‘ಛತ್ರಪತಿ ಶಿವಾಜಿ ಮಹಾರಾಜರು ಇಲ್ಲದಿದ್ದರೆ, ನನ್ನ ಹೆಸರು ‘ಕಲಿಮುದ್ದೀನ್’ ಆಗಿರುತ್ತಿತ್ತು!’ – ಸಚಿವ ಕೈಲಾಶ ವಿಜಯವರ್ಗೀಯ

ಶಿವಾಜಿ ಮಹಾರಾಜ ಜಯಂತಿಯ ಸಂದರ್ಭದ ನಡೆದ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಭಾಜಪ ಸರಕಾರದ ಸಚಿವ ಕೈಲಾಶ ವಿಜಯವರ್ಗೀಯ ಅವರ ಹೇಳಿಕೆ

ಇಂದೂರ (ಮಧ್ಯಪ್ರದೇಶ) – ಹಿಂದೂ ಧರ್ಮ ಇಂದು ಜೀವಂತವಾಗಿದ್ದರೆ ಅದಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆಯೇ ಕಾರಣವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಸಂಪೂರ್ಣ ಮಾಳವಾ(ಮರಾಠಾ ಸೇನೆ) ಪ್ರಾಂತ್ಯಕ್ಕೆ ಮೊಗಲರನ್ನು ಪ್ರವೇಶಿಸಲು ಬಿಡಲಿಲ್ಲ. ಆದ್ದರಿಂದಲೇ ನಾವು ಇಂದು ಹಿಂದೂಗಳಾಗಿದ್ದೇವೆ, ಇಲ್ಲದಿದ್ದರೆ ನನ್ನ ಹೆಸರು ಕೈಲಾಸ ಅಲ್ಲ, ‘ಕಲಿಮುದ್ದೀನ’ ಆಗಿರುತ್ತಿತ್ತು’, ಎಂದು ರಾಜ್ಯದ ಭಾಜಪ ಸರಕಾರದ ಸಚಿವ ಕೈಲಾಶ ವಿಜಯವರ್ಗೀಯ ಇಲ್ಲಿ ಹೇಳಿದರು. ಅವರು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ವಿಜಯವರ್ಗೀಯ ಅವರು ಮಾತನಾಡುತ್ತಾ, ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮವನ್ನು ರಕ್ಷಿಸಲು ಸೈನ್ಯವನ್ನು ಸಿದ್ಧಪಡಿಸಿದ್ದರು. ಆ ಸಮಯದಲ್ಲಿ, ಆ ಸೈನ್ಯವು ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದರೂ, ಲಕ್ಷಾಂತರ ಸಂಖ್ಯೆಯಲ್ಲಿದ್ದ ಮೊಗಲರನ್ನು ಸೋಲಿಸಿತು. ಅಂತಹ ಒಂದಲ್ಲ, ಅನೇಕ ಉದಾಹರಣೆಗಳು ಇವೆ. ಅವರ ಜಯಂತಿಯ ನಿಮಿತ್ತ ನಾವು ಅವರಿಗೆ ನಮಸ್ಕರಿಸುತ್ತಿದ್ದೇವೆ ಇದರ ನನಗೆ ಹೆಮ್ಮೆ ಇದೆ. ಇಂದು ಇಡೀ ಹಿಂದೂ ಸಮುದಾಯವು ಛತ್ರಪತಿ ಶಿವಾಜಿ ಮಹಾರಾಜರಿಗೆ ಕೃತಜ್ಞವಾಗಿದೆ. ಆ ಸಮಯದಲ್ಲಿ, ಬಾಜಿರಾವ ಪೇಶ್ವೆಯ ಸೈನ್ಯವು ಯಾವುದೇ ಮೊಘಲರನ್ನು ಇಲ್ಲಿಗೆ ಪ್ರವೇಶಿಸಲು ಬಿಡಲಿಲ್ಲ. ಇದನ್ನು ನಮ್ಮ ಇತಿಹಾಸವು ಹೇಳುತ್ತದೆ’, ಎಂದು ಹೇಳಿದರು.