ಶ್ರೀನಗರ (ಜಮ್ಮು-ಕಾಶ್ಮೀರ) – ಜಮ್ಮು-ಕಾಶ್ಮೀರದ ಪೂಂಛನ ಕೃಷ್ಣ ಕಣಿವೆಯೊಳಗೆ ಫೆಬ್ರವರಿ 4 ರಂದು, ಭಾರತೀಯ ಸೇನೆಯು ಪಾಕಿಸ್ತಾನ ಬೆಂಬಲಿತ ನುಸುಳುಖೋರ ಭಯೋತ್ಪಾದಕರನ್ನು ಹತ್ಯೆ ಮಾಡಿತು. ಈ ಪಾಕಿಸ್ತಾನಿ ಭಯೋತ್ಪಾದಕರು ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾಗ ನೆಲಬಾಂಬ್ ಸ್ಫೋಟಗೊಂಡು ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕೊಲ್ಲಲ್ಪಟ್ಟವರಲ್ಲಿ 2-3 ಜನರು ಪಾಕಿಸ್ತಾನಿ ಸೈನಿಕರಾಗಿದ್ದರು ಎಂದು ಸಹ ಹೇಳಲಾಗಿದೆ.