ಪುಲ್ವಾಮಾ (ಜಮ್ಮು ಮತ್ತು ಕಾಶ್ಮೀರ) – ಇಲ್ಲಿನ ತ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 3 ಭಯೋತ್ಪಾದಕರು ಹತರಾಗಿದ್ದಾರೆ. ಇಲ್ಲಿ ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದಾಗ ಈ ಘರ್ಷಣೆ ನಡೆದಿದೆ. ಹತರಾದ 3 ಭಯೋತ್ಪಾದಕರು ಹಿಜ್ಬುಲ್ ಮುಜಾಹಿದ್ದೀನ್ ಈ ಭಯೋತ್ಪಾದಕ ಸಂಘಟನೆಯವರಾಗಿದ್ದಾರೆ. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ.
1. ಗುಪ್ತಚರ ಸಂಸ್ಥೆಗಳು ಭಯೋತ್ಪಾದಕರ ಸ್ಥಾನವನ್ನು ತಿಳಿಸಿದ ನಂತರ ಭಾರತೀಯ ಸೇನೆ, ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಗಳ ಸೈನಿಕರು ಜಂಟಿಯಾಗಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿದರು.
2. ಭಯೋತ್ಪಾದಕರನ್ನು ಹುಡುಕಲು ಹೋದಾಗ ಅವರು ಸೈನಿಕರ ಮೇಲೆ ದೊಡ್ಡ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದರು. ನಂತರ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಭಯೋತ್ಪಾದಕರು ಹತರಾದರು.
3. ಮೂರು ದಿನಗಳ ಹಿಂದೆ ಶೋಪಿಯಾದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್ ಎ ತೊಯ್ಬಾದ 3 ಭಯೋತ್ಪಾದಕರು ಹತರಾಗಿದ್ದರು.
ಸಂಪಾದಕೀಯ ನಿಲುವುಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಾಶ ಮಾಡಲು ಪಾಕಿಸ್ತಾನದ ಭಯೋತ್ಪಾದಕ ಕಾರ್ಖಾನೆಗಳು ಮತ್ತು ಅವುಗಳನ್ನು ನಡೆಸುವ ಪಾಕಿಸ್ತಾನದ ಸೈನ್ಯವನ್ನು ನಾಶಪಡಿಸುವುದು ಅವಶ್ಯಕವಾಗಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅನೇಕ ನೆಲೆಗಳಿದ್ದು, ಅವುಗಳಲ್ಲಿ ಕೇವಲ 9 ನೆಲೆಗಳ ಮೇಲೆ ಭಾರತವು ದಾಳಿ ಮಾಡಿ ಅವುಗಳನ್ನು ನಾಶಪಡಿಸಿರುವುದರಿಂದ ಭಯೋತ್ಪಾದನೆ ಸಂಪೂರ್ಣವಾಗಿ ಕೊನೆಗೊಂಡಿಲ್ಲ. |