ರಣಬೀರ್ ಅಲಹಬಾದಿಯಾ ಮನಸ್ಸಿನಲ್ಲಿ ಕೊಳಕು ತುಂಬಿದೆ ! – ಸುಪ್ರೀಂ ಕೋರ್ಟ್

  • ರಣಬೀರ್ ಅಲಹಬಾದಿಯಾಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್ !

  • ಬಂಧನಕ್ಕೆ ಮಧ್ಯಂತರ ತಡೆ

ನವ ದೆಹಲಿ – ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ, ಸಮಾಜದ ಕಟ್ಟುಪಾಡುಗಳ ವಿರುದ್ಧ ಮಾತನಾಡಲು ಯಾರಿಗೂ ಅವಕಾಶವಿಲ್ಲ. ಇದು ಅಶ್ಲೀಲವಲ್ಲದಿದ್ದರೆ, ಮತ್ತೇನು ? ಈ ವ್ಯಕ್ತಿಯ ಮನಸ್ಸಿನಲ್ಲಿ ಏನೋ ಕೊಳಕು ಇದೆ. ನಿನ್ನ ಮಾತುಗಳು ಹೆತ್ತವರಿಗೆ ಮತ್ತು ಸಹೋದರಿಯರಿಗೆ ನಾಚಿಕೆಯಾಗುವುದು. ಇದರಿಂದ ಇಡೀ ಸಮಾಜಕ್ಕೆ ತಲೆತಗ್ಗಿಸುವಂತಾಗಿದೆ. ನಾವು ನಿನ್ನ ವಿರುದ್ಧದ ಅಪರಾಧಗಳನ್ನು ಏಕೆ ರದ್ದುಪಡಿಸಬೇಕು ಅಥವಾ ನಾವು ಏಕೆ (ಕ್ಲಬ್) ಒಟ್ಟಿಗೆ ಮಾಡಬೇಕು? ಹೀಗೆ ಯೂಟ್ಯೂಬರ್ ರಣವೀರ್ ಅಲಹಬಾದಿಯಾಗೆ ಸುಪ್ರೀಂ ಕೋರ್ಟ್ ಪ್ರಶ್ನೆ ಕೇಳಿದೆ. ಈ ವೇಳೆ ಅಲಹಬಾದಿಯಾ ಬಂಧನಕ್ಕೆ ನ್ಯಾಯಾಲಯವು ಮಧ್ಯಂತರ ತಡೆ ನೀಡಿದೆ. ‘ಇಂಡಿಯಾಸ್ ಗೋಟ್ ಲೆಟೆಂಟ್’ ಎಂಬ ಯೂಟ್ಯೂಬ್ ಶೋನಲ್ಲಿ ಅಲಹಬಾದಿಯಾ ತಾಯಿ ತಂದೆಯವರ ಸಂಧರ್ಭದಲ್ಲಿ ಅತ್ಯಂತ ಅಶ್ಲೀಲ ಹೇಳಿಕೆ ನೀಡಿದ್ದನು. ಆನಂತರ ಆತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಆದ್ದರಿಂದ ಅವನು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾನೆ.
ಸುಪ್ರೀಂ ಕೋರ್ಟ್ ಅಲಾಹಾಬಾದಿಯನ ಪಾಸ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಜಮಾ ಮಾಡುವಂತೆ ನಿರ್ದೇಶನ ನೀಡಿದೆ ಮತ್ತು ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಭಾರತವನ್ನು ಬಿಡಬಾರದು ಎಂದು ಹೇಳಿದೆ.