ಸುಜಾನಪೂರ (ಹಿಮಾಚಲ ಪ್ರದೇಶ) ಇಲ್ಲಿನ ಪ್ರಕರಣ
ಸುಜಾನಪೂರ (ಹಿಮಾಚಲ ಪ್ರದೇಶ) – ಇಲ್ಲಿನ ಮಸೀದಿಯ ಮುಂದಿರುವ ಉದ್ಯಾನವನದಲ್ಲಿ ನಿರ್ಮಿಸಲಾಗುವ ಮಹಾರಾಣಾ ಪ್ರತಾಪ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಮುಸ್ಲಿಂ ಸಂಘಟನೆಯೊಂದು ಎತ್ತಿದ್ದ ಆಕ್ಷೇಪ ಈಗ ಹಿಂಪಡೆದಿದೆ. ಇದರಿಂದ, ಈಗ ಈ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಗುತ್ತಿದ್ದು, ಈ ಸಂಸ್ಥೆಯ ಸದಸ್ಯರು ಸಹ ಆ ಸಮಯದಲ್ಲಿ ಹಾಜರಿರುತ್ತಾರೆ, ಎಂದು ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಜಮೇರ ಠಾಕೂರ ಮಾಹಿತಿ ನೀಡಿದ್ದಾರೆ.
ವಿಶ್ವ ಹಿಂದೂ ಪರಿಷತ್ತು ಆಡಳಿತಕ್ಕೆ ನಿಯೋಜಿತ ಸ್ಥಳದಲ್ಲಿ ಪ್ರತಿಮೆಯನ್ನು ಸ್ಥಾಪಿಸುವ ನಿರ್ಧಾರದಿಂದ ಹಿಂದೆ ಸರಿಯಬಾರದು ಎಂದು ಕರೆ ನೀಡಿತ್ತು. ವಿಶ್ವಹಿಂದೂ ಪರಿಷತ್ತಿನ ರಾಜ್ಯ ಶಾಖೆಯ ಉಪಸಚಿವರಾದ ಪಂಕಜ ಭಾರತೀಯ ಮಾತನಾಡಿ, ಮಸೀದಿಯ ಮುಂದೆ ಮಹಾರಾಣಾ ಪ್ರತಾಪ ಪ್ರತಿಮೆಯನ್ನು ವಿರೋಧಿಸಲು ಯಾವುದೇ ನಿರ್ದಿಷ್ಟ ಕಾರಣವಿಲ್ಲ. ರಾಜ್ಯದ ಹೊರಗಿನ ಮುಸ್ಲಿಂ ನಾಯಕರ ಗುಂಪೊಂದು ಹಿಂದೂ ವಿರೋಧಿ ಭಾವನೆಗಳನ್ನು ಸೃಷ್ಟಿಸುತ್ತಿದೆ’, ಎಂದು ಹೇಳಿದ್ದಾರೆ.