ಪಾಕಿಸ್ತಾನಿ ಮೌಲಾನಾ ವಿಷ ಕಾರಿ ಹೇಳಿಕೆ
(ಮೌಲಾನಾ ಎಂದರೆ ಇಸ್ಲಾಂ ಧರ್ಮದ ಅಭ್ಯಾಸಕ)
ಇಸ್ಲಾಮಾಬಾದ – ಪಾಕಿಸ್ತಾನದ ಪ್ರತಿಯೊಬ್ಬ ನಾಯಕರು ಭಾರತದ ವಿರುದ್ಧ ವಿಷ ಕಾರುವುದರಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಪಾಕಿಸ್ತಾನದ ಕಟ್ಟರವಾದಿ ಇಸ್ಲಾಮಿಸ್ಟ್ ಪಕ್ಷ ‘ಜಮಾತ್-ಇ-ಇಸ್ಲಾಮಿ ಪಾಕಿಸ್ತಾನ್’ ಕೂಡ ಸೇರಿದೆ. ‘ಜಮಾತೆ ಇಸ್ಲಾಮಿ ಪಾಕಿಸ್ತಾನ’ದ ಮುಖ್ಯಸ್ಥ ಹಾಫೀಜ ನಯೀಮ ಉರ್ ರೆಹಮಾನ, ಲಾಹೋರನಲ್ಲಿ ನಡೆದ ಒಂದು ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ “ಕಾಶ್ಮೀರ ಪಾಕಿಸ್ತಾನದ ಜೀವನಾಡಿಯಾಗಿದೆ ಮತ್ತು ಅದನ್ನು ಹಿಂದೂಗಳ ಕೈಯಲ್ಲಿ ಉಳಿಯಲು ನಾವು ಬಿಡುವುದಿಲ್ಲ” ಎಂದು ಹೇಳಿದನು. ಈ ಕಟ್ಟರವಾದಿ ಮೌಲಾನಾ ಭಾರತೀಯ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನದಲ್ಲಿ ಉದ್ದೇಶಿತ ಹತ್ಯೆಗಳನ್ನು ನಡೆಸುತ್ತಿವೆ ಎಂದು ಆರೋಪಿಸಿದನು. ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತ್ಯೇಕಿಸಲು ರಾಜತಾಂತ್ರಿಕ ಪ್ರಯತ್ನಗಳಿಗೆ ಅವನು ಕರೆ ನೀಡಿದನು.
ಹಾಫೀಜ್ ನಯೀಮ್ ಉರ್ ರೆಹಮಾನ ಯಾರು?
ಹಫೀಜ ನಯೀಮ ಉರ್ ರೆಹಮಾನ ಪಾಕಿಸ್ತಾನದ ಕಟ್ಟರವಾದಿ ಮೌಲಾನಾ ಆಗಿದ್ದಾನೆ. ಅವನು ಜಮಾತೆ-ಇ-ಇಸ್ಲಾಮಿ ಎಂಬ ಧಾರ್ಮಿಕ ಮತ್ತು ರಾಜಕೀಯ ಗುಂಪಿನ ಮುಖ್ಯಸ್ಥನೂ ಆಗಿದ್ದಾನೆ. ನಯೀಮ್ ನವೆಂಬರ್ 7, 1973 ರಂದು ಪಾಕಿಸ್ತಾನದ ಹೈದರಾಬಾದನಲ್ಲಿ ಮಧ್ಯಮ ವರ್ಗದ ಉರ್ದು ಮಾತನಾಡುವ ಕುಟುಂಬದಲ್ಲಿ ಜನಿಸಿದನು. 1947 ರ ವಿಭಜನೆಯ ಸಮಯದಲ್ಲಿ ಆ ಕುಟುಂಬವು ಭಾರತದಿಂದ ಸ್ಥಳಾಂತರಗೊಂಡಿತ್ತು. ನಯೀಮ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದಾನೆ.