Swatantrya Veer Savarkar Award : ಇಂದು ‘ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಪ್ರಶಸ್ತಿ 2025’ ಪ್ರದಾನ ಸಮಾರಂಭ !

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ(ವಕೀಲ) ತಂದೆ-ಮಗ ಪೂ. ಹರಿಶಂಕರ ಜೈನ ಮತ್ತು ವಿಷ್ಣುಶಂಕರ ಜೈನ ಇವರಿಗೆ ಪ್ರಶಸ್ತಿ ಘೋಷಣೆ !

ಪಿಂಪರಿ (ಪುಣೆ ಜಿಲ್ಲೆ) – ಇಲ್ಲಿನ ನಿಗಡಿ ಪ್ರಾಧಿಕಾರದಲ್ಲಿರುವ ಗ.ದಿ. ಮಾಡಗೂಳಕರ ರಂಗಮಂದಿರದಲ್ಲಿ ಸ್ವಾತಂತ್ರ್ಯವೀರ ಸಾವರಕರ ಮಂಡಳಿಯ ವತಿಯಿಂದ ಫೆಬ್ರವರಿ 26 ರಂದು ಸಂಜೆ 6:30 ಕ್ಕೆ ‘ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಪ್ರಶಸ್ತಿ 2025’ ಪ್ರದಾನ ಸಮಾರಂಭವು ನಡೆಯಲಿದೆ. ಫೆಬ್ರವರಿ 26 ಸ್ವಾತಂತ್ರ್ಯವೀರ ಸಾವರ್ಕರ್ ಅವರ ಪುಣ್ಯತಿಥಿ ಇದೆ! ಇದರ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವರ್ಷದ ರಾಷ್ಟ್ರೀಯ ಪ್ರಶಸ್ತಿಯು ಸರ್ವೋಚ್ಚ ನ್ಯಾಯಾಲಯದ ವಕೀಲರಾದ ತಂದೆ-ಮಗ ಪೂ. ಹರಿಶಂಕರ್ ಜೈನ್ ಮತ್ತು ವಿಷ್ಣುಶಂಕರ್ ಜೈನ್ ಇವರಿಗೆ ನೀಡಿ ಸನ್ಮಾನಿಸಲಾಗುವುದು, ಹಾಗೆಯೇ ಹಿಂದುತ್ವನಿಷ್ಠ ಸಾಮಾಜಿಕ ಕಾರ್ಯಕರ್ತೆ ಮೀರಾ ಅ. ಕಡಬೆ ಅವರಿಗೆ ‘ಸ್ವಾತಂತ್ರ್ಯವೀರ ಸಾವರ್ಕರ್ ರಾಜ್ಯ ಮಟ್ಟದ ಪ್ರಶಸ್ತಿ 2025’ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ವಿತರಣೆಯನ್ನು ಹಿರಿಯ ವಕೀಲ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉಜ್ವಲ್ ನಿಕಂ ಅವರು ಮಾಡಲಿದ್ದಾರೆ.

1. ಇದು ಪ್ರಶಸ್ತಿಯ 17 ನೇ ವರ್ಷವಾಗಿದೆ.

2. ಹಲವು ವರ್ಷಗಳಿಂದ ಹಿಂದುತ್ವ ಮತ್ತು ಹಿಂದೂ ಧರ್ಮಕ್ಕಾಗಿ ಕಾನೂನುಬದ್ಧವಾಗಿ ಹೋರಾಡುತ್ತಿರುವ ಪೂ. (ವಕೀಲ) ಹರಿಶಂಕರ ಜೈನ್ ಮತ್ತು ವಕೀಲ ವಿಷ್ಣುಶಂಕರ ಜೈನ್ ಅವರಿಗೆ 1 ಲಕ್ಷ ರೂಪಾಯಿ ಮತ್ತು ಸ್ಮರಣಿಕೆಯನ್ನು ನೀಡಲಾಗುವುದು.

3. ವಿದರ್ಭ ಪ್ರದೇಶದಲ್ಲಿ ಲವ್ ಜಿಹಾದ್, ಕೌಟುಂಬಿಕ ಹಿಂಸಾಚಾರ ಮತ್ತು ಮಹಿಳಾ ಸುರಕ್ಷತೆಗಾಗಿ 34 ವರ್ಷಗಳಿಂದ ಕೆಲಸ ಮಾಡುತ್ತಿರುವ ಮೀರಾ ಅ. ಕಡಬೆ ಅವರಿಗೆ 51 ಸಾವಿರ ರೂಪಾಯಿಗಳು ಮತ್ತು ಸ್ಮರಣಿಕೆಯನ್ನು ನೀಡಿ ಅವರ ಕಾರ್ಯಕ್ಕಾಗಿ ಗೌರವಿಸಲಾಗುವುದು.

4. ಈ ಗೌರವಯುತ ಸಮಾರಂಭದಲ್ಲಿ ದೇಶಭಕ್ತ ನಾಗರಿಕರು ತಪ್ಪದೇ ಭಾಗವಹಿಸಬೇಕೆಂದು ‘ಸ್ವಾತಂತ್ರ್ಯವೀರ ಸಾವರ್ಕರ ಮಂಡಳ’ದ ಅಧ್ಯಕ್ಷ ವಿಶ್ವನಾಥನ ನಾಯರ ಮನವಿ ಮಾಡಿದ್ದಾರೆ.