ಮೇ 7 ರಂದು ಕರ್ನಾಟಕ ಸೇರಿ ದೇಶದ 259 ಸ್ಥಳಗಳಲ್ಲಿ ತುರ್ತು ಪರಿಸ್ಥಿತಿ ತಾಲೀಮು !

ನವ ದೆಹಲಿ – ಭಾರತದಿಂದ ಪಾಕಿಸ್ತಾನಕ್ಕೆ ನೀಡಲಾಗುವ ಸೈನಿಕ ಪ್ರತಿದಾಳಿಯ ಸಿದ್ಧತೆಯಾಗಿ ನಾಳೆ, ಮೇ 7 ರಂದು ತುರ್ತು ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಬೇಕು (ಮಾಕ್ ಡ್ರಿಲ್) ಎನ್ನುವುದರ ಬಗ್ಗೆ ತಾಲೀಮು ನಡೆಸಲಾಗುವುದು. ದೇಶದ 259 ಸ್ಥಳಗಳಲ್ಲಿ ಈ ತಾಲೀಮು ನಡೆಯಲಿದೆ. ಇದರಲ್ಲಿ ರಾಜಧಾನಿ ದೆಹಲಿ, ಮುಂಬಯಿ, ಕೋಲಕಾತಾ, ಚೆನ್ನೈ ಈ 4 ಪ್ರಮುಖ ನಗರಗಳೊಂದಿಗೆ ಚಂಡೀಗಢ, ಶಿಮ್ಲಾ, ಕರ್ಣಾವತಿ, ಭೋಪಾಲ್, ಇಂದೋರ್, ಭಾಗ್ಯನಗರ, ವಿಶಾಖಪಟ್ಟಣಂ, ಬೆಂಗಳೂರು ಮುಂತಾದ ದೊಡ್ಡ ನಗರಗಳೂ ಸೇರಿವೆ.

ಕರ್ನಾಟಕದ ಸ್ಥಳಗಳು

ರಾಜ್ಯದ ಬೆಂಗಳೂರು, ಕಾರವಾರ ಮತ್ತು ಈ ಸ್ಥಳಗಳಲ್ಲಿ ತಾಲೀಮು ನಡೆಯಲಿದೆ.

ಗೋವಾದ ಉತ್ತರ ಮತ್ತು ದಕ್ಷಿಣ ಗೋವಾ ಜಿಲ್ಲೆಗಳಲ್ಲಿ ತಾಲೀಮು ನಡೆಸಲಾಗುವುದು

ತಾಲೀಮಿನಲ್ಲಿ ಏನಿರಲಿದೆ ?

ಇದರ ಅಡಿಯಲ್ಲಿ ವೈಮಾನಿಕ ದಾಳಿಯ ಎಚ್ಚರಿಕೆ ನೀಡುವ ಸೈರನ್ ಗಳನ್ನು ಮೊಳಗಿಸಲಾಗುವುದು. ಸಂಭಾವ್ಯ ದಾಳಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾದ ನಾಗರಿಕ ರಕ್ಷಣಾ ತಂತ್ರಗಳ ತರಬೇತಿ ನೀಡಲಾಗುವುದು. ‘ಬ್ಲ್ಯಾಕ್ ಔಟ್’ ಮಾಡಲಾಗುವುದು. ಇದರಲ್ಲಿ ವಾಯುಸೇನೆಯೊಂದಿಗೆ ಹಾಟ್ ಲೈನ್ ಮತ್ತು ರೇಡಿಯೋ ಸಂವಹನ ಸಂಪರ್ಕಗಳ ಕಾರ್ಯಾಚರಣೆ ಮತ್ತು ನಿಯಂತ್ರಣ ಕೊಠಡಿಯ ಕಾರ್ಯಕ್ಷಮತೆಯನ್ನು ಪರೀಕ್ಷಿಸುವುದೂ ಸೇರಿದೆ.