ಭಾರತವು ಬಾಂಗ್ಲಾದೇಶದ ಈ ಮನವಿಗೆ ಬೆಲೆ ಕೊಡದೇ ಪ್ರತಿಯೊಬ್ಬ ಬಾಂಗ್ಲಾದೇಶಿ ನುಸುಳುಕೋರನನ್ನು ಹೊರಹಾಕಬೇಕು!
ಢಾಕಾ (ಬಾಂಗ್ಲಾದೇಶ) – ಭಾರತವು ಬಾಂಗ್ಲಾದೇಶದ ಅಕ್ರಮ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಅಕ್ರಮವಾಗಿ ನೆಲೆಸುತ್ತಿರುವವರನ್ನು ಹಿಡಿದು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಲಾಗುತ್ತಿದೆ. ಇದರಿಂದ ಅಸ್ವಸ್ಥಗೊಂಡ ಬಾಂಗ್ಲಾದೇಶದ ಮಹಮ್ಮದ್ ಯೂನುಸ್ ಸರಕಾರವು ಭಾರತಕ್ಕೆ ಮನವಿ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ರೀತಿ ಬಾಂಗ್ಲಾದೇಶಿಗರನ್ನು ವಾಪಸ್ ಕಳುಹಿಸುವುದನ್ನು ಬಾಂಗ್ಲಾ ವಿರೋಧಿಸಿದ್ದು ಭಾರತ ಸರಕಾರ ಇಂತಹ ಕ್ರಮ ತೆಗೆದುಕೊಳ್ಳಬಾರದೆಂದು ಕೋರಿದೆ.
1. ಮೇ 7 ರಿಂದ 9 ರ ಅವಧಿಯಲ್ಲಿ ಅಕ್ರಮವಾಗಿ ನೆಲೆಸುತ್ತಿರುವ ಬಾಂಗ್ಲಾದೇಶಿಗರನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಲಾಗಿತ್ತು. ಮೇ 9 ರಂದು ಪಶ್ಚಿಮ ಬಂಗಾಳದ ಸುಂದರಬನದ ದುರ್ಗಮ ಮಂದಾರಬಾರಿಯಾ ಚಾರ ಪ್ರದೇಶದಿಂದ ಗಡಿ ಭದ್ರತಾ ಪಡೆ ದೋಣಿಯ ಮೂಲಕ 78 ಬಾಂಗ್ಲಾದೇಶಿ ಅಕ್ರಮ ನುಸುಳುಕೋರರನ್ನು ವಾಪಸ್ಸು ಕಳುಹಿಸಿತ್ತು.
2. ಭಾರತದ ಈ ಕ್ರಮದ ಬಳಿಕ ಬಾಂಗ್ಲಾದೇಶದ ಗೃಹ ಸಚಿವಾಲಯದ ಸಲಹೆಗಾರ ಲೆಫ್ಟಿನೆಂಟ್ ಜನರಲ್ ಜಹಾಂಗೀರ್ ಆಲಂ ಚೌಧರಿ ಅವರ ಅಧ್ಯಕ್ಷತೆಯಲ್ಲಿ ಢಾಕಾದಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ವಲಸೆ ಹೋಗುತ್ತಿರುವ ಬಾಂಗ್ಲಾದೇಶಿಗರ ಬಗ್ಗೆ ವಿಷಯ ಪ್ರಸ್ತಾಪಿಸಲಾಯಿತು. ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ’ದ ಮಹಾನಿರ್ದೇಶಕ ಮಹಮ್ಮದ್ ಅಶ್ರಫ್ ಝಮಾನ್ ಸಿದ್ದಿಕಿ ಈ ಸಭೆಯಲ್ಲಿ ಉಪಸ್ಥಿತರಿದ್ದರು.