ದೆಹಲಿಯ ಯುವಕರು ಅಕ್ಬರ್ ಮತ್ತು ಹುಮಾಯೂನ್ ರಸ್ತೆಗಳ ಫಲಕಗಳಿಗೆ ಮಸಿ ಬಳಿದರು

ರಸ್ತೆಗಳ ಹೆಸರು ಬದಲಾಯಿಸಲು ಆಗ್ರಹ !

ನವದೆಹಲಿ – ಛಾವಾ ಚಲನಬಚಿತ್ರ ಬಿಡುಗಡೆಯಾದ ನಂತರ, ಕೆಲವು ಯುವಕರು ದೆಹಲಿಯ ಅಕ್ಬರ್ ರಸ್ತೆ ಮತ್ತು ಹುಮಾಯೂನ್ ರಸ್ತೆಗೆ ಹೋಗಿ ಫಲಕಗಳಿಗೆ ಮಸೀ ಬಳಿದು ಈ ರಸ್ತೆಗಳ ಹೆಸರುಗಳನ್ನು ಬದಲಾಯಿಸಬೇಕೆಂದು ಒತ್ತಾಯಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವನ್ನು ಪ್ರದರ್ಶಿಸಲಾಯಿತು. ಅವರು ಛತ್ರಪತಿ ಸಂಭಾಜಿ ಮಹಾರಾಜರ ಜಯಘೋಷ ಮಾಡಿದರು. ಅವರು ರಸ್ತೆಗಳ ಹೆಸರನ್ನು ಬದಲಾಯಿಸುವುದರೊಂದಿಗೆ ಮೊಗಲ ಆಡಳಿತಗಾರರ ಇತಿಹಾಸವನ್ನು ಕಲಿಸುವ ಬದಲು ಛತ್ರಪತಿ ಶಿವಾಜಿ ಮಹಾರಾಜ ಮತ್ತು ಮಹಾರಾಣಾ ಪ್ರತಾಪ ಇವರ ಇತಿಹಾಸವನ್ನು ಕಲಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ‘ಜಯ ಶ್ರೀರಾಮ’ ಘೋಷಣೆಗಳು ಮೊಳಗಿದವು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಮತ್ತು ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿದರು. ಅವರು ಕಪ್ಪು ಬಣ್ಣ ಬಳಿದ ಫಲಕವನ್ನು ಸ್ವಚ್ಛಗೊಳಿಸಿದರು. ಹಾಗೆಯೇ ಪೊಲೀಸರು ಫಲಕಗಳಿಗೆ ಕಪ್ಪು ಬಣ್ಣ ಬಳಿದಿರುವ ಯುವಕರಿಗಾಗಿ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. (ಎತ್ತಿಗೆ ಜ್ವರ ಅಂದರೆ ಎಮ್ಮೆಗೆ ಬರೆ ಎಳೆದಂತೆ ಆಗಿದೆ. ಯುವಕರು ಫಲಕಗಳಿಗೆ ಕಪ್ಪು ಬಣ್ಣ ಏಕೆ ಬಳಿದರು ಎನ್ನುವುದು ಎಲ್ಲರಿಗೂ ತಿಳಿದಿರುವಾಗ, ಯುವಕರನ್ನು ಹುಡುಕಿ ಅವರ ವಿರುದ್ಧ ಪ್ರಕರಣ ದಾಖಲಿಸುವ ಪೌರುಶ ತೋರಿಸುವ ಬದಲು, ಆಡಳಿತ ಮತ್ತು ಪೊಲೀಸರು ಈ ಫಲಕಗಳನ್ನು ತೆಗೆದುಹಾಕಲು ಪ್ರಯತ್ನಿಸಬೇಕು ! – ಸಂಪಾದಕರು) ಇದಕ್ಕಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ, ರಾಜಧಾನಿ ದೆಹಲಿಯಲ್ಲಿ ಮೊಗಲ್ ಆಕ್ರಮಣಕಾರರ ಹೆಸರಿನ ರಸ್ತೆಗಳಿರುವುದು, ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಭಾಜಪ ಅಧಿಕಾರದಲ್ಲಿರುವಾಗ ಹೀಗಾಗಬಾರದು ಎಂದು ಹಿಂದೂಗಳು ಭಾವಿಸುತ್ತಾರೆ ! ಸರಕಾರ ತಕ್ಷಣ ಈ ಹೆಸರುಗಳನ್ನು ಬದಲಾಯಿಸಬೇಕು !