸಬೇಕು ಎಂದು ಕೇಳಿದ್ದಾರೆ. ನೀವು ಕರ್ನಾಟಕದ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದೀರಿ. ಯಾವುದೇ ನಾಗರಿಕನಿಗೆ ಭಾವನೆಗಳಿಗೆ ನೋವುಂಟು ಮಾಡುವ ಹಕ್ಕಿಲ್ಲ. ನೀರು, ಭೂಮಿ ಮತ್ತು ಭಾಷೆಯು ನಾಗರಿಕರಿಗಾಗಿ ಮಹತ್ವದ್ದಾಗಿದೆ. ಈ ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿದೆ. ನೀವು ಕ್ಷಮೆಯಾಚಿಸದಿದ್ದರೆ, ಈ ಚಲನಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶಿಸುವುದು ಏಕೆ ? ಅದನ್ನು ಬಿಟ್ಟುಬಿಡಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜನರ ಭಾವನೆಗಳಿಗೆ ನೋವುಂಟು ಮಾಡಲು ಬಳಸಲಾಗುವುದಿಲ್ಲ. ನೀವು ಕ್ಷಮೆಯಾಚಿಸಿದರೆ, ಯಾವುದೇ ತೊಂದರೆ ಇಲ್ಲ. ನೀವು ಕರ್ನಾಟಕದಿಂದಲೂ ಕೆಲವು ಕೋಟಿ ರೂಪಾಯಿಗಳನ್ನು ಗಳಿಸಲು ಬಯಸುತ್ತೀರಿ. ನೀವು ವ್ಯಾವಸಾಯಿಕ ಹಿತಾಸಕ್ತಿಗಳಿಗಾಗಿ ಇಲ್ಲಿದ್ದೀರಿ. ಒಂದು ಕ್ಷಮೆಯಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತಿದ್ದವು. ಭಾಷೆಯು ಜನರೊಂದಿಗೆ ಜೋಡಿಸಲ್ಪಟ್ಟ ಭಾವನೆಯಾಗಿದೆ. ಈ ಭಾವನೆಗೆ ನೋವುಂಟು ಮಾಡಲು ನೀವು ಏನನ್ನೋ ಮಾತನಾಡಿದ್ದೀರಿ, ಎಂದು ಹೇಳಿದೆ.