ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿರುವ ಭಾರತೀಯ ಸೈನಿಕನ ಬಂಧನ

೧೫ ಲಕ್ಷ ರೂಪಾಯಿಗಾಗಿ ಗೌಪ್ಯ ಮಾಹಿತಿ ಪೂರೈಸುತ್ತಿದ್ದ

ಅಮೃತಸರ (ಪಂಜಾಬ) – ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐ.ಎಸ್.ಐ. ಗಾಗಿ ಬೇಹುಗಾರಿಕೆ ನಡೆಸಿರುವ ಪ್ರಕರಣದಲ್ಲಿ ಪ್ರಸ್ತುತ ನಾಶೀಕದಲ್ಲಿನ ಸೈನ್ಯದ ನೆಲೆಯಲ್ಲಿ ನೇಮಕಗೊಂಡಿರುವ ಭಾರತೀಯ ಸೈನ್ಯದಲ್ಲಿನ ನಾಯಕ ಸಂದೀಪ ಸಿಂಹ ಇವನನ್ನು ಬಂಧಿಸಲಾಗಿದೆ. ಇವನಿಂದ ೩ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಮೊಬೈಲ್ ಮೂಲಕ ಅವನು ಐ.ಎಸ್.ಐ.ಗೆ ಗೌಪ್ಯ ಮಾಹಿತಿ ಕಳುಹಿಸುತ್ತಿದ್ದನು. ಇದಕ್ಕಾಗಿ ಅವನು ೧೫ ಲಕ್ಷ ರೂಪಾಯಿ ಪಡೆದಿದ್ದನು.

ಪಟಿಯಾಲದಲ್ಲಿನ ಸಾರ್ದುಲಗಡ್ ಇಲ್ಲಿಯ ನಿವಾಸಿ ಆಗಿರುವ ಸಂದೀಪ ಸಿಂಹ ೨೦೧೫ ರಲ್ಲಿ ಸೈನ್ಯದಲ್ಲಿ ಭರ್ತಿ ಆಗಿದ್ದನು. ಕಳೆದ ೨ ವರ್ಷಗಳಲ್ಲಿ ಸಂದೀಪ ಸಿಂಹ ಇವನು ಜಮ್ಮು, ಪಂಜಾಬ್ ಮತ್ತು ನಾಶಿಕ ಇಲ್ಲಿನ ವಿವಿಧ ಸೈನ್ಯದ ನೆಲೆಯ ಛಾಯಾ ಚಿತ್ರಗಳು ಹಾಗೂ ಶಸ್ತ್ರಾಸ್ತ್ರಗಳು ಮತ್ತು ಅಧಿಕಾರಿ ಇವರ ನೇಮಕದ ಕುರಿತಾದ ಮಾಹಿತಿ ಐ.ಎಸ್.ಐ.ಗೆ ಕಳುಹಿಸಿದ್ದನು.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳ ವಿರುದ್ಧ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಗಲ್ಲು ಶಿಕ್ಷೆ ವಿಧಿಸುವುದಕ್ಕೆ ಪ್ರಯತ್ನಿಸಬೇಕು !