ಗುಜರಾತ: ಸಮಾನ ನಾಗರೀಕ ಸಂಹಿತೆಗಾಗಿ ಸಮಿತಿಯ ರಚನೆ

ಕರ್ಣಾವತಿ (ಗುಜರಾತ) – ಗುಜರಾತ ರಾಜ್ಯಕ್ಕಾಗಿ ಸಮಾನ ನಾಗರಿಕ ಕಾನೂನು ಸಿದ್ಧಗೊಳಿಸಿ ಅದನ್ನು ಜಾರಿಗೊಳಿಸುವುದಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ರಂಜನ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ೫ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ೪೫ ದಿನಗಳಲ್ಲಿ ರಾಜ್ಯ ಸರಕಾರಕ್ಕೆ ತನ್ನ ವರದಿ ನೀಡಲಿದೆ, ಈ ವರದಿಯ ಆಧಾರದಲ್ಲಿ ಗುಜರಾತ ಸರಕಾರವು ನಿರ್ಣಯ ತೆಗೆದುಕೊಳ್ಳಲಿದೆ ಅಲ್ಲಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಮಾಹಿತಿ ನೀಡಿದರು. ಉತ್ತರಾಖಂಡ ರಾಜ್ಯವು ಸಮಾನ ನಾಗರಿಕ ಕಾನೂನು ಜಾರಿಗೊಳಿಸಿದ ಸ್ವತಂತ್ರ ಭಾರತದ ಮೊಟ್ಟ ಮೊದಲು ರಾಜ್ಯವಾಗಿದೆ.