ಪ್ರಯಾಗರಾಜನ ಕುಂಭಮೇಳದಲ್ಲಿನ ೪೬ ಕೋಟಿ ಭಕ್ತರು ಸ್ನಾನ ಮಾಡಿದ ನಂತರ ಕೂಡ ಗಂಗಾ ನದಿ ಶುದ್ಧವಾಗಿದೆ !

  • ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಸ್ಥೆ ಅಂದರೆ ‘ನೀರಿ’ ನಡೆಸಿದ ಸಂಶೋಧನೆ ನಿಷ್ಕರ್ಷ !

  • ಗಂಗಾ ನದಿಯ ನೀರಿನಲ್ಲಿ ಕ್ರಿಮಿನಾಶಕ ‘ಬ್ಯಾಕ್ಟೆರಿಯೋಫೇಜ’ ಪತ್ತೆ

  • ಅನೇಕ ವರ್ಷ ಸಂಗ್ರಹಿಸಿ ಇಟ್ಟಿರುವ ಗಂಗಾ ನದಿಯ ನೀರು ಹಾಳಾಗುವುದಿಲ್ಲ !

ನಾಗಪುರ – ಇಲ್ಲಿಯವರೆಗೆ ಮಹಾಕುಂಭದಲ್ಲಿ ೪೬ ಕೋಟಿ ಭಕ್ತರು ಸ್ನಾನ ಮಾಡಿದ್ದಾರೆ. ಪ್ರತಿ ದಿನ ಇದರಲ್ಲಿ ಲಕ್ಷಾಂತರ ಜನರು ಹೆಚ್ಚುತ್ತಿದ್ದಾರೆ, ಹೀಗೆ ಇದ್ದರೂ, ಗಂಗಾ ನದಿಯ ನೀರು ಕಲುಷಿತವಾಗಿಲ್ಲ. ಈ ಸಂದರ್ಭದಲ್ಲಿನ ಸಂಶೋಧನೆಯನ್ನು ನಾಗಪುರದ ‘ನೀರಿ’ಯ (ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಸ್ಥೆ ಯ) ಸಂಶೋಧಕರು ನಡೆಸಿದ್ದಾರೆ. ಇದರಲ್ಲಿ, ಕೋಟಿಗಟ್ಟಲೆ ಜನರು ಸ್ನಾನ ಮಾಡಿದ ನಂತರ ಕೂಡ ಕೆಲವು ಅವಧಿಯ ನಂತರ ಗಂಗಾ ನದಿ ಸ್ವತಃ ಮೂಲ ಸ್ಥಿತಿಗೆ ತರುತ್ತಾಳೆ. ಗಂಗಾ ನದಿಗೆ ಹೊಲಸು ಸ್ವಚ್ಛ ಮಾಡುವ ಶಕ್ತಿ ಇದೆ. ಸ್ನಾನದ ಸ್ಥಳದಿಂದ ೫ ಕಿಲೋಮೀಟರ್ ದೂರದವರೆಗೆ ಗಂಗಾ ನದಿಯ ನೀರು ಪೂರ್ಣವಾಗಿ ಶುದ್ಧ ಮತ್ತು ಸ್ವಚ್ಛ ಕಾಣುತ್ತಿದೆ. ಎಲ್ಲಿ ಜನರು ಸ್ನಾನ ಮಾಡುತ್ತಿದ್ದಾರೆ ಅಲ್ಲಿ ಗಂಗಾ ನದಿ ೩-೪ ದಿನದಲ್ಲಿ ಶುದ್ಧವಾಗುತ್ತದೆ. ಅಲ್ಲಿ ಎಂದಿಗೂ ಸಾಂಕ್ರಾಮಿಕ ರೋಗ ಹರಡುವುದಿಲ್ಲ. ಗಂಗಾ ನದಿಯ ನೀರು ಅನೇಕ ವರ್ಷದಿಂದ ಸಂಗ್ರಹಿಸಿ ಇಟ್ಟರೂ, ಅದು ಹಾಳಾಗುವುದಿಲ್ಲ’, ಎಂದು ಹೇಳಿದ್ದಾರೆ.

೧. ‘ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ’ ಅಡಿಯಲ್ಲಿ ‘ನೀರಿ’ ಈ ಸಂಸ್ಥೆಗೆ ಗಂಗೆಯ ನೀರಿನ ಮೇಲೆ ಸಂಶೋಧನೆಯ ಕಾರ್ಯ ಒಪ್ಪಿಸಲಾಗಿತ್ತು. ಸುಮಾರು ೨ ವರ್ಷಗಳಿಂದ ‘ನೀರಿ’ಯು ೨ ಸಾವಿರದ ೪೦೦ ಕಿಲೋಮೀಟರ್ ಹರಿಯುವ ಗಂಗಾ ನದಿಯ ೩ ಹಂತದಲ್ಲಿ ಸಂಶೋಧನೆ ಮಾಡಿದ್ದಾರೆ. ಗಂಗಾ ನದಿಯ ಉಗಮ ಸ್ಥಾನ ಆಗಿರುವ ಗೋಮುಖದಿಂದ ಹರಿದ್ವಾರ್, ಹರಿದ್ವಾರದಿಂದ ಪಾಟಲಿಪುತ್ರ ಮತ್ತು ಪಾಟಲಿಪುತ್ರದಿಂದ ಜಾಫರನಗರ (ಬಂಗಾಲ) ಹೀಗೆ ಮೂರು ಹಂತಗಳು ಇದ್ದವು. ಇದರಲ್ಲಿ ಗೋಮುಖದಿಂದ ಹರಿದ್ವಾರ್ ಈ ಮೊದಲ ಭಾಗದಲ್ಲಿ ಗಂಗಾ ನದಿಯಲ್ಲಿ ೩ ಪ್ರಮುಖ ಘಟಕಗಳು ಕಂಡು ಬಂದವು. ಆದ್ದರಿಂದ ಗಂಗಾ ನದಿಯ ಹರಿಯುವ ನೀರು ಕೇವಲ ಶುದ್ಧ ಅಷ್ಟೇ ಅಲ್ಲದೆ ಮನೆಗೆ ತಂದರೂ ಅದು ವರ್ಷಗಟ್ಟಲೆ ಹಾಳಾಗುವುದಿಲ್ಲ.

೨. ಸಂಶೋಧನೆಯ ಸಮಯದಲ್ಲಿ ಗಂಗಾ ನದಿಯ ೫೦ ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ವಿಜ್ಞಾನಿಗಳ ತಂಡಕ್ಕೆ ಗಂಗಾ ನದಿಯ ನೀರಿನಲ್ಲಿ ಕ್ರಿಮಿನಾಶಕ ‘ಬ್ಯಾಕ್ಟೀರಿಯೋಫೇಜ’ ಕಂಡು ಬಂದಿದೆ, ಅದು ಒಂದು ರೀತಿಯ ಬ್ಯಾಕ್ಟೀರಿಯಾ ಆಗಿದ್ದೂ ಇದರಲ್ಲಿ ಈ ರೋಗಕಾರಕ ಬೆಕ್ಟೇರಿಯಾದಿಂದ ಆಗುವ ರೋಗಗಳ ವಿರುದ್ಧ ಹೋರಾಡುವ ಗುಣವಿದೆ.

೩. ‘ನೀರಿ’ಯ ವಿಜ್ಞಾನಿಗಳಿಗೆ ಗಂಗೆಯ ನೀರಿನಲ್ಲಿ ಕರಗಿರುವ ಆಕ್ಸಿಜನ್ ಕೂಡ (‘ಪ್ರಾಣವಾಯು’ ಕೂಡ) ಕಂಡುಬಂದಿದೆ. ಇದು ಸುಮಾರು ಶುದ್ಧೀಕರಣದ ಮಟ್ಟದವರೆಗೆ ಉಳಿಯುತ್ತದೆ. ಇದಲ್ಲದೆ ಗಂಗಾ ನದಿಯ ನೀರಿನಲ್ಲಿ ೨೦ ಕಿಲೋಮೀಟರ್ ವರೆಗೆ ಆಕ್ಸಿಜನ್ ಕಂಡು ಬಂದಿದೆ. ವಿಜ್ಞಾನಿಗಳು ಈ ನೀರಿನಲ್ಲಿ ‘ಟರ್ಪಿನ್’ ಉಪ್ಪಿನ ‘ಫಾಯಟೋಕೆಮಿಕಲ್’ ಕೂಡ ಕಂಡು ಹಿಡಿದಿದ್ದಾರೆ. ಗಂಗಾ ನದಿಯ ನೈಸರ್ಗಿಕ ಶುದ್ಧೀಕರಣದಲ್ಲಿ ಈ ಮೂರು ಘಟಕಗಳು ಪರಿಣಾಮಕಾರಿ ಇರುತ್ತದೆ.

ಸಂಪಾದಕೀಯ ನಿಲುವು

ಪವಿತ್ರ ಗಂಗಾ ನದಿಯ ಸಂದರ್ಭದಲ್ಲಿ ಅಜ್ಞಾನ ಹೊಂದಿರುವವರ ಕಣ್ಣು ಈಗಾದರೂ ತೆರೆಯಬಹುದೆಂದು ಅಪೇಕ್ಷೆ ! ಹೀಗಿದ್ದರೂ ಕೂಡ ಇತರ ಮಾರ್ಗದಿಂದ ಗಂಗಾ ನದಿ ಕಲುಷಿತ ಗೊಳಿಸುವ ಘಟಕ ತಡೆಯುವುದಕ್ಕಾಗಿ ಪ್ರಯತ್ನ ಮುಂದು ವರೆಯುವುದು ಅಷ್ಟೇ ಆವಶ್ಯಕವಾಗಿದೆ !