ಭಾರತದಿಂದಲೂ ಪಾಕಿಸ್ತಾನಿ ಸೈನಿಕನ ಬಿಡುಗಡೆ
ನವದೆಹಲಿ – ಗಡಿ ಭದ್ರತಾ ಪಡೆಯ ಸೈನಿಕ ಪೂರ್ಣಬ್ ಕುಮಾರ್ ಶಾ ಅವರನ್ನು ಪಾಕಿಸ್ತಾನವು ಬಿಡುಗಡೆ ಮಾಡಿದ್ದು ಅವರು ಭಾರತಕ್ಕೆ ಮರಳಿದ್ದಾರೆ. ಅದಾದ ನಂತರ, ಭಾರತವು ಪಾಕಿಸ್ತಾನದ ಓರ್ವ ಸೈನಿಕನನ್ನು ಭಾರತದ ಗಡಿಯಲ್ಲಿ ನುಸುಳಿದ್ದರಿಂದ ಸೆರೆ ಹಿಡಿದಿತ್ತು. ಈಗ ಎರಡೂ ದೇಶಗಳು ಪರಸ್ಪರ ಸೈನಿಕರನ್ನು ಬಿಡುಗಡೆ ಮಾಡಿವೆ.
1. ಏಪ್ರಿಲ್ 22 ರಂದು, ಭಯೋತ್ಪಾದಕರು ಪಹಲ್ಗಾಮ್ ಮೇಲೆ ದಾಳಿ ಮಾಡಿದ್ದರು. ಆನಂತರ ಮರುದಿನ, ಅಂದರೆ ಏಪ್ರಿಲ್ 23 ರಂದು, ಶಾ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿಯನ್ನು ತಲುಪಿದ್ದರಿಂದ ಪಾಕಿಸ್ತಾನಿ ಸೈನಿಕರು ಅವರನ್ನು ಸೆರೆ ಹಿಡಿದಿದ್ದರು.
2. ಪಹಲ್ಗಾಮ್‌ನಲ್ಲಿನ ಭಯೋತ್ಪಾದಕ ದಾಳಿಯ ನಂತರ, ಎರಡೂ ದೇಶಗಳ ನಡುವೆ ದೊಡ್ಡ ಪ್ರಮಾಣದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಆದ್ದರಿಂದ ಅವರ ಬಿಡುಗಡೆ ವಿಳಂಬವಾಯಿತು ಎಂದು ಹೇಳಲಾಗುತ್ತಿದೆ.
3. 40 ವರ್ಷದ ಶಾ ಕಳೆದ 17 ವರ್ಷಗಳಿಂದ ಗಡಿ ಭದ್ರತಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಬಂಗಾಳದ ಹೂಗ್ಲಿಯವರಾಗಿದ್ದಾರೆ.