‘ತಿಲಕ್ ಮಹಾರಾಷ್ಟ್ರ ಅಭಿಮತ ವಿಶ್ವವಿದ್ಯಾಲಯ’ದ ವತಿಯಿಂದ ರವೀಂದ್ರ ಪ್ರಭುದೇಸಾಯಿ ಅವರಿಗೆ ಡಿ.ಲಿಟ್ ಪದವಿ ಪ್ರದಾನ!

ಪುಣೆ, ಮಾರ್ಚ್ ೮ (ವಾರ್ತೆ.) – ಉದ್ಯಮ ಮತ್ತು ಶಿಕ್ಷಣ ಕೈಜೋಡಿಸಿ ಕೆಲಸ ಮಾಡಿದರೆ ಮುಂದೆ ಹೋಗಬಹುದು. ಜಾಹೀರಾತು ಮಾಡುವುದರಿಂದ ಉದ್ಯಮಕ್ಕೆ ಉತ್ತೇಜನ ಸಿಗುತ್ತದೆ. ಬುದ್ಧಿವಂತಿಕೆ ಮತ್ತು ಸಂವೇದನೆ ಎಷ್ಟು ಮುಖ್ಯವೋ, ಅಷ್ಟೇ ಆಧ್ಯಾತ್ಮಿಕ ಅಂಶವೂ ಮುಖ್ಯ. ನನಗೆ ಈ ವಿಷಯದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಮಾರ್ಗದರ್ಶನ ಸಿಕ್ಕಿದೆ. ಅವರ ಮಾರ್ಗದರ್ಶನದಂತೆ ವ್ಯಕ್ತಿಯ ಬುದ್ಧಿ ಸಾತ್ವಿಕವಾಗಿ, ಹೆಚ್ಚು ಸೃಜನಶೀಲವಾಗಿ, ಸಮಾಜಕ್ಕಾಗಿ ಕೆಲಸ ಮಾಡಲು ವಿವಿಧ ಕಲ್ಪನೆಗಳು ಬಂದು ಅವುಗಳನ್ನು ಕಾರ್ಯರೂಪಕ್ಕೆ ತರುವ ಶಕ್ತಿ ಸಿಗುತ್ತದೆ. ಅವರ ಕೃಪೆಯಿಂದಲೇ ನಾನು ರತ್ನಗಿರಿ ಮತ್ತು ಸಿಂಧುದುರ್ಗದಂತಹ ಅನೇಕ ಸ್ಥಳಗಳಲ್ಲಿ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಿದ್ದೇನೆ. ಗುರುದೇವರ ಚರಣಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನಗೆ ಸಿಕ್ಕ ಈ ಗೌರವವನ್ನು ಸಮಾಜದ ಕಲ್ಯಾಣಕ್ಕಾಗಿ ಬಳಸುತ್ತೇನೆ ಎಂದು ಮಾತು ಕೊಡುತ್ತೇನೆ ಎಂದು ಪಿತಾಂಬರಿ ಉದ್ಯೋಗ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಶ್ರೀ. ರವೀಂದ್ರ ಪ್ರಭುದೇಸಾಯಿ ಹೇಳಿದರು.

ಪುಣೆಯ ತಿಲಕ್ ಮಹಾರಾಷ್ಟ್ರ ಅಭಿಮತ ವಿಶ್ವವಿದ್ಯಾಲಯದ ವತಿಯಿಂದ ಶ್ರೀ. ರವೀಂದ್ರ ಪ್ರಭುದೇಸಾಯಿ ಅವರಿಗೆ ‘ವಿದ್ಯಾನಿಧಿ’ (ಡಿ.ಲಿಟ್) ಪದವಿ ನೀಡಿ ಗೌರವಿಸಲಾಯಿತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.
‘ತಿಲಕ್ ಮಹಾರಾಷ್ಟ್ರ ವಿಶ್ವವಿದ್ಯಾಲಯ’ದ ೪೨ನೇ ಘಟಿಕೋತ್ಸವದಲ್ಲಿ ಕುಲಪತಿ ಡಾ. ದೀಪಕ್ ತಿಲಕ್ ಅವರಿಂದ ಈ ಗೌರವ ನೀಡಲಾಯಿತು. ಈ ಸಮಯದಲ್ಲಿ ಗಣ್ಯರಿಗೆ ನೀಡಲಾಗುವ ಗೌರವ ಪತ್ರವನ್ನು ಓದಲಾಯಿತು.
ಈ ಸಂದರ್ಭದಲ್ಲಿ ಖ್ಯಾತ ಮನೋವೈದ್ಯ ಮತ್ತು ನಟ ಡಾ. ಮೋಹನ್ ಆಗಾಶೆ ಮತ್ತು ‘ಕೈನೆಟಿಕ್ ಗ್ರೀನ್ ಎನರ್ಜಿ ಆಂಡ್ ಪವರ್ ಸೊಲ್ಯೂಷನ್ ಲಿ.’ನ ಕಾರ್ಯನಿರ್ವಾಹಕ ನಿರ್ದೇಶಕಿ ಸುಲಜ್ಜಾ ಫಿರೋಡಿಯಾ-ಮೋಟ್ವಾನಿ ಅವರಿಗೂ ಡಿ.ಲಿಟ್ ಪದವಿ ನೀಡಿ ಗೌರವಿಸಲಾಯಿತು.