Kerala RSS Leader Murder Case : ಯಾರನ್ನೂ ಅವರ ವಿಚಾರಸರಣಿಗಾಗಿ ಜೈಲಿಗೆ ಹಾಕಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಹೊಸದೆಹಲಿ – ನೀವು ಯಾರನ್ನೂ ಅವರ ವಿಚಾರಸರಣಿಗಾಗಿ ಜೈಲಿಗೆ ಹಾಕಲು ಸಾಧ್ಯವಿಲ್ಲ. ಅವರು ಒಂದು ನಿರ್ದಿಷ್ಟ ವಿಚಾರಸರಣಿಯನ್ನು ಸ್ವೀಕರಿಸಿದ್ದರಿಂದ ಅವರನ್ನು ಜೈಲಿಗೆ ಹಾಕಲಾಗುತ್ತಿರುವ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ, ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ಪ್ರಕರಣದ ವಿಚಾರಣೆಯ ಸಮಯದಲ್ಲಿ ಹೇಳಿದೆ.

2022 ರಲ್ಲಿ ಕೇರಳದ ಪಲಕ್ಕಡ ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾದ ಶ್ರೀನಿವಾಸನರವರ ಹತ್ಯೆಯ ಪ್ರಕರಣದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ) ಸಂಘಟನೆಯ ಕೇರಳ ಶಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿ ಅಬ್ದುಲ ಸತಾರರವರನ್ನು ಆರೋಪಿಯನ್ನಾಗಿಸಲಾಗಿತ್ತು. ಅವರಿಗೆ ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯವು ಈ ಮೇಲಿನ ಹೇಳಿಕೆ ನೀಡಿದೆ. ನ್ಯಾಯಾಲಯವು ಈ ಹತ್ಯೆಯಲ್ಲಿ ಅಬ್ದುಲರವರ ನೇರ ಸಹಭಾಗವಿರಲಿಲ್ಲ ಎಂದು ಹೇಳಿದೆ.